ಶಬರಿಮಲೆಯಲ್ಲಿ ಜ.21ರವರೆಗೆ ಅಯ್ಯಪ್ಪನ ದರ್ಶನ
ಮೈಸೂರು

ಶಬರಿಮಲೆಯಲ್ಲಿ ಜ.21ರವರೆಗೆ ಅಯ್ಯಪ್ಪನ ದರ್ಶನ

December 31, 2019

ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ತಾಣ ಶಬರಿಮಲೆ ಅಯ್ಯಪ್ಪ ದೇಗಲದಲ್ಲಿ ಮಕರವಿಲಕ್ಕು ಸಂಭ್ರಮ ಮನೆಮಾಡಿದ್ದು, ಅಯ್ಯಪ್ಪನ ದೇಗುಲವನ್ನು ಇಂದು ಸಂಜೆ ಬಳಿಕ ತೆರೆಯಲಾಗಿದೆ. 41 ದಿನಗಳ ಮಂಡಲ ಯಾತ್ರೆ ಮುಗಿದ ಬಳಿಕ ಡಿ.27 ರಂದು ದೇಗುಲಕ್ಕೆ ಬೀಗ ಹಾಕಲಾಗಿತ್ತು. ಮಕರಜ್ಯೋತಿ ಸಂಭ್ರಮ ಹಿನ್ನೆಲೆಯಲ್ಲಿ ಇಂದು ಸಂಜೆ 5ಕ್ಕೆ ಮತ್ತೆ ದೇಗುಲವನ್ನು ತೆರೆಯಲಾಗಿದೆ. ಈಗಾಗಲೇ ಅಯ್ಯಪ್ಪನ ದರ್ಶನಕ್ಕೆ ಅಪಾರ ಸಂಖ್ಯೆ ಭಕ್ತರು ಧಾವಿಸಿದ್ದಾರೆ. ಮುಂಜಾಗ್ರತೆಯಾಗಿ ಬಿಗಿ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ದೇಗುಲದ ಮುಖ್ಯ ಅರ್ಚಕ ಎ.ಕೆ. ಸುಧೀರ್ ನಂಬೂದರಿ ಬಾಗಿಲು ತೆರೆದು, 18 ಮೆಟ್ಟಿಲುಗಳ ಪೂಜಾ ವಿಧಿವಿಧಾನ ಗಳನ್ನು ನಡೆಸಿದ ಬಳಿಕ ಅಯ್ಯಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಜ.15ರಂದು ಮಕರ ಸಂಕ್ರಮಣ ಪೂಜಾ ನಡೆಯಲಿದ್ದು, ದೇಗುಲದಲ್ಲಿ ಭಕ್ತರಿಗೆ ಜ.21ರವರೆಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Translate »