ಸಿಪಿಐ ಬೆಂಗಳೂರು ಕಚೇರಿ ಮೇಲಿನ ದಾಳಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಸಿಪಿಐ ಬೆಂಗಳೂರು ಕಚೇರಿ ಮೇಲಿನ ದಾಳಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

December 27, 2019

ಮೈಸೂರು,ಡಿ.26(ಆರ್‍ಕೆಬಿ)-ಬೆಂಗ ಳೂರಿನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಜ್ಯ ಕಚೇರಿ ಮೇಲೆ ನಡೆದ ದಾಳಿ ಸಂಬಂಧ ಸೂಕ್ತ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದು ಎಡಪಕ್ಷಗಳು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು.

ಸಿಪಿಐ, ಸಿಪಿಐಎಂ, ಎಸ್‍ಯುಸಿಐ ಇನ್ನಿ ತರ ಎಡಪಕ್ಷಗಳ ಕಾರ್ಯಕರ್ತರು ಪ್ರತಿ ಭಟನೆಯಲ್ಲಿ ಪಾಲ್ಗೊಂಡು, ಬೆಂಗಳೂರಿನ ಸಿಪಿಐ ಕಚೇರಿ ಮೇಲೆ ದಾಳಿ ನಡೆಸಿ ದ್ವಿಚಕ್ರ ವಾಹನ ಹಾಗೂ ಕಚೇರಿ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕøತ್ಯವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ಶೇಷಾದ್ರಿ, ಎಡಪಕ್ಷಗಳ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿರುವುದನ್ನು ಸಹಿಸದ ದುಷ್ಕರ್ಮಿ ಗಳು ಸಿಪಿಐ ರಾಜ್ಯ ಮಂಡಳಿ ಕಚೇರಿ ಮೇಲೆ ಡಿ.24ರ ಮಧ್ಯರಾತ್ರಿ ಈ ದುಷ್ಕøತ್ಯ ನಡೆ ಸಿವೆ. ಈ ಹಿಂದೆ ನಡೆದಿರುವ ಕೃತ್ಯಗಳಿಗೂ, ಇಂದಿನ ಕೃತ್ಯಕ್ಕೂ ಸಾಮ್ಯತೆ ಇದ್ದು, ಇದು ಬಿಜೆಪಿ ಬೆಂಬಲಿತ ಸಂಘ ಪರಿವಾರ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರೇ ನಡೆಸಿರುವ ಅನುಮಾನವಿದೆ. ಹಾಗಾಗಿ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ದುಷ್ಕøತ್ಯ ದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾ ರದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹೋರಾಟದಲ್ಲಿ ಸಿಪಿಐ ಸಹ ಭಾಗವಹಿ ಸಿದೆ. ಈ ಹಿಂದೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದ ಹಿನ್ನೆಲೆಯಲ್ಲಿ 2018ರ ಡಿಸೆಂ ಬರ್‍ನಲ್ಲಿ ಮಂಗಳೂರಿನ ಬಂಟ್ವಾಳದಲ್ಲಿ ಸಿಪಿಐ ಪಕ್ಷದ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕಚೇರಿ ನಾಶಕ್ಕೆ ಯತ್ನಿಸಿದ್ದರು. ಇದನ್ನು ಖಂಡಿಸಿ, ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷಿಸಲು ಆಗ್ರಹಿಸಿ ಬಂಟ್ವಾಳದಲ್ಲಿ ಬೃಹತ್ ಪ್ರತಿಭÀಟನಾ ರ್ಯಾಲಿ ನಡೆಸಲಾಗಿತ್ತು. ಆ ವೇಳೆ ಪೆÇಲೀಸ್ ಸಿಬ್ಬಂದಿ ರ್ಯಾಲಿ ನಡೆಸ ದಂತೆ ತಡೆಯಲು ನಮ್ಮ ಪಕ್ಷದ ಕಾರ್ಯ ಕರ್ತರನ್ನೇ ಬೆದರಿಸಿದ್ದರು. ಈ ವಿಚಾರ ವಾಗಿ ಪೆÇಲೀಸ್ ಇಲಾಖೆಗೆ ದೂರು ನೀಡಿ ದ್ದರೂ ದುಷ್ಕರ್ಮಿಗಳನ್ನು ಈವರೆಗೆ ಬಂಧಿ ಸಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ, ಮುಖಂಡರಾದ ಬಸವರಾಜು, ಜಯರಾಂ. ಎಸ್‍ಯುಸಿಐನ ಯಶೋಧÀರ, ಚಂದ್ರಶೇಖರ ಮೇಟಿ, ಸ್ವರಾಜ್ ಇಂಡಿ ಯಾದ ಉಗ್ರ ನರಸಿಂಹೇಗೌಡ, ಅಭಿರುಚಿ ಗಣೇಶ್, ಸುರೇಶ್, ಸೋಮರಾಜೇ ಅರಸ್, ಮಹದೇವಮ್ಮ, ಜಗನ್ನಾಥ್ ಇನ್ನಿತರರಿದ್ದರು.

 

Translate »