ಮೈಸೂರು: ಕೇಂದ್ರ ಸರ್ಕಾರ ಕಾಯ್ದೆಯಾಗಿ ಜಾರಿಗೊಳಿಸಲು ಉದ್ದೇ ಶಿಸಿರುವ `ಬಿತ್ತನೆ ಬೀಜಗಳ ಮಸೂದೆ- 2019’ರ ಸಾಧಕ -ಬಾಧಕ ಕುರಿತಂತೆ ಜ.30 ರಂದು ರಾಜ್ಯ ರೈತ ಸಂಘ ಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದ…
‘ಕಾಕನಕೋಟೆ’ ಯಾಗಿ ಮಾರ್ಪಟ್ಟ ದಮ್ಮನಕಟ್ಟೆ ಸಫಾರಿ ಕೇಂದ್ರ
January 28, 2020ಮೈಸೂರು: ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಟ್ಟ ಅಂತರಸಂತೆ ವಲಯದ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ `ಕಾಕನಕೋಟೆ’ ಸಫಾರಿ ಕೇಂದ್ರವೆಂದು ಮರುನಾಮಕರಣ ಮಾಡಲಾಗಿದೆ. ನಾಗರಹೊಳೆ ಅಭಯಾರಣ್ಯ ಈ ಹಿಂದೆ ಕಾಕನಕೋಟೆ ಕಾಡು ಎಂದೇ ಪ್ರಸಿದ್ಧಿ ಪಡೆ ದಿತ್ತು. ರಾಜೀವ್‍ಗಾಂಧಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಎಂದು ನಾಮಕರಣ ವಾದ ನಂತರ, ನಾಗರಹೊಳೆ ಅಭಯಾ ರಣ್ಯ ಜನರ ಮನಸ್ಸಿಂದ `ಕಾಕನಕೋಟೆ ಕಾಡು’ ಎಂಬ ಪದ ಕಣ್ಮರೆಯಾಗಿತ್ತು. ಇತ್ತೀ ಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳ ಹಿರಿಯರನ್ನು ಹೊರತುಪಡಿಸಿದರೆ, ಯುವ ಪೀಳಿಗೆಗೆ…
ಪೌರತ್ವ ತಿದ್ದುಪಡಿ ಕಾಯಿದೆ ಮಹಾತ್ಮ ಗಾಂಧೀಜಿ ಕನಸಾಗಿತ್ತು
January 28, 2020ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಗಾಂಧಿ ಕನಸನ್ನು ಬಿಜೆಪಿ ನನಸು ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. ಸೋಮವಾರ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಸಿಎಎ ಪರವಾದ ಬಿಜೆಪಿ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯಿದೆ-ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ-ಎನ್‍ಆರ್‍ಸಿ ವಿಷಯದಲ್ಲಿ ವಿರೋಧ ಪಕ್ಷಗಳು ದೇಶ ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಧರ್ಮದ ಆಧಾರದಲ್ಲಿ…
ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆಗೀಡಾಗಿದ್ದ ವಾಲೆ ಮಹೇಶ ಸಾವು
January 28, 2020ಆತನ ಕೋರಿಕೆಯಂತೆ ಪುತ್ರಿಗೆ ಪಾರ್ಥಿವ ಶರೀರ ದರ್ಶನ ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ, ಆಕೆಗೆ ಹೆಣ್ಣು ಮಗು ಜನನಕ್ಕೆ ಕಾರಣನಾಗಿ ಪೋಕ್ಸೋ ಪ್ರಕರಣದಡಿ ಜೀವಾ ವಧಿ ಶಿಕ್ಷೆಗೊಳಗಾಗಿದ್ದ ಮೈಸೂರಿನ ವಾಲೆ ಮಹೇಶ (36) ಸೋಮವಾರ ಮುಂಜಾನೆ ಅಸುನೀಗಿದ್ದಾನೆ. 2017ರ ಡಿಸೆಂಬರ್ 21ರಂದು ಮೈಸೂರು ನ್ಯಾಯಾಲಯವು ಆರೋಪಿ ಮಹೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲುವಾಸ ಅನುಭವಿಸುತ್ತಿದ್ದ ಆತ ಕರುಳು ಬೇನೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಗೆಂದು ಪೆರೋಲ್ ಮೇಲೆ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ. ಫೆಬ್ರವರಿ ಮೊದಲ ವಾರ ಮತ್ತೆ ಜೈಲಿಗೆ…
ಮೈಸೂರು ಜಿಲ್ಲಾ ಪೊಲೀಸರಿಂದ ‘ಸುಭಾಹು’ ಇ-ಬೀಟ್ ವ್ಯವಸ್ಥೆ ಜಾರಿ
January 28, 2020ಮೈಸೂರು: ಇದೇ ಪ್ರಥಮ ಬಾರಿ ಮೈಸೂರು ಜಿಲ್ಲಾ ಪೊಲೀಸರು ‘ಸುಭಾಹು’ ನೂತನ ಇ-ಬೀಟ್ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ. ರಾತ್ರಿ ಗಸ್ತು ಚುರುಕುಗೊಳಿಸಿ ಮನೆ ಕಳವು, ದೇವಸ್ಥಾನ ಕಳವು ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ತಾವು ಬಾಗಲ ಕೋಟೆಯಲ್ಲಿದ್ದಾಗ ಅನುಷ್ಠಾನಗೊಳಿಸಿದ ಇ-ಬೀಟ್ ಸುಭಾಹುವನ್ನು ಇದೀಗ ಮೈಸೂರು ಜಿಲ್ಲೆಯಲ್ಲೂ ಜಾರಿಗೊಳಿಸಿದ್ದಾರೆ. ಭಾನುವಾರ ಮೈಸೂರಿನ ಬನ್ನಿ ಮಂಟಪದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನೂತನ…
ಕರೋನಾ ವೈರಸ್ ಆತಂಕ: ಆಸ್ಪತ್ರೆಗೆ ದಾಖಲಾದ ಇಬ್ಬರು ಬೆಂಗಳೂರಿಗರು
January 28, 2020ಬೆಂಗಳೂರು: ಚೀನಾ ಪ್ರವಾಸ ಹೋಗಿದ್ದ ಇಬ್ಬರು ಭಾರತೀಯರನ್ನು ಕರೋನಾ ವೈರಸ್ ಸೋಂಕು ತಗಲಿದ ಶಂಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸರಕಾರಿ ಆಸ್ಪತ್ರೆ ಯೊಂದಕ್ಕೆ ದಾಖಲಿಸಲಾಗಿದೆ. ಚೀನಾಕ್ಕೆ ಪ್ರವಾಸಕ್ಕೆ ತೆರಳಿದ್ದ ಈ ಇಬ್ಬರು ಜ.18ರಂದು ನಗರಕ್ಕೆ ಮರಳಿದ್ದರು. ಭಾನುವಾರ ರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‍ಐವಿ) ಸಂಸ್ಥೆಗೆ ಕಳುಹಿಸಿದ್ದು, ವರದಿಗೆ ಕಾಯಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಚೀನಾದಿಂದ ರಾಜ್ಯಕ್ಕೆ ಬರುತ್ತಿರುವವರ ಮೇಲೆ…
ನ್ಯಾಯಾಲಯ ಜಪ್ತಿ ಆದೇಶ ಹಿಂಪಡೆದ ಹಿನ್ನೆಲೆ: ಜಿಲ್ಲಾಧಿಕಾರಿ ಕಚೇರಿ ವಸ್ತುಗಳು ವಾಪಸ್
January 28, 2020ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಜಪ್ತಿಗೆ ಮುಂದಾದ ಕಂಪನಿಯೊಂದರ ಪ್ರತಿನಿಧಿ ಗಳು, ನ್ಯಾಯಾಲಯ ಆದೇಶ ಹಿಂಪಡೆದ ಹಿನ್ನೆಲೆಯಲ್ಲಿ ಬರಿಗೈಲಿ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ. 2013ರಲ್ಲಿ ಅಟಲ್‍ಜೀ ಜನಸ್ನೇಹಿ ಯೋಜನೆಯಡಿ ಯುಪಿಎಸ್‍ಗಳನ್ನು ಪೂರೈಸಿದ್ದ ಕಂಪನಿಗೆ 3.98 ಲಕ್ಷ ರೂ. ಬಾಕಿ ಹಣ ನೀಡಿರಲಿಲ್ಲ. ಹಾಗಾಗಿ ಕಂಪನಿಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಲೋಕ್ ಅದಾಲತ್‍ನಲ್ಲಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೂಡಲೇ ಹಣ ಪಾವತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ವಸ್ತುಗಳನ್ನು ಜಪ್ತಿ…
ಇಂದಿನ ವಿಜ್ಞಾನ-ತಂತ್ರಜ್ಞಾನದ ಜಗತ್ತು ಅಪನಂಬಿಕೆಯತ್ತ ಸಾಗುತ್ತಿದೆ
January 28, 2020ಮೈಸೂರು: ವಿಜ್ಞಾನ ಹಾಗೂ ತಂತ್ರಜ್ಞಾನದ ನೆರಳಿನಲ್ಲೇ ಇಡೀ ಜಗತ್ತು ಇಂದು ಅಪನಂಬಿಕೆಯತ್ತ ಸಾಗುತ್ತಿದ್ದು, ಕುಟುಂಬ, ಸಂಘ-ಸಂಸ್ಥೆಗಳಲ್ಲಿ ಪರಸ್ಪರ ನಂಬಿಕೆ ಎಂಬ ಮೌಲ್ಯ ಮರೆಯಾಗುತ್ತಿದೆ ಎಂದು ಮೈಸೂರು ವಿವಿ ಕುಲ ಸಚಿವ ಪ್ರೊ.ಆರ್.ಶಿವಪ್ಪ ವಿಷಾದಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಇಎಂಎಂ ಆರ್‍ಸಿ ಸಭಾಂಗಣದಲ್ಲಿ ಯುವ ಪ್ರಗತಿಪರ ಚಿಂತಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭ ದಲ್ಲಿ `ಅರುಣೋದಯ ಎಜುಕೇಷನಲ್ ಅಂಡ್ ಸೋಷಿ ಯಲ್ ಟ್ರಸ್ಟ್’ ಉದ್ಘಾಟಿಸಿ ಅವರು ಮಾತನಾಡಿದರು. ಕಚೇರಿ, ಕಾರ್ಖಾನೆಗಳಲ್ಲಿ ಮೌಲ್ಯಗಳು ಇಲ್ಲದಿ ದ್ದರೂ ಸಿಸಿಟಿವಿ ಕ್ಯಾಮರಾಗಳಿಗೆ ಕೊರತೆ ಇಲ್ಲ…
ರೋಟರಿ ಐವರಿ ಸಿಟಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
January 28, 2020ಮೈಸೂರು: ನಗರದ ರೋಟರಿ ಐವರಿ ಸಿಟಿ, ರೋಟರಿ ಕ್ಲಬ್ ಬೆಂಗಳೂರು, ರೋಟರಿ ಕ್ಲಬ್ ಕೋರಮಂಗಲ, ಬೆಂಗಳೂರು, ಮೆಡಿ ಕಲ್ ಅಂಡ್ ಆಪ್ಟಿಕಲ್ ಏಡ್, ಉಷಾಕಿರಣ ಕಣ್ಣಿನ ಆಸ್ಪತ್ರೆ ಮತ್ತು ಕಾಮಾಕ್ಷಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿ ರವು ಯಶಸ್ವಿಯಾಗಿ ನಡೆಯಿತು. ನಗರದ ಜಯಲಕ್ಷ್ಮಿಪುರಂ ನಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಶಾಲೆಯಲ್ಲಿ ನಡೆದ 4 ದಿನದ ಶಿಬಿರದಲ್ಲಿ ಒಟ್ಟು 1776 ಮಂದಿ ರೋಗಿಗಳು ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂ ಡಿದ್ದು, 1,050ಕ್ಕೂ ಅಧಿಕ ನೇತ್ರ ತಪಾಸಣೆ…
ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ
January 28, 2020ಮೈಸೂರು: ಮೈಸೂರು ಮಹಾನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಎರಡು ಅಧ್ಯಕ್ಷ ಸ್ಥಾನಗಳನ್ನು ಪಡೆದುಕೊಂಡಿವೆ. ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಗೆ ನಿರ್ಮಲಾ ಹರೀಶ್, ಸಾಮಾಜಿಕ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಜೆ.ಗೋಪಿ, ಪÀಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿಗೆ ಸಯ್ಯದ್ ಹಜರತ್ ಉಲ್ಲಾ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಪಲ್ಲವಿ ಬೇಗಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ…










