ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ
ಮೈಸೂರು

ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ

December 27, 2019

ಮೈಸೂರು,ಡಿ.26(ಆರ್‍ಕೆಬಿ)- ಬಿಸಿ ಯೂಟ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿ ಗೊಳಿಸಬೇಕು. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಅಡುಗೆ ತಯಾರಕರು ಮತ್ತು ಸಹಾಯ ಕರನ್ನು ನೇಮಕ ಮಾಡಬೇಕು. ಅಡುಗೆ ತಯಾರಕರು ಹಾಗೂ ಸಹಾಯಕರಿಗೆ ಸಾಮಾಜಿಕ ಭÀದ್ರತೆಯೊಂದಿಗೆ ಆರೋಗ್ಯ ರಕ್ಷಣೆ, ವಿಮೆ, ರಜೆ, ಹೆರಿಗೆ ರಜೆ, ಹೆರಿಗೆ ಭÀತ್ಯೆ, ಪಿಂಚಣಿ ಇನ್ನಿತರೆ ಸೌಲಭÀ್ಯಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ತಮ್ಮ ಬೇಡಿಕೆಗಳನ್ನು ಈಡೇರಿಸದ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದ ಪ್ರತಿ ಭಟನಾಕಾರರು, ಬಿಸಿಯೂಟ ಯೋಜ ನೆಯ ಖಾಸಗೀಕರಣ ನಿಲ್ಲಿಸಿ, ಲಕ್ಷಾಂತರ ಕೆಲಸಗಾರರಿಗೆ ಜೀವನ ನೀಡಬೇಕು. ಅಡುಗೆ ಕೆಲಸಗಳು ಮುಗಿದ ಬಳಿಕವೂ ಶಾಲೆಯಲ್ಲೇ ಇರುವಂತೆ ಒತ್ತಡ ಹೇರು ವುದನ್ನು ನಿಲ್ಲಿಸಬೇಕು. ಅಡುಗೆಗೆ ಸಂಬಂ ಧಿಸಿದ ಕೆಲಸಗಳನ್ನು ಹೊರತುಪಡಿಸಿ ಇನ್ಯಾವುದೇ ಅನ್ಯ ಕೆಲಸಗಳಿಗೆ ಅಡುಗೆ ಯವರನ್ನು ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ಮೈಸೂರು ಜಿಲ್ಲೆಯಲ್ಲಿ ಕಳೆದ 17 ವರ್ಷ ಗಳಿಂದ 5300ಕ್ಕೂ ಹೆಚ್ಚು ಅಡುಗೆಯವರು ಹಾಗೂ ಅಡುಗೆ ಸಹಾಯಕರು ಸೇವೆ ಸಲ್ಲಿ ಸುತ್ತಿದ್ದು, ಎಲ್ಲರೂ ಕಡು ಬಡತನದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಆದರೆ ಬಿಸಿ ಯೂಟ ಕಾರ್ಮಿಕರಿಗೆ ಕಾರ್ಯಕರ್ತೆಯರು, ಸಮಾಜ ಸೇವಕರು ಎಂಬ ಹೆಸರಿನಲ್ಲಿ ನೀಡುತ್ತಿರುವ 2600 ರೂ. ಗೌರವಧÀನ ಯಾವುದಕ್ಕೂ ಸಾಕಾಗುತ್ತಿಲ್ಲ. ಬೆಲೆ ಏರಿಕೆ, ಶಿಕ್ಷಣದ ವ್ಯಾಪಾರೀಕರಣ, ದುಬಾರಿ ಆರೋಗ್ಯ ಚಿಕಿತ್ಸೆಯನ್ನು ಭರಿಸಲಾಗದೆ ಕುಟುಂಬ ನಿರ್ವಹಿಸುವುದೇ ಕಷ್ಟವಾಗಿದೆ. ಆದ್ದ ರಿಂದ ಬಿಸಿಯೂಟದವರನ್ನು ಕಾರ್ಮಿ ಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯ ವಸತಿ ನಿಲಯ ಹಾಗೂ ವಸತಿ ಶಾಲೆಯ ಅಡುಗೆಯವರು, ಅಡುಗೆ ಸಹಾಯಕರಿಗೆ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಸಬೇಕು. ಬಿಸಿ ಯೂಟ ನೌಕರರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎನ್.ಮುದ್ದುಕೃಷ್ಣ, ಎಐಯು ಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರ ಶೇಖರ ಮೇಟಿ, ಬಿಸಿಯೂಟ ಸಂಘದ ಮುಖಂಡ ಬಸವರಾಜು, ಜಿಲ್ಲಾ ಸಮಿತಿ ಸದಸ್ಯ ದೊಡ್ಡಕಾನ್ಯ ರಾಜು, ಮುಖಂಡ ರಾದ ಗೀತಾ, ಸಣ್ಣ ಮಲ್ಲಿಗೆ ಇನ್ನಿತರರು ಭಾಗವಹಿಸಿದ್ದರು.

Translate »