ವಾಯುಮಾಲಿನ್ಯ, ತಂಬಾಕಿನಿಂದ ಬರುವ ಶ್ವಾಸಕೋಶ ಕಾಯಿಲೆ ಕ್ಯಾನ್ಸರ್‍ಗೂ ತಿರುಗಬಹುದು
ಮೈಸೂರು

ವಾಯುಮಾಲಿನ್ಯ, ತಂಬಾಕಿನಿಂದ ಬರುವ ಶ್ವಾಸಕೋಶ ಕಾಯಿಲೆ ಕ್ಯಾನ್ಸರ್‍ಗೂ ತಿರುಗಬಹುದು

November 22, 2019

ಮೈಸೂರು, ನ.21(ಪಿಎಂ)- ವಾಯುಮಾಲಿನ್ಯ ಹಾಗೂ ತಂಬಾಕು ಸೇವನೆಯಿಂದ ಬರುವ ಶ್ವಾಸಕೋಶ ಸಂಬಂಧಿ ಕಾಯಿಲೆ ಕ್ಯಾನ್ಸರ್‍ಗೂ ತಿರುಗುವ ಸಾಧ್ಯತೆ ಇದೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಎಚ್ಚರಿಸಿದರು.

ಮೈಸೂರಿನ ಶಾರದಾವಿಲಾಸ ಔಷಧ ವಿಜ್ಞಾನ ಮಹಾ ವಿದ್ಯಾಲಯದ ವತಿಯಿಂದ ವಿದ್ಯಾಲಯದ ಪ್ರೊ.ಚಿನ್ನಸ್ವಾಮಿ ಶೆಟ್ಟಿ ಸಭಾಂಗಣದಲ್ಲಿ `ವಿಶ್ವ ಸಿಓಪಿಡಿ ದಿನ’ದ ಅಂಗವಾಗಿ `ಲಿವಿಂಗ್ ವೆಲ್ ವಿತ್ ಸಿಓಪಿಡಿ’ ಶೀರ್ಷಿಕೆಯಡಿ ದೀರ್ಘ ಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಓ ಪಿಡಿ) ಕುರಿತಂತೆ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಾಯುಮಾಲಿನ್ಯ ಹಾಗೂ ತಂಬಾಕು ಸೇವನೆಯಿಂದ ಶ್ವಾಸಕೋಶಕ್ಕೆ ಹಾನಿಯಾಗಿ ದೇಹಕ್ಕೆ ಅಗತ್ಯವಾದ ಆಮ್ಲಜನಕ ಕೊರತೆಯಾಗಲಿದೆ. ಹೀಗೆ ಸೋಂಕಿಗೆ ಸಿಲು ಕುವ ಶ್ವಾಸಕೋಶ ನಿಧಾನವಾಗಿ ಕ್ಯಾನ್ಸರ್‍ಗೂ ತುತ್ತಾಗುವ ಸಾಧ್ಯತೆ ಇದೆ ಎಂದರು.

ಶ್ವಾಸಕೋಶ ಎಂಬುದು ವಾಹನದ ಏರ್‍ಫಿಲ್ಟರ್ ಇದ್ದಂತೆ. ಏರ್‍ಫಿಲ್ಟರ್‍ಗೆ ಹಾನಿಯಾದರೆ ಬದಲಿಸಬಹುದು. ಆದರೆ ನಮ್ಮ ಶ್ವಾಸಕೋಶಕ್ಕೆ ಪರ್ಯಾಯವಿಲ್ಲ. ಕೈಗಾರಿಕೆ, ವಾಹನ ಗಳು ಹೊರಸೂಸುವ ಹೊಗೆ ಮತ್ತು ಪ್ಲಾಸ್ಟಿಕ್, ಟೈರ್ ಸೇರಿದಂತೆ ಹಾನಿಕಾರಕ ತ್ಯಾಜ್ಯಗಳಿಗೆ ಬೆಂಕಿ ಹಾಕಿದಾಗ ವಿಷ ಅನಿಲ ಸೂಸಲಿದೆ. ಇದರ ಸೇವನೆ ಶ್ವಾಸಕೋಶದ ಕಾಯಿಲೆಗೆ ಕಾರಣವಾಗಲಿದೆ ಎಂದು ಹೇಳಿದರು.

ತಂಬಾಕು ಸೇವನೆ ಹಾಗೂ ವಿಷ ಅನಿಲ ಸೇವನೆಯ ಪರಿಣಾಮ ತಕ್ಷಣಕ್ಕೆ ಉಂಟಾಗದಿದ್ದರೂ 10 ವರ್ಷಗಳ ಬಳಿಕ ಕಾಣಿಸಿಕೊಳ್ಳಲಿದೆ. ಕಾಯಿಲೆ ಬಂದಾಗ ಪರಿತಪಿ ಸುವ ಬದಲು ಕಾಯಿಲೆ ಬಾರದಂತೆ ಎಚ್ಚರ ವಹಿಸುವ ಅಗತ್ಯವಿದೆ. ಅದಕ್ಕಾಗಿ ಪರಿಸರದಲ್ಲಿ ಶುದ್ಧ ಗಾಳಿ ಇರು ವಂತೆ ನೋಡಿಕೊಳ್ಳಬೇಕು. ಹೀಗಾಗಿ ಮಾನವ ಪರಿಸರ ವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಬೇಕಿದೆ ಎಂದು ಸಲಹೆ ನೀಡಿದ ಅವರು, ಸಾಮಾನ್ಯವಾಗಿ 40 ವರ್ಷ ವಯೋಮಾನದ ಬಳಿಕ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದು ತಿಳಿಸಿದರು.

ಮಕ್ಕಳನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಸುತ್ತುವವರಿ ದ್ದಾರೆ. ಆದರೆ ರಸ್ತೆಯಲ್ಲಿ ಸಾಗುವ ವಾಹನಗಳ ಹೊಗೆ ಪುಟ್ಟ ಮಕ್ಕಳ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟು ಮಾಡು ತ್ತದೆ. ಮಗು ಬೆಳೆದಾಗ ಗಂಭೀರ ಪರಿಣಾಮ ಎದುರಿಸು ವಂತೆ ಆಗುತ್ತದೆ. ಹೀಗಾಗಿ ಮಕ್ಕಳನ್ನು ಹೊರ ಕರೆದೊಯ್ಯುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.

ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹೆಚ್.ಕೆ. ಶ್ರೀನಾಥ್ ಮಾತನಾಡಿ, ಜೀವನ ಶೈಲಿಯೂ ನಮ್ಮ ಆರೋ ಗ್ಯಕ್ಕೆ ಪೂರಕವಾಗಿರಬೇಕು. ಇತ್ತೀಚೆಗೆ ಎಲ್ಲೆಲ್ಲೂ ವಾಯು ಮಾಲಿನ್ಯ ಹೆಚ್ಚುತ್ತಿದೆ. ಸದ್ಯ ಮೈಸೂರು ನಗರ ಸುರಕ್ಷಿತವಾ ಗಿದೆ ಎಂದರು. `ಸಿಓಪಿಡಿ ಕಾಯಿಲೆ’ ಕುರಿತಂತೆ ಪಿಕೆಟಿಬಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹೆಚ್.ಎಂ.ವಿರೂಪಾಕ್ಷ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಡಾ. ಹನು ಮಂತಾಚಾರ್ ಜೋಷಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Translate »