ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ತಾಣ ಶಬರಿಮಲೆ ಅಯ್ಯಪ್ಪ ದೇಗಲದಲ್ಲಿ ಮಕರವಿಲಕ್ಕು ಸಂಭ್ರಮ ಮನೆಮಾಡಿದ್ದು, ಅಯ್ಯಪ್ಪನ ದೇಗುಲವನ್ನು ಇಂದು ಸಂಜೆ ಬಳಿಕ ತೆರೆಯಲಾಗಿದೆ. 41 ದಿನಗಳ ಮಂಡಲ ಯಾತ್ರೆ ಮುಗಿದ ಬಳಿಕ ಡಿ.27 ರಂದು ದೇಗುಲಕ್ಕೆ ಬೀಗ ಹಾಕಲಾಗಿತ್ತು. ಮಕರಜ್ಯೋತಿ ಸಂಭ್ರಮ ಹಿನ್ನೆಲೆಯಲ್ಲಿ ಇಂದು ಸಂಜೆ 5ಕ್ಕೆ ಮತ್ತೆ ದೇಗುಲವನ್ನು ತೆರೆಯಲಾಗಿದೆ. ಈಗಾಗಲೇ ಅಯ್ಯಪ್ಪನ ದರ್ಶನಕ್ಕೆ ಅಪಾರ ಸಂಖ್ಯೆ ಭಕ್ತರು ಧಾವಿಸಿದ್ದಾರೆ. ಮುಂಜಾಗ್ರತೆಯಾಗಿ ಬಿಗಿ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ದೇಗುಲದ ಮುಖ್ಯ…
ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಪಡಿಸಲು ಯಡಿಯೂರಪ್ಪ ಪ್ಲಾನ್
December 31, 2019ಬೆಂಗಳೂರು,ಡಿ.30- ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಗೊಳಿಸಲು ಮುಂದಾಗಿದ್ದಾರೆ. ಕೆ.ಆರ್ ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ಗೆಲುವಿನೊಂಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರವರ್ಧಮಾನಕ್ಕೆ ತರಲು ಯೋಜನೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಶಾಸಕರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವ ಮೂಲಕ ಈ…
ಜ.3ರ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು `ಶಿಕ್ಷಕಿಯರ ದಿನಾಚರಣೆ’ ಆಚರಿಸಿ: ಸಚಿವ ಸುರೇಶ್‍ಕುಮಾರ್ ಸೂಚನೆ
December 31, 2019ಬೆಂಗಳೂರು: ಹೊಸ ವರ್ಷದ ಮೂರನೇ ದಿನವೇ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ. ಇಂತಹ ದಿನವನ್ನು ಶಿಕ್ಷಕಿಯರ ದಿನಾಚರಣೆಯಾಗಿ ಆಚರಿಸುವಂತೆ ಸುತ್ತೋಲೆ ಮೂಲಕ ಎಲ್ಲಾ ಶಾಲೆಗಳಿಗೂ ಸೂಚಿಸುವಂತೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. 1831 ಜನವರಿ 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕುಗ್ರಾಮ ದಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟವರು. ಮನೆಯಲ್ಲೇ ಶಾಲೆ ತೆರೆದು ಅಕ್ಷರ ಕ್ರಾಂತಿ ಕಹಳೆ ಊದಿದರು. ಬ್ರಿಟಿಷರಿಂ ದಲೇ ಅತ್ಯುತ್ತಮ ಶಿಕ್ಷಕಿ…
ನೋಟಿಸ್‍ಗೂ ಜಗ್ಗದ ವಾಹನ ಸವಾರರಿಂದ 1.73 ಲಕ್ಷ ರೂ. ದಂಡ ವಸೂಲಿ
December 31, 2019ಮೈಸೂರು,ಡಿ.30(ಎಸ್‍ಪಿಎನ್)-ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಅಂಚೆ ಮೂಲಕ ನೋಟಿಸ್ ನೀಡಿದ್ದರೂ ದಂಡ ಪಾವತಿಸದೇ ಇದ್ದ 1,109 ವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆ ನಡೆಸಿರುವ ಸಂಚಾರ ಪೊಲೀಸರು 1.73 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಡಿ.30ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂ ಘಿಸಿದ ವಾಹನ ಸವಾರರಿಗೆ ಅಂಚೆ ಮೂಲಕ ನೋಟಿಸ್ ನೀಡಿದ್ದರೂ ದಂಡ ಪಾವತಿ ಮಾಡಿರದವರ ಬಗ್ಗೆ ವಿಶೇಷ ತಪಾಸಣೆಯಡಿ ಮನೆಗೆ ಭೇಟಿ ನೀಡಿರುವ ಸಂಚಾರ ಪೊಲೀಸರು, ದಂಡ…
ಪಾಂಡವಪುರ ಟಿಎಪಿಸಿಎಂಎಸ್‍ಗೆ ದೇವೇಗೌಡ ಅಧ್ಯಕ್ಷ
December 31, 2019ಪಾಂಡವಪುರ, ಡಿ.30- ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ನೂತನ ಅಧ್ಯಕ್ಷರಾಗಿ ಎನ್.ಡಿ.ದೇವೇಗೌಡ (ಸುಂದ್ರಣ್ಣ) ಸೋಮವಾರ ಅವಿರೋಧ ವಾಗಿ ಆಯ್ಕೆಯಾದರು. ಒಟ್ಟು 10 ಮಂದಿ ನಿರ್ದೇಶಕರ ಬಲದ ಟಿಎಪಿಸಿಎಂಎಸ್‍ನ ಹಿಂದಿನ ಅಧ್ಯಕ್ಷ ಪ್ರಕಾಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎನ್.ಡಿ. ದೇವೇಗೌಡ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾ ವಣಾಧಿಕಾರಿಯೂ ಆದ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಎನ್.ಡಿ.ದೇವೇಗೌಡ ಆಯ್ಕೆಯಾಗುತ್ತಿದ್ದಂ ತೆಯೇ…
ಸಂತ ಶ್ರೇಷ್ಠ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣನಲ್ಲಿ ಲೀನ
December 30, 2019ಬೆಂಗಳೂರು, ಡಿ.29-ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ (88) ಭಾನುವಾರ ಮುಂಜಾನೆ ಕೃಷ್ಣೈಕ್ಯರಾಗಿದ್ದು, ಇಂದು ರಾತ್ರಿ ಬೆಂಗಳೂರು ವಿದ್ಯಾಪೀಠದ ಆವರಣದ ಬೃಂದಾ ವನದಲ್ಲಿ ಹರಿಯ ದಿವ್ಯಚರಣ ಸೇರಿದರು. ಬೆಂಗಳೂರಿನ ವಿದ್ಯಾಪೀಠದಲ್ಲಿ ಮಾಧ್ವ ಸಂಪ್ರದಾಯ ದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾ ಯಿತು. ಪಾರ್ಥಿವ ಶರೀರಕ್ಕೆ ಸ್ನಾನ ಮಾಡಿಸಿ ಮುದ್ರಾಧಾರಣೆ, ಗೋಪಿಚಂದನ ಲೇಪಿಸಲಾಯಿತು. ನಂತರ ಶ್ರೀಗಳಿಗೆ ಹೊಸಬಟ್ಟೆ ತೊಡಿಸಿ, ತುಳಸಿ ಮಾಲೆ ಹಾಕಿ ಅಲಂಕಾರ ಗೊಳಿಸಲಾಯಿತು. ನಂತರ…
ಪ್ರಧಾನಿ ಮೋದಿ ಸಂತಾಪ
December 30, 2019ನವದೆಹಲಿ: ಪೇಜಾವರ ಮಠದ ಹಿರಿಯ ಯತಿಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪೇಜಾ ವರ ಶ್ರೀಗಳು ಮಾರ್ಗದರ್ಶಿ ಬೆಳ ಕಾಗಿ ಲಕ್ಷಾಂತರ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಓಂ ಶಾಂತಿ ಎನ್ನುವ ಮೂಲಕ ಮೋದಿ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ವಿದೇಶಾಂಗ ಸಚಿವ ಎಸ್.ಎಂ….
ಶ್ರೀಗಳ 9 ದಿನಗಳ ಜೀವನ್ಮರಣ ಹೋರಾಟ ಅಂತ್ಯ
December 30, 2019ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲು ತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (88) ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿ, ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ ಉಸಿರು ಚೆಲ್ಲಿದರು. ಡಿಸೆಂಬರ್ 19ರಂದು ರಾತ್ರಿ 9.30ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿ ಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ನ್ಯುಮೋನಿಯಾ ಇದೆ, ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಸೂಚಿಸಿದರೂ ಶ್ರೀಗಳು ಅಲಕ್ಷಿಸಿದರು. ಬೆಳಿಗ್ಗೆ ಬೇಗ ದೇವರ ಪೂಜೆ ಮುಗಿಸಿ ಬರುತ್ತೇನೆ ಎಂದು…
ವೇಣುಪಾತ್ರೆಯಲ್ಲಿ ಶ್ರೀಗಳ ಪಾರ್ಥಿವ ಶರೀರ!
December 30, 2019ಉಡುಪಿ, ಡಿ.29- ಮಾಧ್ವ ಸಂಪ್ರದಾಯ ಪ್ರಕಾರ, ಯತಿಗಳ ಪಾರ್ಥಿವ ಶರೀರವನ್ನು ಶಯನ (ಮಲಗಿಸುವುದು) ಸ್ಥಿತಿಯಲ್ಲಿ ಇರಿಸುವಂತಿಲ್ಲ. ಬೃಂದಾವನ ನಿರ್ಮಾಣದ ವೇಳೆ ಯತಿಗಳನ್ನು ಪೂಜಾ ಸ್ಥಿತಿಯಲ್ಲಿ ಕೂತಂತೆಯೇ ಮಣ್ಣು ಮಾಡಲಾಗುತ್ತದೆ. ಹೀಗಾಗಿ ಅಂತಿಮಯಾತ್ರೆಯ ವೇಳೆಯು ಅವರನ್ನು ಕುಳಿತ ಸ್ಥಿತಿಯಲ್ಲೇ ಇರಿಸಲಾಗುತ್ತದೆ. ಹೀಗೆ ಯತಿಗಳಿಗೆ ಅಂತಿಮ ಯಾತ್ರೆಯ ವೇಳೆ ಚಟ್ಟ ಬಳಸುವ ಪದ್ಧತಿ ಇಲ್ಲ. ಬದಲಾಗಿ ವೇಣು ಪಾತ್ರೆ (ಬುಟ್ಟಿ)ಯಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯುವುದು ವಾಡಿಕೆ. ಚಟ್ಟದಲ್ಲಿ ಸಾಮಾನ್ಯವಾಗಿ ಬಿದಿರು ಹಾಗೂ ಕಲ್ಪವೃಕ್ಷ್ಯದ ಗರಿಗಳನ್ನು ಬಳಸಲಾಗುತ್ತದೆ. ಇಲ್ಲಿ ಬಿದಿರನ್ನು ಬಳಸುವುದು,…
ವರ್ಷಾರಂಭದಲ್ಲಿ ಸಿದ್ದಗಂಗಾ ಶ್ರೀ, ವರ್ಷಾಂತ್ಯದಲ್ಲಿ ಪೇಜಾವರ ಶ್ರೀ
December 30, 2019ಮೈಸೂರು,ಡಿ.29- ಇನ್ನೆರಡು ದಿನ ಕಳೆದರೆ ಹೊಸ ವರ್ಷ ಆರಂಭಗೊಳ್ಳುತ್ತದೆ. ಅಲ್ಲಿಗೆ 2019 ಇನ್ನೇನು ಕೊನೆಗೊಳ್ಳಲಿದೆ ಎನ್ನುವಾಗಲೇ ಇಬ್ಬರು ಸಂತ ಶ್ರೇಷ್ಠರ ನಿರ್ಗಮನವಾಗಿದೆ. ಈ ವರ್ಷದ ಆರಂಭದಲ್ಲಿ (ಜನವರಿ 21) ನಡೆದಾಡುವ ದೇವರೆಂದೇ ಪರಿಗಣಿತರಾಗಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದರು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವರ್ಷಾಂತ್ಯದಲ್ಲಿ ಹರಿ ಪಾದ ಸೇರಿದ್ದಾರೆ. 2019ನೇ ವರ್ಷ ಧಾರ್ಮಿಕ ಕ್ಷೇತ್ರದ ಅಪ್ರತಿಮರನ್ನಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದ ಮೇರು ವ್ಯಕ್ತಿತ್ವಗಳು, ಉತ್ತಮ ಅಧಿಕಾರಿ ಗಳೆನಿಸಿಕೊಂಡಿದ್ದವರು, ಹೆಸರಾಂತ ಉದ್ಯಮಿಗಳಿಗೂ ಸಾವನ್ನು ತೋರಿದ ವರ್ಷ. ಧಾರ್ಮಿಕ:…










