ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ
ಮೈಸೂರು

ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ

December 26, 2019

ಮೈಸೂರು,ಡಿ.25(ಪಿಎಂ)- ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘಕ್ಕೆ ಲಕ್ಷ ರೂ. ದೇಣಿಗೆ ನೀಡುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘದ 3ನೇ ವಾರ್ಷಿಕೋತ್ಸವ ಉದ್ಘಾಟಿಸಿ, ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗ ಲೆಂದು ಲಕ್ಷ ರೂ. ದೇಣಿಗೆ ನೀಡುತ್ತೇನೆ ಎಂದು ಪ್ರಕಟಿಸಿದರು.

ಇದೇ ವೇಳೆ ಸಂಘದಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂ ಡರ್ ಬಿಡುಗಡೆಗೊಳಿಸಿದ ಎಲ್. ನಾಗೇಂದ್ರ, ನಾನು ಕೂಡ ನನ್ನ ಕ್ಷೇತ್ರದ ಜನತೆಗೆ ಹಂಚಲು 25 ಸಾವಿರ ಕ್ಯಾಲೆಂ ಡರ್ ಮಾಡಿಸಿದ್ದೇನೆ. ಕಾಲ ಹಾಗೂ ಸಮಯದ ಮಾಹಿತಿ ನೀಡುವ ಕ್ಯಾಲೆಂ ಡರ್ ಹಾಗೂ ಗಡಿಯಾರ ನಮ್ಮ ಜೀವನ ದಲ್ಲಿ ಅತ್ಯಂತ ಅಗತ್ಯವಾದವು. ನಿಮ್ಮ ಕ್ಯಾಲೆಂಡರ್‍ನಲ್ಲಿ ಉತ್ತಮವಾದ ಸಂದೇಶ ಗಳು ಮೂಡಿಬಂದಿದ್ದು, ಇವುಗಳನ್ನು ವಾಚಿಸಿದರೆ ಸ್ಫೂರ್ತಿ ಬರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ಪತ್ರಿಕಾರಂಗ ಸಮಾಜ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನನ್ನ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಿಮ್ಮ ಸಂಘದ ಸದಸ್ಯರ ಮಾಹಿತಿ ನೀಡಿದರೆ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಪರಿಗಣಿಸಲಾ ಗುವುದು ಎಂದು ತಿಳಿಸಿದರು.

ಕಳೆದ ವಾರ್ಷಿಕೋತ್ಸವದಲ್ಲಿ ಮಾಜಿ ಶಾಸಕ ವಾಸು ಅವರು ನೀಡಿದ 50 ಸಾವಿರ ರೂ. ದೇಣಿಗೆ ಹಣದ ನಿಶ್ಚಿತ ಠೇವಣಿಯ ಬಡ್ಡಿ ಹಣದಲ್ಲಿ ಎಸ್‍ಎಸ್ ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಎಲ್.ಹೆಚ್.ಪೂಜಾಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಅಲ್ಲದೆ, ಎಸ್‍ಎಸ್‍ಎಲ್‍ಸಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ರುವ ಸಂಘದ ಸದಸ್ಯರ ಮಕ್ಕಳಾದ ಬಿ.ಸಚಿನ್, ಎಸ್.ಚೈತನ್ಯ, ಎಂ.ಹೇಮಂತ್ ಕುಮಾರ್, ಎಲ್.ಉನ್ನತಿ, ಸಿ.ಸೌರವ್, ಎಸ್.ದೀಪ್ತಿ, ಬಿ.ಮಧುಮಿತ, ಆರ್. ರಕ್ಷಿತಾ, ಎಂ.ಯಶ್ವಂತ್, ಎ.ಅರ್ಜುನ್ ತಿವಾರಿ, ಪಿ.ಎನ್.ನಿತಿಶ್, ಎನ್.ಪುಷ್ಪ, ಆರ್.ಅಮೃತ್, ಸಿ.ನಾಗರಾಜ್, ಎಸ್.ದೀಪ ರಾಜು, ಎಸ್.ಭೂಮಿಕಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದ್ವಿತೀಯ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿರುವ ಚೈತ್ರ, ಸ್ನೇಹ, ಕೆ.ರಕ್ಷಿತಾ, ಸಾಗರ್, ಎಂ.ಪ್ರಕೃತಿ, ಆರ್.ಭಾವನ ಅವರಿಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜೊತೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸಂಘದ ಸದಸ್ಯ ಪುಟ್ಟಸ್ವಾಮಿ ಹಾಗೂ ಶೈಕ್ಷಣಿಕ ವೆಚ್ಚದ ಅಗತ್ಯತೆ ಇರುವ ಪತ್ರಿಕಾ ವಿತರಕ ಸಂಜಯ್ ಅವರಿಗೆ ಸಹಾಯ ಧನ ನೀಡ ಲಾಯಿತು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಮಾಜಿ ಶಾಸಕ ವಾಸು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿ ನಿಧಿಗಳ ಸಂಘದ ಅಧ್ಯಕ್ಷ ಬಿ.ಎನ್. ನಾಯಕ್, ಗೌರವಾಧ್ಯಕ್ಷ ಎನ್.ಜನಾ ರ್ಧನ್, ಪ್ರಧಾನ ಕಾರ್ಯದರ್ಶಿ ಎ.ರವಿ, `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಸರಣ ವ್ಯವಸ್ಥಾಪಕ ಟಿ.ಎಸ್.ಗೋಪಿನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »