ಮೈಸೂರು, ನ.21(ಎಂಟಿವೈ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‍ಒಯು)ದಲ್ಲಿ ನಡೆದಿರುವ ಅಕ್ರಮ ಕುರಿತಂತೆ ಈ ಹಿಂದಿನ ನಾಲ್ವರು ಉಪ ಕುಲಪತಿಗಳು, ಹಣಕಾಸು ಅಧಿಕಾರಿ, ರಿಜಿಸ್ಟ್ರಾರ್‍ಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ 5 ಹಾಗೂ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಎರಡು ಪ್ರಕರಣ ಸಲ್ಲಿಕೆಯಾಗಿದೆ. ನಿಯಮ ಗಾಳಿಗೆ ತೂರಿ ವಿವಿಧ ಸಂಸ್ಥೆ ಗಳೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಂಡು ವಿವಿಧೆಡೆ ಕೋರ್ಸ್ ಆರಂಭ, ಪ್ರಾದೇಶಿಕ ಕೇಂದ್ರ ಸ್ಥಾಪನೆ, ಸಿಬ್ಬಂದಿ ನೇಮಕ, ಅಂಕಪಟ್ಟಿ ಮುದ್ರಣ, ಪದವಿ ಪ್ರಮಾಣ ಪತ್ರ ಮುದ್ರಣ ಸೇರಿ ದಂತೆ…
ವಾಯುಮಾಲಿನ್ಯ, ತಂಬಾಕಿನಿಂದ ಬರುವ ಶ್ವಾಸಕೋಶ ಕಾಯಿಲೆ ಕ್ಯಾನ್ಸರ್‍ಗೂ ತಿರುಗಬಹುದು
November 22, 2019ಮೈಸೂರು, ನ.21(ಪಿಎಂ)- ವಾಯುಮಾಲಿನ್ಯ ಹಾಗೂ ತಂಬಾಕು ಸೇವನೆಯಿಂದ ಬರುವ ಶ್ವಾಸಕೋಶ ಸಂಬಂಧಿ ಕಾಯಿಲೆ ಕ್ಯಾನ್ಸರ್‍ಗೂ ತಿರುಗುವ ಸಾಧ್ಯತೆ ಇದೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಎಚ್ಚರಿಸಿದರು. ಮೈಸೂರಿನ ಶಾರದಾವಿಲಾಸ ಔಷಧ ವಿಜ್ಞಾನ ಮಹಾ ವಿದ್ಯಾಲಯದ ವತಿಯಿಂದ ವಿದ್ಯಾಲಯದ ಪ್ರೊ.ಚಿನ್ನಸ್ವಾಮಿ ಶೆಟ್ಟಿ ಸಭಾಂಗಣದಲ್ಲಿ `ವಿಶ್ವ ಸಿಓಪಿಡಿ ದಿನ’ದ ಅಂಗವಾಗಿ `ಲಿವಿಂಗ್ ವೆಲ್ ವಿತ್ ಸಿಓಪಿಡಿ’ ಶೀರ್ಷಿಕೆಯಡಿ ದೀರ್ಘ ಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಓ ಪಿಡಿ) ಕುರಿತಂತೆ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ…
ಕೆಇಬಿ ಮುಸ್ಲಿಂ ನೌಕರರ ಸಂಘದಿಂದ ಮೀಲಾದ್-ಉನ್-ನಬಿ
November 22, 2019ಮೈಸೂರು,ನ.21(ಎಂಕೆ)-ಮೈಸೂರಿನ ಬೆಂಗಳೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಂಕ್ಷನ್ ಹಾಲ್‍ನಲ್ಲಿ ಕೆಇಬಿ ಮುಸ್ಲಿಂ ಎಂಪ್ಲಾಯೀಸ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಮೀಲಾದ್-ಉನ್-ನಬಿ ಆಚರಿಸಲಾಯಿತು. ಧರ್ಮಗುರು ಮಹಮ್ಮದ್ ಸಂಸುಲ್ ಹುದಾ ಚಿಸ್ಟಿ ಸಾಹೇಬ್, ಖುರಾನ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಬಳಿಕ ಮೈಸೂರಿನ ಸರ್ಖಾರ್‍ಜಿ ಹಜರತ್ ಮಹಮ್ಮದ್ ಉಸ್ಮಾನ್ ಷರೀಫ್ ಮಾತನಾಡಿ, ಜಗತ್ತಿನ ಎಲ್ಲೆಡೆ ಶಾಂತಿ ಮತ್ತು ಸದ್ಭಾವನೆ ನೆಲೆಸಬೇಕು. ಯಾವುದೇ ಕಾರ ಣಕ್ಕೂ ನಮ್ಮ ನಡುವೆ ಒಡಕು ಉಂಟಾಗ ಬಾರದು. ನಮಾಜ್ ಮತ್ತು ಮಸೀದಿಗಳಿಗೆ ಭೇಟಿ ನೀಡುವುದನ್ನು ಮರೆತರೂ…
ಜೀವ ಬಹಳ ಅಮೂಲ್ಯ… ಕುಟುಂಬವೂ ಅಷ್ಟೇ ಮುಖ್ಯ… ಹುಷಾರಾಗಿ ಕೆಲಸ ನಿರ್ವಹಿಸಿ
November 22, 2019ಮೈಸೂರು, ನ.21(ಆರ್‍ಕೆಬಿ)- ವಿದ್ಯು ಚ್ಛಕ್ತಿ ಮಂಡಳಿಯಲ್ಲಿ ಲೈನ್‍ಮೆನ್‍ಗಳ ಪಾತ್ರ ಬಹಳ ಮಹತ್ವದ್ದಾಗಿದ್ದು, ಕಂಬ ಹತ್ತಿ ಕೆಲಸ ನಿರ್ವಹಿಸುವಾಗ ಬಹಳ ಹುಷಾರಾಗಿರ ಬೇಕು. ಏಕೆಂದರೆ ಜೀವ ಬಹಳ ಅಮೂಲ್ಯವಾದದ್ದು. ಹೆಂಡತಿ ಮಕ್ಕಳೂ ಸಹ ಅಷ್ಟೇ ಮುಖ್ಯ ಎಂದು ಅಬಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಹೆಚ್.ನಾಗೇಶ್ ಲೈನ್‍ಮೆನ್‍ಗಳಿಗೆ ಸಲಹೆ ನೀಡಿದರು. ಮೈಸೂರಿನ ದಟ್ಟಗಳ್ಳಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ಸಮುದಾಯ ಭವನ ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ, ಕಡಕೊಳದ ಬಳಿಯಿರುವ ಸಂಘದ ಸೂರ್ಯರಾವ್ ಸಭಾಂಗಣದಲ್ಲಿ…
ಆದಿವಾಸಿಗಳು ಸಂಗ್ರಹಿಸುವ ಅರಣ್ಯ ಉತ್ಪನ್ನಗಳಿಗೆ ಸಬ್ಸಿಡಿ ದ್ವಿಗುಣ ಭರವಸೆ
November 22, 2019ಮೈಸೂರು,ನ.21(ವೈಡಿಎಸ್)- ಆದಿ ವಾಸಿಗಳು ಕಾಡಿನಲ್ಲಿ ಸಂಗ್ರಹಿಸುವ ಉತ್ಪನ್ನ ಗಳಿಗೆ ನೀಡುತ್ತಿದ್ದ ಸಹಾಯ ಧನವನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳಲಾಗು ವುದು ಎಂದು ಸಹಕಾರ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಮಹಾ ಮಂಡಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಆರ್ಥಿಕ ನೆರವಿನಿಂದ ನಿರ್ಮಿಸಿರುವ ಜೇನು ಸಂಸ್ಕರಣಾ ಮತ್ತು ಸೀಗೆಪುಡಿ ಘಟಕ, ಗೋದಾಮು ಕೊಠಡಿಗಳನ್ನು…
ಉದ್ಯಾನ್ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಿಸಲು ಸಂಸದ ಪ್ರತಾಪ್ ಸಿಂಹ ಮನವಿ
November 22, 2019ಮೈಸೂರು, ನ.21- ಬೆಂಗಳೂರು-ಮುಂಬೈ ನಡುವಿರುವ ಉದ್ಯಾನ್ ಎಕ್ಸ್‍ಪ್ರೆಸ್ ರೈಲು ಸಂಚಾರವನ್ನು ಮೈಸೂ ರಿಗೆ ವಿಸ್ತರಿಸುವಂತೆ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ, ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದಾರೆ. ಮೈಸೂರಿನ ಪ್ರವಾಸೋದ್ಯ ಮಕ್ಕೆ ಪೂರಕವಾಗಿ ಹಾಗೂ ಭಕ್ತಾಧಿಗಳಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಉದ್ಯಾನ್ ಎಕ್ಸ್‍ಪ್ರೆಸ್ ಸಂಚಾರ ವಿಸ್ತರಣೆ ಅಗತ್ಯವಾಗಿದೆ. ಬೆಂಗಳೂರಿನಿಂದ ಗುಂಟ್ಕಲ್, ಮಂತ್ರಾಲಯ, ರಾಯಚೂರು, ಕಲಬುರ್ಗಿ, ಸೋಲಾಪುರ, ಪುಣೆ ಮಾರ್ಗ ವಾಗಿ ಮುಂಬೈಗೆ ಸಂಚರಿಸುವ ಉದ್ಯಾನ್ ಎಕ್ಸ್‍ಪ್ರೆಸ್ ರೈಲು ಮೈಸೂರಿಗೆ ಬರುವುದರಿಂದ…
ಇಂದಿನಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ವಿಶೇಷ ಕೈಮಗ್ಗ ಮೇಳ-ಸಂಸ್ಕøತಿ
November 22, 2019ಮೈಸೂರು, ನ.21(ಆರ್‍ಕೆಬಿ)- ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ನ.22ರಿಂದ ಡಿ.8ರವರೆಗೆ `ವಿಶೇಷ ಕೈಮಗ್ಗ ಮೇಳ- ಸಂಸ್ಕøತಿ -2019 ಆಯೋಜಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ತಳವಾರ ತಿಳಿಸಿದರು. ನವದೆಹಲಿಯ ಜವಳಿ ಮಂತ್ರಾಲಯ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಮೇಳ-ಸಂಸ್ಕøತಿ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ ಎಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಆಂಧ್ರ್ರ ಪ್ರದೇಶ, ರಾಜ್ಯದ ಚಾಮರಾಜನಗರÀ, ಮಂಡ್ಯ,…
ಕೆನಡಾ ಸಂಪುಟದಲ್ಲಿ ಹಿಂದೂ ಮಹಿಳೆಗೆ ಸಚಿವ ಸ್ಥಾನ
November 22, 2019ಒಟ್ಟಾವಾ, ನ.21- ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೊಸದಾಗಿ ವಿಸ್ತರಿಸಿದ ತಮ್ಮ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ಅನಿತಾ ಇಂದಿರಾ ಆನಂದ್ ಅವರಿಗೆ ಸಚಿವ ಸ್ಥಾನ ಕಲ್ಪಿಸಿದ್ದಾರೆ. ಕೆನಡಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡ ಮೊದಲ ಹಿಂದೂ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಇಂದಿರಾ ಆನಂದ್ ಪಾತ್ರರಾಗಿದ್ದಾರೆ. ಅವರು, ಇತ್ತೀಚೆಗೆ ಕೆನಡಾ ಸಂಸತ್ತಿಗೆ ಆಯ್ಕೆಯಾಗಿ ದ್ದರು. ಇನ್ನು ಕೆನಡಾ ಸಂಪುಟದಲ್ಲಿ ಇನ್ನೂ ಮೂವರು ಇಂಡೋ -ಕೆನಡಿಯನ್ ಮಂತ್ರಿಗಳು ಇದ್ದು ಅವರೆಲ್ಲಾ ಸಿಖ್ಖ್ ಧರ್ಮೀಯರಾಗಿ…
ಕಾಶ್ಮೀರ ಸಂಪೂರ್ಣ ಸ್ಥಗಿತ ಆರೋಪ ತಪ್ಪು, ಅಪ್ರಸ್ತುತ: ಸುಪ್ರೀಂಗೆ ಕೇಂದ್ರ
November 22, 2019ನವದೆಹಲಿ, ನ.21- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಕಾಶ್ಮೀರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪ ತಪ್ಪು ಮತ್ತು ಅಪ್ರಸ್ತುತ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್…
ವಿವಾಹವಾಗುವುದಾಗಿ ನಂಬಿಸಿ ವಿಧವೆ ಚಿನ್ನದ ಸರ ಪಡೆದು ಪರಾರಿ
November 22, 201980 ಸಾವಿರ ವಂಚನೆ ಪ್ರಕರಣ ದಾಖಲು ಮೈಸೂರು,ನ.21(ವೈಡಿಎಸ್)-ಶಾದಿ ಡಾಟ್ ಕಾಂ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ವಿಧವೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, 80 ಸಾವಿರ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ ಪಡೆದು ಪರಾರಿಯಾಗಿರುವ ಘಟನೆ ಮೈಸೂರಲ್ಲಿ ನಡೆದಿದೆ. ಮಹಿಳೆಯೊಬ್ಬರ ಪತಿ ತೀರಿಹೋಗಿದ್ದು, ಜೀವನಾಧಾರಕ್ಕೆ ಮದುವೆಯಾಗಲು ನಿರ್ಧರಿಸಿ ಶಾದಿ ಡಾಟ್ ಕಾಮ್‍ನಲ್ಲಿ ಹೆಸರನ್ನು ನೊಂದಾಯಿಸಿದ್ದರು. ಇದನ್ನು ಗಮನಿ ಸಿದ ವಿನೀತ್‍ರಾಜ್ ಎಂಬಾತ, ಮೊಬೈಲ್ ಮೂಲಕ ಮಹಿಳೆಯನ್ನು ಪರಿಚಯಿಸಿ ಕೊಂಡಿದ್ದಾನೆ. ನಂತರದಲ್ಲಿ ತನ್ನ ಪತ್ನಿಯೂ ಸಾವನ್ನಪ್ಪಿದ್ದು, ನಿಮ್ಮನ್ನು ಮದುವೆಯಾಗು ತ್ತೇನೆ….










