ಇಂದಿನ ವಿಜ್ಞಾನ-ತಂತ್ರಜ್ಞಾನದ ಜಗತ್ತು ಅಪನಂಬಿಕೆಯತ್ತ ಸಾಗುತ್ತಿದೆ
ಮೈಸೂರು

ಇಂದಿನ ವಿಜ್ಞಾನ-ತಂತ್ರಜ್ಞಾನದ ಜಗತ್ತು ಅಪನಂಬಿಕೆಯತ್ತ ಸಾಗುತ್ತಿದೆ

January 28, 2020

ಮೈಸೂರು: ವಿಜ್ಞಾನ ಹಾಗೂ ತಂತ್ರಜ್ಞಾನದ ನೆರಳಿನಲ್ಲೇ ಇಡೀ ಜಗತ್ತು ಇಂದು ಅಪನಂಬಿಕೆಯತ್ತ ಸಾಗುತ್ತಿದ್ದು, ಕುಟುಂಬ, ಸಂಘ-ಸಂಸ್ಥೆಗಳಲ್ಲಿ ಪರಸ್ಪರ ನಂಬಿಕೆ ಎಂಬ ಮೌಲ್ಯ ಮರೆಯಾಗುತ್ತಿದೆ ಎಂದು ಮೈಸೂರು ವಿವಿ ಕುಲ ಸಚಿವ ಪ್ರೊ.ಆರ್.ಶಿವಪ್ಪ ವಿಷಾದಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ಇಎಂಎಂ ಆರ್‍ಸಿ ಸಭಾಂಗಣದಲ್ಲಿ ಯುವ ಪ್ರಗತಿಪರ ಚಿಂತಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭ ದಲ್ಲಿ `ಅರುಣೋದಯ ಎಜುಕೇಷನಲ್ ಅಂಡ್ ಸೋಷಿ ಯಲ್ ಟ್ರಸ್ಟ್’ ಉದ್ಘಾಟಿಸಿ ಅವರು ಮಾತನಾಡಿದರು.

ಕಚೇರಿ, ಕಾರ್ಖಾನೆಗಳಲ್ಲಿ ಮೌಲ್ಯಗಳು ಇಲ್ಲದಿ ದ್ದರೂ ಸಿಸಿಟಿವಿ ಕ್ಯಾಮರಾಗಳಿಗೆ ಕೊರತೆ ಇಲ್ಲ ಎನ್ನು ವಂತಾಗಿದೆ. ನನ್ನ ಬಾಲ್ಯದಲ್ಲಿದ್ದ ಸಮಾಜದ ಸನ್ನಿ ವೇಶಕ್ಕೂ ಇಂದಿನ ಸನ್ನಿವೇಶಕ್ಕೂ ಭಾರೀ ವ್ಯತ್ಯಾಸ ಕಾಣ ಬಹುದು. ಅಂದು ನಂಬಿಕೆ ಆಧಾರಿತ ಸಮಾಜ ನಮ್ಮ ಮುಂದಿತ್ತು. ಆದರೆ ಈಗ ಎಲ್ಲದಕ್ಕೂ ಪುರಾವೆ ಬೇಕು ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಟ್ರಸ್ಟ್‍ನಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾತನಾಡಿ, ದೇಶ ಇಂದು ಎತ್ತ ಸಾಗುತ್ತಿದೆ ಎಂದು ಅವಲೋಕಿಸಿ ದರೆ ಆಘಾತವಾಗುತ್ತದೆ. ನಮ್ಮ ಸಮಾಜದಲ್ಲಿ ಹಿಂಸೆ, ಅತ್ಯಾಚಾರ ದಿನೇ ದಿನೆ ಹೆಚ್ಚಾಗುತ್ತಿದೆ. ದೇಶದಲ್ಲಿ ಶೇ.38ರಷ್ಟು ಯುವಶಕ್ತಿ ಇದ್ದು, ಇದರ ಸದ್ಬಳಕೆ ಮಾತ್ರ ಮರೀಚಿಕೆಯಾಗಿದೆ ಎಂದು ವಿಷಾದಿಸಿದರು.

ನಮ್ಮ ಯುವ ಸಮುದಾಯ ನಿರುದ್ಯೋಗ ಸಮಸ್ಯೆ ಯಿಂದ ಬಳಲುವಂತಾಗಿದೆ. ವಿದ್ಯಾವಂತರಾದರೂ ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲದೆ, ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ಯುವ ಜನರು ನಗರಗಳತ್ತ ವಲಸೆ ಬರುತ್ತಿದ್ದರೆ, ನಗರದಲ್ಲಿರುವ ಪ್ರತಿ ಭಾವಂತ ಯುವ ಸಮುದಾಯ ಉದ್ಯೋಗ ಅರಸಿ ವಿದೇಶಗಳತ್ತ ಮುಖ ಮಾಡುತ್ತಿದೆ. ಹಳ್ಳಿಗಳಲ್ಲಿ ನೆಲೆ ನಿಂತು ಅಲ್ಲಿನ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಆ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಈ ಬಗ್ಗೆ ಅರಿವು ಮೂಡಿಸಬೇಕಿದ್ದು, ಕೌಶಲ್ಯ ಹಾಗೂ ಕೃಷಿ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವ ಡಿಸಬೇಕಿದೆ ಎಂದರು. ಮೈಸೂರು ವಿವಿ ಡಾ.ಬಿ. ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕೆಆರ್ ಆಸ್ಪತ್ರೆ ಜನರಲ್ ಸರ್ಜನ್ ಡಾ.ಎಂ.ರೇವಣ್ಣ, ಟ್ರಸ್ಟ್ ಅಧ್ಯಕ್ಷ ಡಾ.ಬಿ. ಮೂರ್ತಿ, ಯುವ ಪ್ರಗತಿಪರ ಚಿಂತಕರ ಸಂಘದ ಅಧ್ಯಕ್ಷ ಬಿ.ಶಿವಶಂಕರ್ ಮತ್ತಿತರರು ಹಾಜರಿದ್ದರು.

Translate »