ಮೈಸೂರು,ಡಿ.23-ಮೈಸೂರಲ್ಲಿ ಬಹು ಬೆಲೆ ಬಾಳುವ ಐಷಾರಾಮಿ ನಾಯಿಗಳ ಅಪಹರಣ ಹೆಚ್ಚಾಗುತ್ತಿದ್ದು, ನಮ್ಮ ನಾಯಿ ಕಳೆದಿದೆ, ಎಲ್ಲೂ ಕಾಣ್ತಿಲ್ಲ, ಎಲ್ಲಿ ಹೋಯ್ತೊ? ಎಂಬ ಪ್ರಶ್ನೆಗಳನ್ನು ಮಾಲೀಕರು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ ಅದಕ್ಕೆ ಮಾಲೀ ಕರಿಗೆ ಸರಿಯಾದ, ಸಮಂಜಸವಾದ ಉತ್ತರ ದೊರಕುತ್ತಿಲ್ಲ. ಅಕ್ರಮ ಸಂತಾನೋತ್ಪತ್ತಿಗಾಗಿ ತಮ್ಮ ನಾಯಿಗಳನ್ನು ಕಳವು ಮಾಡಿರಬಹುದು ಎಂದು ಮಾಲೀಕರು ಆತಂಕಗೊಂಡಿದ್ದಾರೆ. ಇಂತಹ ಕೃತ್ಯಗಳು ಮೈಸೂರು, ಕೊಡಗು, ಬೆಂಗಳೂರು ಮತ್ತು ಊಟಿಗಳಲ್ಲಿ ಹೆಚ್ಚಾಗುತ್ತಿವೆ. ಅಕ್ರಮ ಸಂತಾನೋತ್ಪತ್ತಿಗಾಗಿ ಪೆಡಿಗ್ರೀ ನಾಯಿ ಗಳಿಗೆ ಬೇಡಿಕೆ ಹೆಚ್ಚಾಗಿದೆ….
ಸೌಕರ್ಯ ನೀಡಿದರೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಕುಸಿತ
December 24, 2019ಮೈಸೂರು,ಡಿ.23(ಎಂಟಿವೈ)- ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದರೂ ಫಲಿತಾಂಶದ ಪ್ರಮಾಣ ಕುಸಿಯುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯ ಬಳಸಿಕೊಂಡು ಉತ್ತಮ ಫಲಿ ತಾಂಶ ನೀಡಬೇಕು. ಇದಕ್ಕೆ ಬೋಧಕ ವರ್ಗದ ಶ್ರಮ ಅಗತ್ಯ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿ ಉದ್ಘಾಟನೆ ಹಾಗೂ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೇಕಾದ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆ ಗಳನ್ನು…
ಕೊಡಗು ಮಾಡೆಲ್ ಸ್ಕೂಲ್‍ನಲ್ಲಿ ವಿಜ್ಞಾನ, ಕಲಾ ಪ್ರದರ್ಶನ
December 24, 2019ಮೈಸೂರು, ಡಿ.23- ಮೈಸೂರಿನ ವಿದ್ಯಾ ಶಂಕರ ಬಡಾವಣೆಯಲ್ಲಿರುವ ಕೊಡಗು ಮಾಡೆಲ್ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ಮತ್ತು ಕಲಾ ಪ್ರದರ್ಶನವನ್ನು ಏರ್ಪಡಿ ಸಲಾಗಿತ್ತು. ಆಲನಹಳ್ಳಿಯ ಕ್ಲಸ್ಟರ್ ಮುಖ್ಯಸ್ಥ ಮಹದೇವಸ್ವಾಮಿ ದೀಪ ಬೆಳಗಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕೊಡಗು ವಿದ್ಯಾಸಂಸ್ಥೆಯ ಶೈಕ್ಷಣಿಕ ಕಾರ್ಯಕಾರಿ ಮಂಡಳಿಯ ಸದಸ್ಯೆ ಶ್ರೀಮತಿ ನೈನಾ ಅಚ್ಚಪ್ಪ, ಶ್ರೀಮತಿ ರ್ಯಾಲಿ ಗಣಪತಿ ಮತ್ತು ವಿನು ಪೂವಯ್ಯ, ಶ್ರೀ ಕಾವೇರಿ ಕೊಡವ ಅಸೋಸಿಯೇಷನ್‍ನ ಕಾರ್ಯಕಾರಿ ಮಂಡಳಿಯ ಸದಸ್ಯರು ಈ ವೇಳೆ ಹಾಜರಿದ್ದು, ಕಲೆ ಮತ್ತು ಕ್ರೀಡಾ ಕೊಠಡಿಗಳನ್ನು…
ಪ್ಯಾರಾ ಮೆಡಿಕಲ್ ಸೇವೆ ವೈದ್ಯರ ಸೇವೆಗೆ ಸಮ
December 24, 2019ಮೈಸೂರು,ಡಿ.23- ಪ್ಯಾರಾ ಮೆಡಿಕಲ್ ವೈದ್ಯಕೀಯ ಸೇವೆ ವೈದ್ಯರಿಗೆ ಸರಿಸಮ ವಾದ ಸೇವೆಯಾಗಿದ್ದು, ವೈದ್ಯರ ಚಿಕಿತ್ಸೆ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಸಲಹೆಯನ್ನು ಅವಲಂಬಿಸಿರುವುದರಿಂದ ಇವರುಗಳ ಸೇವೆ ಬಹು ಉತ್ಕøಷ್ಟ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ದಾಸ್ತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಸೋಮವಾರ ಏರ್ಪ ಡಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ಯಾರಾ…
ಮೈಸೂರಲ್ಲಿ ಜೆಡಿಎಸ್ ಕಾರ್ಯಕರ್ತರ ಧರಣಿ
December 24, 2019ಮೈಸೂರು,ಡಿ.23(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೂಕ್ಷ್ಮ ವಿಚಾರಗಳ ಸಂಬಂಧ ದೇಶದಾದ್ಯಂತ ಹೊಸ ಕಾಯ್ದೆ ರೂಪಿಸುವಾಗ ಅಥವಾ ಇರುವ ಕಾಯ್ದೆಯನ್ನು ತಿದ್ದುಪಡಿ ಮಾಡುವಾಗ ಮೊದಲು ಜನರಿಗೆ ಅದರ ಅನುಕೂಲ-ಅನಾನುಕೂಲ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಿ ನಾಗರಿಕರ ವಿಶ್ವಾಸ…
ಮತ್ತೊಂದು ಬ್ಯಾಂಕ್ ಮುಷ್ಕರಕ್ಕೆ ಸಿದ್ಧರಾಗಿ!
December 24, 2019ನವದೆಹಲಿ: ಪ್ರಮುಖ ಬೆಳ ವಣಿಗೆ ಯಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಒಕ್ಕೂಟಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿವೆ. ಹೊಸ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಮುಷ್ಕರದ ಬಿಸಿ ಮುಟ್ಟಲಿದ್ದು, 2020ರ ಜ.8ರಂದು ಕೇಂದ್ರ ಕಾರ್ಮಿಕ ಸಂಘಗಳು ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಮತ್ತು ಉದ್ಯೋಗ ಭದ್ರತೆ, ಉದ್ಯೋಗ ಸೃಷ್ಟಿ, ಕಾರ್ಮಿಕರ ಮೇಲೆ ಪ್ರತಿ ಕೂಲ ತಿದ್ದುಪಡಿ ಕಾನೂನುಗಳು ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು 10 ಕೇಂದ್ರ…
ಕೆರೆ ಪುನರುಜ್ಜೀವನಗೊಳಿಸುವುದು ಜನಹಿತ ಕಾರ್ಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಕಾಗಿನೆಲೆ ಶ್ರೀ ಶಿವಾನಂದಪುರಿ ಸ್ವಾಮೀಜಿ ಶ್ಲಾಘನೆ
December 24, 2019ಮೈಸೂರು,ಡಿ.23(ಆರ್‍ಕೆಬಿ)- `ನಮ್ಮೂರು-ನಮ್ಮ ಕೆರೆ’ ಹೆಸರಿನಲ್ಲಿ ಕೆರೆ ಗಳನ್ನು ಪುನರುಜ್ಜೀವನಗೊಳಿಸುವ ಮಹತ್ವದ ಕಾರ್ಯದ ಜೊತೆಗೆ ಊರಿನ ಜನರಿಗೆ ಕೆರೆಯ ಮಹತ್ವವನ್ನು ತಿಳಿಸಿಕೊಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೈಗೊಂಡಿರುವ ಕಾರ್ಯ ವನ್ನು ಕಾಗಿನೆಲೆ ಕನಕ ಗುರುಪೀಠ ಮಹಾ ಸಂಸ್ಥಾನ ಮಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿ ಶ್ಲಾಘಿಸಿದರು. ಮೈಸೂರಿನ ಹಿನಕಲ್ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ನನ್ನೇಶ್ವರ ದೇವಸ್ಥಾನದ ದೇವರ ಕೆರೆ ಅಭಿವೃದ್ಧಿ ಪಡಿಸಿ, ಕೆರೆ ಹಸ್ತಾಂತರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿ ದರು. ಕೆರೆಗಳನ್ನು…
ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟ ಕ್ರಿಸ್‍ಮಸ್
December 24, 2019ಮೈಸೂರು,ಡಿ.23(ಆರ್‍ಕೆಬಿ)- ಶಾಂತಿ ಮತ್ತು ಸಾಮರಸ್ಯದ ಸಂದೇಶದ ಹಬ್ಬವಾದ ಕ್ರಿಸ್‍ಮಸ್ ಇಂದು ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟಿದ್ದು, ಈ ಹಬ್ಬ ಕೇವಲ ಕ್ರೈಸ್ತ ಸಮುದಾಯ ಒಂದೇ ಆಚರಿಸುವಂತದ್ದಲ್ಲ. ಎಲ್ಲರೂ ಆಚರಿಸು ವಂಥದ್ದು ಎಂದು ಮೈಸೂರು ಬಿಷಪ್ ಡಾ.ಕೆ.ಎ.ವಿಲಿಯಂ ಇಂದಿಲ್ಲಿ ತಿಳಿಸಿದರು. ಮೈಸೂರಿನ ಫೈವ್‍ಲೈಟ್ ಬಳಿಯಿ ರುವ ಬಿಷಪ್ ಅವರ ಮನೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.25 ದೇವರು ಶಾಂತಿ ಸಮಾಧಾನದ ದೂತರನ್ನಾಗಿ ಯೇಸುವನ್ನು ಕಳುಹಿಸಿದ್ದು, ಯೇಸು ದೇವರ ಪುತ್ರ. 2020 ಎಲ್ಲ ರಿಗೂ ಸುಂದರ ವರ್ಷವಾಗಿದೆ. ಎಲ್ಲರಿಗೂ ಶಾಂತಿ,…
ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸೂಕ್ತ
December 24, 2019ಮೈಸೂರು,ಡಿ.23(ಆರ್‍ಕೆಬಿ)- ಇಂದಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಹೊರತು ಪಡಿಸಿ ಕೃಷಿ ಮಾಡುವುದು ಕಷ್ಟವಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಸರಿಯಾದ ಕ್ರಮ ಎಂದು ಕೃಷಿ ವಿಜ್ಞಾನಿ ಡಾ.ಅರುಣ್ ಬಳ ಮಟ್ಟಿ ಇಂದಿಲ್ಲಿ ರೈತರಿಗೆ ಸಲಹೆ ನೀಡಿದರು. ಮೈಸೂರಿನ ಕರ್ಜನ್ ಪಾರ್ಕ್‍ನ ಡಾ.ಎಂ.ಹೆಚ್.ಮರೀಗೌಡ ಸಭಾಂಗಣ ದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಮೈಸೂರು ಜಿಲ್ಲಾ ಕೃಷಿಕ ಸಮಾಜ, ಮೈಸೂರು ಕೃಷಿ ತಂತ್ರಜ್ಞರ ಸಂಸ್ಥೆ, ಸುತ್ತೂರು ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹನಾ ಸಂಸ್ಥೆ (ಆತ್ಮಾ) ಜಂಟಿಯಾಗಿ…
ವೀರಶೈವ ಅನಾಥಾಲಯದ ಶತಮಾನೋತ್ಸವ ಸಮಾರಂಭ
December 24, 2019ಮೈಸೂರು,ಡಿ.23(ಪಿಎಂ)- ಕರಿಯಣ್ಣರ ಪುತ್ರಿ ವೀರಮ್ಮನವರು ವೀರಶೈವ ಸಮಾ ಜದ ಬಡ ವಿದ್ಯಾರ್ಥಿಗಳು ಊಟ-ವಸತಿ ಹಾಗೂ ಶಿಕ್ಷಣಕ್ಕಾಗಿ ಅಲೆದಾಡುತ್ತಿದ್ದ ಪರಿ ಸ್ಥಿತಿ ಮನಗಂಡು 20ನೇ ಶತಮಾನದಲ್ಲಿ ಸ್ಥಾಪಿಸಿದ ಮೈಸೂರಿನ ವೀರಶೈವ ಅನಾ ಥಾಲಯ ಇಂದು ಸಾವಿರಾರು ಮಂದಿಗೆ ವಿದ್ಯೆ ನೀಡಿ ಜೀವನ ರೂಪಿಸಿಕೊಳ್ಳಲು ನೆರವಾಗಿದೆ ಎಂದು ನಿವೃತ್ತ ಡಿಜಿಪಿ ಎಲ್.ರೇವಣಸಿದ್ದಯ್ಯ ಸ್ಮರಿಸಿದರು. ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ವೀರಶೈವ ಅನಾಥಾಲಯ ಟ್ರಸ್ಟ್ ವತಿಯಿಂದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…










