ಮೈಸೂರು, ಜ.2(ಎಸ್‍ಬಿಡಿ)- ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹೊಸ್ತಿಲಲ್ಲಿ ಮೈಸೂರು ನಗರ ಪಾಲಿಕೆ ಮೇಯರ್, ಸದಸ್ಯರು ಹಾಗೂ ಆಯುಕ್ತರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಈ ಹಿಂದೆ 2 ವರ್ಷ ಸತತವಾಗಿ ದೇಶದ ಮೊದಲ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದ್ದ ಮೈಸೂರನ್ನು ಮತ್ತೆ ಅಗ್ರ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಸಾರ್ವಜನಿಕರ ಆಶ ಯಕ್ಕೆ ಗುರುವಾರ ಭಾರೀ ಹೊಡೆತ ಬಿದ್ದಿದೆ. ಜ.4ರಿಂದ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಸದಸ್ಯರ ಅಭಿಪ್ರಾಯ, ಸಲಹೆ ಸ್ವೀಕರಿಸಲೆಂದು ಕರೆದಿದ್ದ…
ಪಿಒಕೆ ಗುರಿಯಾಗಿಸಿ ದಾಳಿಗೆ ಸಿದ್ಧ
January 3, 2020ನವದೆಹಲಿ: ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿ ಕೊಂಡು ದಾಳಿ ಮಾಡಲು ಸೇನೆ ಸಿದ್ಧವಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಹೇಳಿದ್ದಾರೆ. ಸುದ್ದಿಗಾರರೊಂ ದಿಗೆ ಮಾತನಾಡಿದ ನರಾವಣೆ ಅವರು, ಆದೇಶ ನೀಡಿದರೆ ಯಾವುದೇ ಕ್ಷಣದಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಸೇನೆ ಸಿದ್ಧವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಉಪಾಯಗಳಿವೆ. ಅಲ್ಲದೆ ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದರು. `ನಮ್ಮ ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರ…
ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ
January 3, 2020ಮೈಸೂರು,ಜ.2(ಆರ್‍ಕೆ)-2019ರ ಏಪ್ರಿಲ್‍ನಿಂದ ಜೂನ್ ಮಾಹೆವರೆಗೆ ನಡೆದ ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 9ನೇ ಸ್ಥಾನ ಪಡೆದಿದೆ. 1 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರ ಪೈಕಿ ಮೈಸೂರು 9ನೇ ಸ್ಥಾನದ ಲ್ಲಿದ್ದು, ಕೇಂದ್ರದ ವಸತಿ ಮತ್ತು ಅರ್ಬನ್ ಅಫೇರ್ಸ್ ಸಚಿವಾಲಯವು ಸ್ವಚ್ಛ ಸರ್ವೇ ಕ್ಷಣೆಯ ಪ್ರಥಮ ಮತ್ತು ದ್ವಿತೀಯ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಇದೇ ಪ್ರಥಮ ಬಾರಿಗೆ ಸಚಿವಾಲ ಯವು ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆ ಯನ್ನು ನಡೆಸಿದ್ದು, ಈವರೆಗೆ ವರ್ಷ ಕ್ಕೊಮ್ಮೆ ಸ್ವಚ್ಛತಾ ಸಮೀಕ್ಷೆ ನಡೆಸುತ್ತಿ…
ಮಂಡ್ಯ ವಿವಿ ವಿಶೇಷಾಧಿಕಾರಿ ಡಾ.ಮಹದೇವ ನಾಯಕ ವಜಾ
January 3, 2020ಮೈಸೂರು, ಜ.2- ಅಧಿಕಾರ ದುರ್ಬಳಕೆ ಮಾಡಿಕೊಂಡು ಹಲವಾರು ಅವ್ಯವ ಹಾರಗಳನ್ನು ನಡೆಸಿರುವ ಆರೋಪದ ಮೇರೆಗೆ ಮಂಡ್ಯ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ. ಎಂ.ಎಸ್.ಮಹದೇವ ನಾಯಕ ಅವರನ್ನು ವಿಚಾರಣೆ ಕಾಯ್ದಿರಿಸಿ, ವಜಾ ಮಾಡಿ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯ-2) ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಮಹೇಶ್ ಆದೇಶ ಹೊರಡಿಸಿದ್ದಾರೆ. ಮಂಡ್ಯ ವಿವಿಯ ವಿಶೇಷಾಧಿಕಾರಿ ಡಾ.ಎಂ.ಎಸ್.ಮಹದೇವ ನಾಯಕ ಅವರು ನಡೆಸಿರುವ ಅವ್ಯವಹಾರಗಳ ಕುರಿತು ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ನೀಡಿದ ದೂರುಗಳನ್ವಯ ಮಂಗಳೂರು ವಿವಿ ವಿಶ್ರಾಂತ…
ಯೇಸು ಪ್ರತಿಮೆ ವಿಚಾರ ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ
January 3, 2020ಬೆಂಗಳೂರು,ಜ.2(ಕೆಎಂಶಿ)-ಯೇಸು ಪ್ರತಿಮೆ ವಿಚಾರದಲ್ಲಿ ಬಿಜೆಪಿ ಏನು ಬೇಕಾ ದರೂ ಮಾಡಲಿ. ಅದು ಭಕ್ತನಿಗೂ, ಭಗವಂತ ನಿಗೂ ಬಿಟ್ಟ ವಿಚಾರ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಪ್ರತಿಮೆಯನ್ನು ಎರಡು ವರ್ಷದ ಹಿಂದೆ ಕಟ್ಟಲು ಹೋದಾಗ ನಾನೇ ಅವರನ್ನು ತಡೆದು ಕಾನೂನುಬದ್ಧವಾಗಿ ಮಾಡುವಂತೆ ಮಾರ್ಗದರ್ಶನ ನೀಡಿದೆ. ನಂತರ ನನ್ನ ಕೈಲಾದ ಸಹಾಯ ನಾನು ಮಾಡಿದೆ. ಉಳಿ ದದ್ದು ಭಕ್ತನಿಗೂ ಹಾಗೂ ಭಗವಂತನಿಗೆ ಬಿಟ್ಟ ವಿಚಾರ ಎಂದು ಇಂದಿಲ್ಲಿ ಸುದ್ದಿಗಾರ ರಿಗೆ ತಿಳಿಸಿದರು. `ರಾಜ್ಯದಲ್ಲಿ ಏನೇನಾಗು ತ್ತಿದೆ ಅಂತಾ ಕೇವಲ…
ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು: ಮೋದಿ
January 3, 2020ಬೆಂಗಳೂರು,ಜ.2-ದೇಶದ ಸಂಪೂರ್ಣ ಬಜೆಟ್ ಖಾಲಿಯಾದರೂ ಸರಿ, ವೈಜ್ಞಾ ನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವು ದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು. ಬೆಂಗಳೂರಿನ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ (ಡಿಆರ್ ಡಿಒ)ದಲ್ಲಿ ಐದು ಯುವ ಪ್ರಯೋಗಾ ಲಯಗಳನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಓರ್ವ ವಿಜ್ಞಾನಿ ತನ್ನ ಸಂಪೂರ್ಣ ಜೀವನವನ್ನು ಮುಡಿ ಪಾಗಿಟ್ಟು ದೇಶಕ್ಕೆ ಕೊಡುಗೆ ನೀಡುತ್ತಾನೆ. ಅಂತಹದರಲ್ಲಿ ದೇಶದ ಖಜಾನೆ ಯಾವ ಲೆಕ್ಕ. ಯುವ ವಿಜ್ಞಾನಿಗಳು ಪ್ರಯೋಗಾಲ ಯಗಳಲ್ಲಿ ನಿರಂತರವಾಗಿ…
ಅಂತರಿಕ್ಷ ಯಾನಕ್ಕೆ ವಾಯುಪಡೆಯ ನಾಲ್ವರು ಪೈಲಟ್‍ಗಳ ಆಯ್ಕೆ: ಇಸ್ರೋ
January 3, 2020ನವದೆಹಲಿ, ಜ.2- ಭಾರತೀಯ ಬಾಹ್ಯಾಕಾಶ ಸಂಸ್ಥೆ 2022ರಲ್ಲಿ ಕೈಗೊಳ್ಳಲಿರುವ ಪ್ರಪ್ರಥಮ ಮಾನವ ಸಹಿತ ಅಂತರಿಕ್ಷ ಯಾನಕ್ಕೆ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್‍ಗಳು ಆಯ್ಕೆಯಾಗಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಶಿವನ್, ಆಯ್ಕೆಯಾದ ನಾಲ್ವರು ಪೈಲಟ್‍ಗಳಿಗೆ ಭಾರತ ಮತ್ತು ರಷ್ಯಾದಲ್ಲಿ ವೈದ್ಯಕೀಯ ತಪಾಸಣೆಗಳನ್ನೂ ಮಾಡಲಾಗಿದೆ. ಅಲ್ಲಿ ಅವರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಅಲ್ಲದೆ, ಮಾನವ ಸಹಿತ ಅಂತರಿಕ್ಷ ಯಾನದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಂತರಿಕ್ಷ ಯಾನಕ್ಕೆ ಆಯ್ಕೆಯಾಗಿರುವ…
ಎಳೆ ಮಕ್ಕಳ ಮುಂದೆ ಕೊಳಕು ರಾಜಕೀಯ ಭಾಷಣ ಮಾಡಿದ ಮೋದಿಯನ್ನು ಆ ಪವಿತ್ರ ನೆಲ ಕ್ಷಮಿಸದು: ಸಿದ್ದರಾಮಯ್ಯ
January 3, 2020ಬೆಂಗಳೂರು,ಜ.2- ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜ ಕೀಯದ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ ಕ್ಷಮಿಸದು ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ. ಸನ್ಮಾನ್ಯ ಯಡಿಯೂರಪ್ಪ ಅವರೇ, ನಿಮ್ಮದೇ ಪಕ್ಷದ ಹಿರಿಯ ನಾಯಕರ ಸಾರಥ್ಯದ ಪತ್ರಿಕೆಯಲ್ಲಿ…
ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ: ಆಂಧ್ರ ಸಿಎಂಗೆ ಟಿಡಿಪಿ ಮಾಜಿ ಶಾಸಕ ಮನವಿ
January 3, 2020ಬೆಂಗಳೂರು, ಜ.2- ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ಎಂಬ ಒತ್ತಾಯ ಆಂಧ್ರಪ್ರದೇಶದಲ್ಲಿಯೇ ಕೇಳಿಬರುತ್ತಿದೆ. ಟಿಡಿಪಿ(ತೆಲುಗು ದೇಶಂ ಪಕ್ಷದ) ಮಾಜಿ ಶಾಸಕ ತಿಕ್ಕಾರೆಡ್ಡಿ ಈ ಒತ್ತಾಯ ಮಾಡಿದ್ದಾರೆ. ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವ ಸರ್ಕಾರದ ಗಮನ ಸೆಳೆದಿದ್ದಾರೆ. ನಮ್ಮ ಆಚರಣೆ, ಸಂಸ್ಕೃತಿ ಎಲ್ಲವೂ ಕೂಡ ಕನ್ನಡದಲ್ಲಿಯೇ ಇವೆ. ಹೀಗಾಗಿ ನಮ್ಮ ಕರ್ನೂಲ್ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಿ, ವಿಶಾಖಪಟ್ಟಣಂಗೆ ಸೇರಿಸಬೇಡಿ. ಹಾಗೊಮ್ಮೆ ಸೇರಿಸಿದರೆ ತುಂಬಾ ಕಷ್ಟವಾಗುತ್ತದೆ ಎಂದು ಆಗ್ರಹಿಸಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೂ ಇದ್ದಾರೆ. ಹೀಗಾಗಿ ಈ ಭೌಗೋಳಿಕ…
ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಲು ನಾಗರಿಕರ ಸಹಕಾರ ಅತ್ಯಗತ್ಯ
January 3, 2020ಮೈಸೂರು,ಜ.2(ಪಿಎಂ)-ಸ್ವಚ್ಛ ಸರ್ವೇಕ್ಷಣ್ 2020ರ ಸಮೀಕ್ಷಾ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರ ಹೊಮ್ಮಲು ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು. ಮೈಸೂರಿನ ತಮ್ಮ ಗೃಹ ಕಚೇರಿಯಲ್ಲಿ ಸ್ವಚ್ಛ ಸರ್ವೇಕ್ಷಣ್ 2020ರ ಸಮೀಕ್ಷಾ ಕಾರ್ಯದ ಹಿನ್ನೆಲೆ ಯಲ್ಲಿ ನಗರಪಾಲಿಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಟಿಜನ್ ಅಲರ್ಟ್ ಟೀಮ್ ಸದಸ್ಯರು ಹಾಗೂ ಇತರೆ ಗಣ್ಯರೊಂದಿಗೆ ಗುರುವಾರ ಚರ್ಚಿ ಸಿದ ನಂತರ ಅವರು ಮಾತನಾಡಿದರು….










