ಕೆಇಬಿ ಮುಸ್ಲಿಂ ನೌಕರರ ಸಂಘದಿಂದ ಮೀಲಾದ್-ಉನ್-ನಬಿ
ಮೈಸೂರು

ಕೆಇಬಿ ಮುಸ್ಲಿಂ ನೌಕರರ ಸಂಘದಿಂದ ಮೀಲಾದ್-ಉನ್-ನಬಿ

November 22, 2019

ಮೈಸೂರು,ನ.21(ಎಂಕೆ)-ಮೈಸೂರಿನ ಬೆಂಗಳೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಂಕ್ಷನ್ ಹಾಲ್‍ನಲ್ಲಿ ಕೆಇಬಿ ಮುಸ್ಲಿಂ ಎಂಪ್ಲಾಯೀಸ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಮೀಲಾದ್-ಉನ್-ನಬಿ ಆಚರಿಸಲಾಯಿತು.

ಧರ್ಮಗುರು ಮಹಮ್ಮದ್ ಸಂಸುಲ್ ಹುದಾ ಚಿಸ್ಟಿ ಸಾಹೇಬ್, ಖುರಾನ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಬಳಿಕ ಮೈಸೂರಿನ ಸರ್ಖಾರ್‍ಜಿ ಹಜರತ್ ಮಹಮ್ಮದ್ ಉಸ್ಮಾನ್ ಷರೀಫ್ ಮಾತನಾಡಿ, ಜಗತ್ತಿನ ಎಲ್ಲೆಡೆ ಶಾಂತಿ ಮತ್ತು ಸದ್ಭಾವನೆ ನೆಲೆಸಬೇಕು. ಯಾವುದೇ ಕಾರ ಣಕ್ಕೂ ನಮ್ಮ ನಡುವೆ ಒಡಕು ಉಂಟಾಗ ಬಾರದು. ನಮಾಜ್ ಮತ್ತು ಮಸೀದಿಗಳಿಗೆ ಭೇಟಿ ನೀಡುವುದನ್ನು ಮರೆತರೂ ಪ್ರೀತಿ ಮಾಡುವುದನ್ನು ಮರೆಯಬೇಡಿ ಎಂದರು.

ಪ್ರೀತಿಸುವಾಗ ನಮ್ಮವನು, ನಮ್ಮ ಜಾತಿ ಯವನು ಎನ್ನದೆ, ಅವನು ನಮ್ಮಂ ತೆಯೇ ಎಂಬ ಒಂದೇ ಭಾವನೆಯಿಂದ ಪ್ರೀತಿಸ ಬೇಕು. ಮಹಮ್ಮದ್‍ರು ತೋರಿದ ದಾರಿಯಲ್ಲಿ ನಡೆದರೆ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ ಎಂದರು.

ವೇದಿಕೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿಯ ಮಾಜಿ ನಿರ್ದೇಶಕ ಅಸಾದ್ ಆರ್. ಶರೀಫ್, ಸೆಸ್ಕ್‍ನ ನಿವೃತ್ತ ತಾಂತ್ರಿಕ ನಿರ್ದೇಶಕ ಅಫ್ತಾಬ್ ಅಹಮದ್, ಕೆಪಿಟಿ ಸಿಎಲ್ ಸಿಎ ಅಬ್ದುಲ್ ಜಾವಿದ್, ಗೆಸ್ಕಾಂನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮುಜೀಬ್ ಅಹಮದ್, ಮಂಗಳೂರಿನ ಶಾಂತಿ ಪ್ರಕಾಶನ ಮುಖ್ಯಸ್ಥ ಮಹಮ್ಮದ್ ಕುನ್ನಿ, ಕೆಇಬಿ ಮುಸ್ಲಿಂ ಎಂಪ್ಲಾಯೀಸ್ ವೆಲ್‍ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶರೀಫ್ ಮಹಮ್ಮದ್, ಅಧ್ಯಕ್ಷ ಶೇಖ್ ಮಹಮ್ಮದ್ ಮಹಿಮುಲ್ಲಾ, ಕಾರ್ಯ ದರ್ಶಿ ಏಸಾಹುಲ್ ಹಖ್, ಆದಿಲ್ ಮತ್ತಿತರರು ಉಪಸ್ಥಿತರಿದ್ದರು.

Translate »