ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

January 28, 2020

ಮೈಸೂರು: ಮೈಸೂರು ಮಹಾನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಎರಡು ಅಧ್ಯಕ್ಷ ಸ್ಥಾನಗಳನ್ನು ಪಡೆದುಕೊಂಡಿವೆ.

ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿಗೆ ನಿರ್ಮಲಾ ಹರೀಶ್, ಸಾಮಾಜಿಕ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಜೆ.ಗೋಪಿ, ಪÀಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿಗೆ ಸಯ್ಯದ್ ಹಜರತ್ ಉಲ್ಲಾ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಪಲ್ಲವಿ ಬೇಗಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ: ನಿರ್ಮಲಾ ಹರೀಶ್ (ಅಧ್ಯಕ್ಷರು), ಸವಿತಾ ಸುರೇಶ್, ಎನ್.ಸೌಮ್ಯ, ಎಂ.ಲಕ್ಷ್ಮಿ, ಅಕ್ಮಲ್ ಪಾಷಾ, ಸಮೀಉಲ್ಲಾ, ಜಿ.ಎಸ್.ಸತ್ಯರಾಜ್ (ಸದಸ್ಯರು). ಸಾಮಾಜಿಕ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಜೆ.ಗೋಪಿ (ಅಧ್ಯಕ್ಷರು), ಶೋಭಾ, ಭಾಗ್ಯ, ಆಯಾಜ್ ಪಾಷಾ, ಉಷಾ ಎನ್.ನಾರಾಯಣ್ ಲೋಲಪ್ಪ, ಶಾರದಮ್ಮ, ಬಿ.ಭುವನೇಶ್ವರಿ (ಸದಸ್ಯರು). ಪÀಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ: ಸೈಯದ್ ಹಸ್ರತ್ ಉಲ್ಲಾ, (ಅಧ್ಯಕ್ಷರು), ಪೈಲ್ವಾನ್ ಶ್ರೀನಿವಾಸ್, ರುಕ್ಮಿಣಿ ಮಾದೇಗೌಡ, ಹಾಜಿರಾ ಸೀಮಾ, ಸುನಂದಾ ಪಾಲನೇತ್ರ, ಪ್ರಮೀಳಾ ಭರತ್ (ಸದಸ್ಯರು).

ಲೆಕ್ಕಪತ್ರ ಸ್ಥಾಯಿ ಸಮಿತಿ: ಪಲ್ಲವಿ ಬೇಗಂ (ಅಧ್ಯಕ್ಷರು), ಅಶ್ವಿನಿ ಅನಂತು, ಛಾಯಾದೇವಿ, ವೇದಾವತಿ, ಅಯೂಬ್‍ಖಾನ್, ಆರೀಫ್ ಹುಸೇನ್, ಪ್ರದೀಪ್‍ಚಂದ್ರ (ಸದಸ್ಯರು). ಮೇಯರ್ ತಸ್ನೀಂ, ಉಪ ಮೇಯರ್ ಸಿ.ಶ್ರೀಧರ್, ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »