ಮೈಸೂರು,ಜ.2(ವೈಡಿಎಸ್)-ಮುಸ್ಸಂಜೆ ಯಲ್ಲಿ ಅರಮನೆಯ ಝಗಮಗಿಸುವ ಬೆಳಕಿನಲ್ಲಿ ಯುವ ಗಾಯಕ ಶ್ರೀಹರ್ಷ ಅವರ ದೇವರಸ್ತುತಿ, ಜಾನಪದ, ಭಾವ ಗೀತೆಗಳ ರಸದೌತಣದೊಂದಿಗೆ 10 ದಿನ ಗಳ ಮಾಗಿ ಉತ್ಸವಕ್ಕೆ ಗುರುವಾರ ಯಶಸ್ವಿ ತೆರೆಬಿದ್ದಿತು. ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನ ವಾದ ಗುರುವಾರ, `ಹರ್ಷಧ್ವನಿ ಸಂಗೀತ ಸಂಜೆ’ಯಲ್ಲಿ ಗಾಯಕರಾದ ಶ್ರೀಹರ್ಷ, ಸುರಕ್ಷಾದಾಸ್, ಅಖಿಲಾ ಪಜುಮಣು, ಶರದಿ ಪಾಟೀಲ್ ಗಾಯನ ಪ್ರೇಕ್ಷಕರ ಮನತಣಿಸಿತು. ಮೊದಲಿಗೆ ಶ್ರೀಹರ್ಷ ಅವರು ಸಂಸ್ಥಾನ ಗೀತೆ `ಕಾಯೋಶ್ರೀಗೌರಿ ಕರುಣಾ…
ಖಾಸಗೀಕರಣ ವಿರುದ್ಧ ಜ.8ಕ್ಕೆ ಮುಷ್ಕರ
January 3, 2020ಮೈಸೂರು,ಜ.2(ಎಂಕೆ)-ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ವತಿ ಯಿಂದ ಜ.8 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ದಕ್ಷಿಣ ವಲಯ ವಿಮಾ ನೌಕರರ ಒಕ್ಕೂಟದ ಜಂಟಿ ಕಾರ್ಯ ದರ್ಶಿ ಕಾಮ್ರೇಡ್ ಜೆ.ಸುರೇಶ್ ಹೇಳಿದರು. ನಗರದ ಖಾಸಗಿ ಹೊಟೇಲ್‍ನಲ್ಲಿ ಬ್ಯಾಂಕು ಗಳು ಮತ್ತು ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿ ವತಿಯಿಂದ ಆಯೋ ಜಿಸಿದ್ದ ಪೂರ್ವಭಾವಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಮಿಕ ನೀತಿ ಯನ್ನು ದಮನಗೊಳಿಸುತ್ತಿರುವ ಕೇಂದ್ರ ಸರ್ಕಾರದ…
ಜೀತ ಪದ್ಧತಿ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬಹುದು
January 3, 2020ಜೀತದಾಳು ಪದ್ಧತಿ ನಿರ್ಮೂಲನೆ ಕುರಿತು ಅಧಿಕಾರಿಗಳಿಗೆ ತರಬೇತಿ ಮೈಸೂರು,ಜ.2(ಪಿಎಂ)- ಜೀತ ಪದ್ಧತಿ ನಿರ್ಮೂಲನೆಗಾಗಿ ದೂರು ಬಂದರಷ್ಟೇ ಕ್ರಮ ಕೈಗೊಳ್ಳಬೇಕೆಂದಿಲ್ಲ. ಸುಮೊಟೊ (ಸ್ವಯಂ) ದೂರು ದಾಖಲಿಸಿಕೊಳ್ಳುವ ಅವಕಾಶವನ್ನೂ ಕಾನೂನು ಅಧಿಕಾರಿ ಗಳಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾ ಯಿತಿ ಜಂಟಿ ಆಶ್ರಯದಲ್ಲಿ ಜೀತದಾಳು ಪದ್ಧತಿ (ರದ್ದತಿ) ಕಾಯ್ದೆ 1976ರ ಕುರಿತು ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ…
ಫೆ.15ರವರೆಗೂ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧ
January 3, 2020ಮೈಸೂರು,ಜ.2(ಎಂಕೆ)-ಮೈಸೂರು ಮೃಗಾಲಯದ ಮುಂಭಾಗದಲ್ಲಿ ಅಂಡರ್ ಪಾಸ್ ನಿರ್ಮಿಸುತ್ತಿರುವ ಹಿನ್ನೆಲೆ ಜ.2 ರಿಂದ ಫೆ.15ರವರೆಗೆ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯದ ಎದುರಿನ ಶಾಲಿವಾಹನ ರಸ್ತೆಯ ಪಶ್ಚಿಮ ಭಾಗದಲ್ಲಿರುವ ವಾಹನಗಳ ನಿಲುಗಡೆ ಸ್ಥಳದಿಂದ ರಸ್ತೆಯ ಪೂರ್ವ ಭಾಗದಲ್ಲಿರುವ ಮೃಗಾಲಯದ ಆವರಣಕ್ಕೆ ಸಾರ್ವಜನಿಕರ ಸುರಕ್ಷಿತವಾಗಿ ಪ್ರವೇಶಿಸಲು ಅಂಡರ್‍ಪಾಸ್ ನಿರ್ಮಿ ಸಲು ಉದ್ದೇಶಿಸಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರದ ನಿರ್ಬಂಧ: ಶಾಲಿವಾಹನದ ರಸ್ತೆಯಲ್ಲಿ ಅರುಣಾಚಲಂ ಸ್ಟ್ರೀಟ್ ಜಂಕ್ಷನ್‍ನಿಂದ ದಕ್ಷಿಣಕ್ಕೆ ಹೊಸಬೀದಿ 5ನೇ ತಿರುವು…
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ವೈದ್ಯ ಸೇವೆ: ಕೆ.ಆರ್.ಆಸ್ಪತ್ರೆಗೆ ರಾಜ್ಯದಲ್ಲಿ ಎರಡನೇ ಸ್ಥಾನ
January 3, 2020ಮೈಸೂರು, ಜ.2(ಎಂಟಿವೈ)- ಆಯು ಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಮೈಸೂರಿನ ಕೆ.ಆರ್. ಆಸ್ಪತ್ರೆ 11,148 ರೋಗಿಗಳಿಗೆ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ. 2018 ಆಗಸ್ಟ್ ತಿಂಗಳಲ್ಲಿ ಜಾರಿಗೆ ಬಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾ ಟಕ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ಪಡೆಯಲು ವಿವಿಧ ಆಸ್ಪತ್ರೆಗೆ ರೋಗಿಗಳು ಅರ್ಜಿ ಸಲ್ಲಿಸಿದ್ದರು. 2018ನೇ ಸಾಲಿನಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಈ ಯೋಜನೆಯಡಿ 1584 ರೋಗಿಗಳು ಚಿಕಿತ್ಸಾ ಸೌಲಭ್ಯ ಪಡೆದು ಕೊಂಡಿದ್ದರೆ, 2019ನೇ ಸಾಲಿನಲ್ಲಿ 11,148 ಮಂದಿ ಯೋಜನೆಯಿಂದ ಉಪಯೋಗ…
ಹುಣಸೂರಲ್ಲಿ ಮುಂದುವರೆದ ಮಾಜಿ, ಹಾಲಿ ಶಾಸಕರ ವಾಕ್ಸಮರ ಸುಳ್ಳೇ ಮಂಜುನಾಥ್ ಮನೆ ದೇವರು
January 3, 2020ಹುಣಸೂರು: ಸುಳ್ಳನ್ನೇ ಮನೆದೇವರಾಗಿ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಇನ್ನೊಬ್ಬರನ್ನು ತೆಗಳುವುದು ಆರೋಗ್ಯಕರ ಬೆಳವಣಿಗೆ ಯಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ನೂತನ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ಪತ್ರಿಕಾ ಕಚೇರಿಯಲ್ಲಿ ಬುಧ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹೆಚ್.ಪಿ.ಮಂಜುನಾಥ್ ಕ್ಷೇತ್ರದ ಅಭಿವೃದ್ಧಿ ದೃಷ್ಟಿ ಯಿಂದ ಕೆಲಸ ಮಾಡಬೇಕೇ ವಿನಃ `ಬೇರೆಯವರು ಏನೂ ಮಾಡಿಲ್ಲ, ಎಲ್ಲಾ ಅಭಿವೃದ್ಧಿ ನಾನೇ ಮಾಡಿದ್ದು’ ಎಂದು ತಪ್ಪು ಮಾಹಿತಿ ನೀಡಬಾರದು. ಬೇಕಿದ್ದರೆ ನಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ದಾಖಲೆ…
ಇಂದು, ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
January 3, 2020ಮೈಸೂರು, ಜ.2(ಪಿಎಂ)- ಆಶಾ ಕಾರ್ಯ ಕರ್ತೆಯರ ಮಾಸಿಕ ಕನಿಷ್ಠ ಗೌರವಧನ 12 ಸಾವಿರ ರೂ. ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯ ಕರ್ತೆಯರ ಸಂಘದ (ಎಐಯುಟಿಯುಸಿ) ನೇತೃತ್ವ ದಲ್ಲಿ ಜ.3 ಮತ್ತು 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಆಶಾ ಸಾಫ್ಟ್ ಅಥವಾ ಆರ್‍ಸಿಹೆಚ್ ಪೋರ್ಟಲ್‍ಗೆ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಜೋಡಣೆ ರದ್ದುಪಡಿಸಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ…
ಭಾರತದ ಆರ್ಥಿಕ ಹಿನ್ನಡೆ ತಾತ್ಕಾಲಿಕ, ಆತಂಕದ ಅವಶ್ಯಕತೆಯಿಲ್ಲ
January 3, 2020ಮೈಸೂರು,ಜ.2-ಆರ್ಥಿಕ ಹಿನ್ನಡೆ/ಕುಸಿತ ಸಾಮಾನ್ಯ ಸಂಗತಿಯಾಗಿದ್ದು, ಇದು ಭಾರತದ ಆರ್ಥಿಕತೆಗೆ ಬಹುದೊಡ್ಡ ಸವಾಲಾಗಿದೆ. ಆರ್ಥಿಕ ಹಿನ್ನಡೆಯು ಅರ್ಥ ವ್ಯವಸ್ಥೆಯ ದಿಕ್ಕನ್ನು ಬದಲಿಸುವುದರಿಂದ ಅದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವುದು ಅನಿವಾರ್ಯ ವಾಗಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಆರ್ಥಿಕ ಹಿಂಜ ರಿತ ಗೋಚರಿಸಿಲ್ಲ, ಆದರೆ ಆರ್ಥಿಕ ಹಿನ್ನಡೆ ಅನುಭವಿ ಸುತ್ತಿದೆ. ಇದು ತಾತ್ಕಾಲಿಕ ಮಾತ್ರ. ಆತಂಕಕ್ಕೆ ಒಳಗಾಗ ಬೇಕಾದ ಅವಶ್ಯಕತೆಯಿಲ್ಲ. ಆರ್ಥಿಕ ಹಿನ್ನಡೆಯು ನಿಧಾನ ಗತಿಯ ಬೆಳವಣಿಗೆಯ ಸಂಕೇತವಾಗಿರುವುದರಿಂದ ಅವುಗಳನ್ನು ಪತ್ತೆಹಚ್ಚಿ ನಿಯಂತ್ರಿಸಬೇಕಾಗಿದೆ ಎಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ, ವ್ಯವಹಾರ…
ಪವರ್‍ಗ್ರಿಡ್ ಮಾರ್ಗ ಬದಲಿಸದಿದ್ದರೆ ಇಂದು ಉಸ್ತುವಾರಿ ಸಚಿವರ ಕೆಡಿಪಿ ಸಭೆಗೆ ಮುತ್ತಿಗೆ
January 3, 2020ಮೈಸೂರು, ಜ.2(ಆರ್‍ಕೆ)- ಹಿರಿಯೂ ರಿನಿಂದ ಮೈಸೂರು ಮಾರ್ಗದಲ್ಲಿ ಅಳ ವಡಿಸಲುದ್ದೇಶಿಸಿರುವ 440 ಕಿ.ವ್ಯಾ. ಸಾಮ ಥ್ರ್ಯದ ಪವರ್‍ಗ್ರಿಡ್ ಮಾರ್ಗ ಬದಲಿಸಲು ಕ್ರಮ ವಹಿಸದಿದ್ದರೆ ನಾಳೆ (ಜ.3) ಮೈಸೂ ರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಉಸ್ತುವಾರಿ ಸಚಿ ವರ ಕೆಡಿಪಿ ಸಭೆಗೆ ಮುತ್ತಿಗೆ ಹಾಕುವು ದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಪವರ್‍ಗ್ರಿಡ್ ಮಾರ್ಗ ಬದಲಿಸುವಂತೆ ಆಗ್ರಹಿಸಿ 4 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆ ಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…
ಆನ್‍ಲೈನ್ ಪರೀಕ್ಷಾ ಪದ್ಧತಿ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ
January 3, 2020ಮೈಸೂರು, ಜ.2(ಆರ್‍ಕೆ)- ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಐಟಿಐ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಗುರುವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್(ಎಐಡಿವೈಓ) ಜಂಟಿ ಕಾರ್ಯದರ್ಶಿ ಎಸ್.ಸುಮಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಐಟಿಐ ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದ ಮಾದರಿಯ ಲಿಖಿತ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕಲಿಕಾ ಮಟ್ಟವನ್ನು ವಿದ್ಯಾರ್ಥಿಯ ಕೌಶಲ್ಯವನ್ನು ನೋಡಿ ಮೌಲ್ಯಮಾಪನ ಮಾಡಬೇಕೇ ಹೊರತು ಆನ್‍ಲೈನ್ ಮೂಲಕವಲ್ಲ. ಹಾಗೂ…










