ಮೈಸೂರು

ಇಂದು ಹಲವೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ಹಲವೆಡೆ ವಿದ್ಯುತ್ ನಿಲುಗಡೆ

December 27, 2019

ಮೈಸೂರು,ಡಿ.26-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 3ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಡಿ.27ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ 66/11 ಕೆ.ವಿ.ಹೆಮ್ಮರಗಾಲ ವ್ಯಾಪ್ತಿಯ ಹೆಮ್ಮರ ಗಾಲ, ಕುಂಬ್ರಳ್ಳಿ, ಮಾಡ್ರಳ್ಳಿ, ಶ್ರೀನಗರ, ಸಿಂಗಾರಿಪುರ, ಗೊಣತಗಾಲ, ಹೆಡತಲೆ, ಭುಜಂಗಯ್ಯನ ಹುಂಡಿ, ಮಲ್ಲ ಹಳ್ಳಿ, ಹಂಪಾಪುರ, ಹಳೇಪುರ ವ್ಯಾಪ್ತಿಯ ಪ್ರದೇಶಗಳು. 66/11ಕೆವಿ ತಾಯೂರು ವ್ಯಾಪ್ತಿಯ ಹಾಗೂ ತಾಯೂರು (ಐiಜಿಣ Iಡಿಡಿigಚಿಣioಟಿ), ಈಶ್ವರಗೌಡನಹಳ್ಳಿ, ವಡ್ಡರಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ ವ್ಯಾಪ್ತಿಯ ಗ್ರಾಮಗಳಲ್ಲಿ ಡಿ.27ರಂದು ಬೆಳಿಗ್ಗೆ…

ಪವರ್‍ಗ್ರಿಡ್ ವಿರೋಧಿಸಿ ಡಿ.30ರಿಂದ ಧರಣಿಗೆ ರೈತ ಸಂಘ ನಿರ್ಧಾರ
ಮೈಸೂರು

ಪವರ್‍ಗ್ರಿಡ್ ವಿರೋಧಿಸಿ ಡಿ.30ರಿಂದ ಧರಣಿಗೆ ರೈತ ಸಂಘ ನಿರ್ಧಾರ

December 27, 2019

ಮೈಸೂರು, ಡಿ.26(ಪಿಎಂ)- ಹಿರಿಯೂರಿನಿಂದ-ಮೈಸೂರಿನವರೆಗಿನ 400 ಕೆವಿ ವಿದ್ಯುತ್ ಪವರ್‍ಗ್ರಿಡ್ ಲೈನ್ ಅನ್ನು ಇಲವಾಲ ಹೋಬಳಿಯ ರೈತರ ತೋಟಗಳ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿ.30ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಭೂಮಿಯ ಮೇಲೆ ಪವರ್…

ಜ.8ರಂದು ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಬೆಂಬಲ
ಮೈಸೂರು

ಜ.8ರಂದು ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಬೆಂಬಲ

December 27, 2019

ಮೈಸೂರು, ಡಿ.26(ಪಿಎಂ)- ಕಾರ್ಮಿಕರಿಗೆ 21 ಸಾವಿರ ರೂ. ಕನಿಷ್ಠ ವೇತನ ನೀಡಬೇಕೆಂಬುದೂ ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು 2020ರ ಜ.8 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿವೆ ಎಂದು ತಿಳಿಸಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಶೇಷಾದ್ರಿ, ಮೈಸೂರು ಜಿಲ್ಲೆಯಲ್ಲೂ ಮುಷ್ಕರ ಯಶಸ್ವಿಗೊಳಿ ಸಲು ಅಂದು ಜಿಲ್ಲೆಯ ಕಾರ್ಮಿಕರು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ
ಮೈಸೂರು

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ

December 27, 2019

ಮೈಸೂರು,ಡಿ.26(ಆರ್‍ಕೆಬಿ)- ಬಿಸಿ ಯೂಟ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿ ಗೊಳಿಸಬೇಕು. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಅಡುಗೆ ತಯಾರಕರು ಮತ್ತು ಸಹಾಯ ಕರನ್ನು ನೇಮಕ ಮಾಡಬೇಕು. ಅಡುಗೆ ತಯಾರಕರು ಹಾಗೂ ಸಹಾಯಕರಿಗೆ ಸಾಮಾಜಿಕ ಭÀದ್ರತೆಯೊಂದಿಗೆ ಆರೋಗ್ಯ ರಕ್ಷಣೆ, ವಿಮೆ, ರಜೆ, ಹೆರಿಗೆ ರಜೆ, ಹೆರಿಗೆ ಭÀತ್ಯೆ, ಪಿಂಚಣಿ ಇನ್ನಿತರೆ ಸೌಲಭÀ್ಯಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಗುರುವಾರ…

ಸಿಪಿಐ ಬೆಂಗಳೂರು ಕಚೇರಿ ಮೇಲಿನ ದಾಳಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಸಿಪಿಐ ಬೆಂಗಳೂರು ಕಚೇರಿ ಮೇಲಿನ ದಾಳಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

December 27, 2019

ಮೈಸೂರು,ಡಿ.26(ಆರ್‍ಕೆಬಿ)-ಬೆಂಗ ಳೂರಿನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಜ್ಯ ಕಚೇರಿ ಮೇಲೆ ನಡೆದ ದಾಳಿ ಸಂಬಂಧ ಸೂಕ್ತ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದು ಎಡಪಕ್ಷಗಳು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು. ಸಿಪಿಐ, ಸಿಪಿಐಎಂ, ಎಸ್‍ಯುಸಿಐ ಇನ್ನಿ ತರ ಎಡಪಕ್ಷಗಳ ಕಾರ್ಯಕರ್ತರು ಪ್ರತಿ ಭಟನೆಯಲ್ಲಿ ಪಾಲ್ಗೊಂಡು, ಬೆಂಗಳೂರಿನ ಸಿಪಿಐ ಕಚೇರಿ ಮೇಲೆ ದಾಳಿ ನಡೆಸಿ ದ್ವಿಚಕ್ರ ವಾಹನ ಹಾಗೂ ಕಚೇರಿ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕøತ್ಯವನ್ನು ಖಂಡಿಸಿದರು….

ಮೈಸೂರಲ್ಲಿ ಮಾಗಿ ಉತ್ಸವ ಅರಮನೆ ಆವರಣದಲ್ಲಿ ಜನಜಾತ್ರೆ:   ಪುಷ್ಪಕಾಶಿಯ ನಡುವೆ ಸಂಭ್ರಮದ ಅಲೆ
ಮೈಸೂರು

ಮೈಸೂರಲ್ಲಿ ಮಾಗಿ ಉತ್ಸವ ಅರಮನೆ ಆವರಣದಲ್ಲಿ ಜನಜಾತ್ರೆ:  ಪುಷ್ಪಕಾಶಿಯ ನಡುವೆ ಸಂಭ್ರಮದ ಅಲೆ

December 26, 2019

ಮೈಸೂರು, ಡಿ.25(ವೈಡಿಎಸ್)-ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, 2ನೇ ದಿನವಾದ ಬುಧವಾರ 45 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು, ಸ್ಥಳೀಯರು ಭೇಟಿ ನೀಡಿ, ವೀಕ್ಷಿಸಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಮೈಸೂರಿಗೆ ವಿಶಿಷ್ಟ ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿ ಸಲು ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಬುಧವಾರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಭೇಟಿ ನೀಡಿ, ನಾನಾ ಬಣ್ಣ-ಬಣ್ಣದ ಹೂವುಗಳಿಂದ ಅಲಂಕರಿಸಿದ್ದ ಕಲಾಕೃತಿಗಳನ್ನು ಕಣ್ತುಂಬಿ ಕೊಂಡರು. ಪ್ರದರ್ಶನದ ಪ್ರಮುಖ ಆಕರ್ಷಣೆಗಳಾದ…

ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರ-ವಿನಿಮಯ
ಮೈಸೂರು

ಕೆ.ಆರ್.ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಚಾರ-ವಿನಿಮಯ

December 26, 2019

ಮುಸ್ಲಿಮರಲ್ಲಿದ್ದ ಅನುಮಾನ, ಆತಂಕ ದೂರ ಮಾಡುವ ಪ್ರಯತ್ನ ಮೈಸೂರು,ಡಿ.25(ಆರ್‍ಕೆಬಿ)- ಇತ್ತೀ ಚಿಗೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಮರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದು ಮಾಡಿದರು. ಅವರ ನೇತೃತ್ವದಲ್ಲಿ ಮೈಸೂ ರಿನ ಗನ್ ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ವಿಚಾರ ವಿನಿಮಯ ಸಭೆಯಲ್ಲಿ ಪೌರತ್ವ ಕಾಯಿದೆ ಯಿಂದ ಮುಸ್ಲಿಂ ಬಂಧುಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ…

ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ
ಮೈಸೂರು

ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ

December 26, 2019

ಮೈಸೂರು,ಡಿ.25(ಪಿಎಂ)- ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ ನೀಡುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘದ 3ನೇ ವಾರ್ಷಿಕೋತ್ಸವ ಉದ್ಘಾಟಿಸಿ, ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗ ಲೆಂದು ಲಕ್ಷ ರೂ. ದೇಣಿಗೆ ನೀಡುತ್ತೇನೆ ಎಂದು ಪ್ರಕಟಿಸಿದರು. ಇದೇ ವೇಳೆ ಸಂಘದಿಂದ…

ದೋಷಗಳಿದ್ದರೆ ಚರ್ಚಿಸಿ; ಕಾಯ್ದೆಯನ್ನೇ ವಿರೋಧಿಸುವುದು ಸಲ್ಲದು
ಮೈಸೂರು

ದೋಷಗಳಿದ್ದರೆ ಚರ್ಚಿಸಿ; ಕಾಯ್ದೆಯನ್ನೇ ವಿರೋಧಿಸುವುದು ಸಲ್ಲದು

December 26, 2019

ಸಿಎಎ ಕುರಿತ ಸಮಾನ ಮನಸ್ಕರ ಸಂವಾದ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಬಸವರಾಜು ಅಭಿಮತ ಮೈಸೂರು, ಡಿ.25(ಎಸ್‍ಪಿಎನ್)- ದೇಶದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಪೌರತ್ವ ತಿದ್ದುಪಡಿ ಕಾಯ್ದೆ’ಯಲ್ಲಿರುವ ಸಣ್ಣ-ಪುಟ್ಟ ಲೋಪಗಳಿಗಾಗಿ, ಕಾಯ್ದೆಯನ್ನೇ ವಿರೋಧ ಮಾಡುವುದು ಸಲ್ಲದು ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಬಸವರಾಜು ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣ ದಲ್ಲಿ ಬುಧವಾರ ಸಮಾನ ಮನಸ್ಕರ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-ಸಂವಿಧಾನ ಉಲ್ಲಂಘನೆ?’ ವಿಷಯವಾಗಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು…

ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆಶಿ
ಮೈಸೂರು

ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆಶಿ

December 26, 2019

ರಾಮನಗರ,ಡಿ.25- ನಾನು ಏನೇ ವಿಶ್ವಮಾನವ ತತ್ವವನ್ನು ಹೇಳಿದರೂ, ನನ್ನ ಲೆಕ್ಕಾಚಾರ, ನನ್ನ ಮಂತ್ರಿ ಮಾಡುವುದು ನಾನು ಒಕ್ಕಲಿಗ ಎಂಬ ಕಾರಣದಿಂದಲೇ. ಅದರಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ. ರಾಮನಗರದಲ್ಲಿಂದು ಒಕ್ಕಲಿಗರ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಹೆಸರು, ಧರ್ಮಗಳನ್ನು ಬದಲಾವಣೆ ಮಾಡಿ ಕೊಳ್ಳಬಹುದು ಆದರೆ ಜಾತಿಯನ್ನು ಬದ ಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಸಮುದಾಯವಾಗಿದೆ ಎಂದರು. ರಾಜ್ಯದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಂದ…

1 735 736 737 738 739 1,611
Translate »