ಮುಕ್ತ ವಿವಿ ವಿಶ್ರಾಂತ ಕುಲಪತಿಗಳು, ಅಧಿಕಾರಿಗಳ ವಿರುದ್ಧ ಎಸಿಬಿ, ಪೊಲೀಸರಲ್ಲಿ ದೂರು ಸಲ್ಲಿಕೆ
ಮೈಸೂರು

ಮುಕ್ತ ವಿವಿ ವಿಶ್ರಾಂತ ಕುಲಪತಿಗಳು, ಅಧಿಕಾರಿಗಳ ವಿರುದ್ಧ ಎಸಿಬಿ, ಪೊಲೀಸರಲ್ಲಿ ದೂರು ಸಲ್ಲಿಕೆ

November 22, 2019

ಮೈಸೂರು, ನ.21(ಎಂಟಿವೈ)- ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‍ಒಯು)ದಲ್ಲಿ ನಡೆದಿರುವ ಅಕ್ರಮ ಕುರಿತಂತೆ ಈ ಹಿಂದಿನ ನಾಲ್ವರು ಉಪ ಕುಲಪತಿಗಳು, ಹಣಕಾಸು ಅಧಿಕಾರಿ, ರಿಜಿಸ್ಟ್ರಾರ್‍ಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ 5 ಹಾಗೂ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಎರಡು ಪ್ರಕರಣ ಸಲ್ಲಿಕೆಯಾಗಿದೆ.

ನಿಯಮ ಗಾಳಿಗೆ ತೂರಿ ವಿವಿಧ ಸಂಸ್ಥೆ ಗಳೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಂಡು ವಿವಿಧೆಡೆ ಕೋರ್ಸ್ ಆರಂಭ, ಪ್ರಾದೇಶಿಕ ಕೇಂದ್ರ ಸ್ಥಾಪನೆ, ಸಿಬ್ಬಂದಿ ನೇಮಕ, ಅಂಕಪಟ್ಟಿ ಮುದ್ರಣ, ಪದವಿ ಪ್ರಮಾಣ ಪತ್ರ ಮುದ್ರಣ ಸೇರಿ ದಂತೆ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆ ದಿರುವ ನಾನಾ ಅಕ್ರಮಗಳ ವಿರುದ್ಧ ದೂರು ದಾಖಲಿಸಲಾಗಿದೆ.

ಈ ಸಂಬಂಧ ವಿವಿಧ ಸಂಘ-ಸಂಸ್ಥೆ ಗಳು ಹೋರಾಟ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ್ದವು. ಯುಜಿಸಿ ನಿಯಮ ಸ್ಪಷ್ಟ ಉಲ್ಲಂ ಘನೆ ಹಿನ್ನೆಲೆಯಲ್ಲಿ ಮುಕ್ತ ವಿವಿಗೆ ಮಾನ್ಯತೆ ರದ್ದು ಮಾಡಲಾಗಿತ್ತು. ಹಿರಿಯ ಅಧಿಕಾರಿ ಗಳು ಮಾಡಿದ ಪ್ರಮಾದದಿಂದಾಗಿ ಲಕ್ಷಾಂ ತರ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿ ದ್ದರು. ಈ ಮಧ್ಯೆ ಹೈಕೋರ್ಟ್ ಮುಕ್ತ ವಿವಿಗೆ ದೂರು ದಾಖಲಿಸುವಂತೆ ನಿರ್ದೇ ಶನ ನೀಡಿತ್ತು. ಕೋರ್ಟ್ ಸೂಚನೆ ಮೇರೆಗೆ ಎಸಿಬಿಯಲ್ಲಿ 5, ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಮುಕ್ತ ವಿವಿ ಮೂಲಗಳು ಸ್ಪಷ್ಟಪಡಿಸಿವೆ.

ಹಿಂದಿನ ಉಪಕುಲಪತಿಗಳಾದ ಪೆÇ್ರ.ಕೆ. ಸುಧಾರಾವ್, ಬಿ.ಎ.ವಿವೇಕ್ ರೈ, ಪೆÇ್ರ.ಕೆ. ಎಸ್.ರಂಗಪ್ಪ, ಪೆÇ್ರ.ಎಂ.ಜಿ. ಕೃಷ್ಣನ್, ಮಾಜಿ ಹಣಕಾಸು ಅಧಿಕಾರಿ ರಾಜಶೇಖರಯ್ಯ, ವಿಶ್ರಾಂತ ಕುಲಸಚಿವರಾದ ಪೆÇ್ರ.ಪಿ.ಎಸ್. ನಾಯಕ್, ಪೆÇ್ರ.ಬಿ.ಎಸ್.ವಿಶ್ವನಾಥ್, ಪೆÇ್ರ.ಕೆ.ಜೆ.ಸುರೇಶ್(ಮೌಲ್ಯಮಾಪನ), ಮಾಹಿತಿ ತಂತ್ರಜ್ಞಾನ ವಿಭಾಗದ ಮಾಜಿ ನಿರ್ದೇಶಕ ಡಾ.ಕಮಲೇಶ್ ಮತ್ತು ಇತರ ಅಧಿಕಾರಿಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುಗಳ ಸ್ವರೂಪ: ಪೆÇ್ರ.ಕೆ.ಸುಧಾ ರಾವ್ ಅವರ ವಿರುದ್ಧ ನೀಡಿರುವ ದೂರಿ ನಲ್ಲಿ, ಸರ್ಕಾರದಿಂದ ಕಾನೂನು ಅಭಿಪ್ರಾಯ ಪಡೆಯದೆ ಖಾಸಗಿ ಸಂಸ್ಥೆಯೊಂದಿಗೆ (ಎಂಒಯು) ಒಡಂಬಡಿಕೆ ಮಾಡಿಕೊಂಡು, ವಿವಿಧ ಕೋರ್ಸ್ ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿ.ಎ.ವಿವೇಕ್ ರೈ ಅವರ ವಿರುದ್ಧವೂ ನಾನಾ ನಿಯಮ ಉಲ್ಲಂಘಿಸಿ ರುವುದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಪೆÇ್ರ.ಕೆ.ಎಸ್.ರಂಗಪ್ಪ ಕೂಡ ನಿಯಮ ಉಲ್ಲಂಘಿಸಿ ವಿವಿಧೆಡೆ 21 ಪ್ರಾದೇಶಿಕ ಕೇಂದ್ರ ಗಳನ್ನು ಸ್ಥಾಪಿಸಿರುವುದಲ್ಲದೆ, ಎಲ್ಲಾ ಕೇಂದ್ರ ಗಳಿಗೆ ನಿರ್ದೇಶಕರನ್ನು ನಿಯೋಜಿಸಿ, ತಿಂಗ ಳಿಗೆ 20,000 ರೂ.ನಿಂದ 36,200 ರೂ. ವೇತನದ ಜೊತೆಗೆ ವಿವಿಧ ಭತ್ಯೆ ನೀಡಿ ದ್ದಾರೆ ಎಂದು ದೂರಲಾಗಿದೆ.

ಪೆÇ್ರ.ಎಂ.ಜಿ.ಕೃಷ್ಣನ್, ಮಾಜಿ ಹಣ ಕಾಸು ಅಧಿಕಾರಿ ರಾಜಶೇಖರಯ್ಯ, ಮಾಜಿ ಕುಲಸಚಿವರಾದ ಪೆÇ್ರ.ಪಿ.ಎಸ್. ನಾಯಕ್ ಮತ್ತು ಪೆÇ್ರ.ಕೆ.ಜೆ.ಸುರೇಶ್ ಅವರ ವಿರುದ್ಧ 20 ಲಕ್ಷ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಖರೀದಿಸುವುದರಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವಾಗಿದೆ. ಜೊತೆಗೆ ವಿದ್ಯಾರ್ಥಿ ಗಳ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿ ದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಸಿಬಿ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ನೀಡಿರುವ ದೂರಿ ನಲ್ಲಿ ಮುಕ್ತ ವಿವಿಯ ವಿಶ್ರಾಂತ ಉಪಕುಲಪತಿ ಗಳು ಹಾಗೂ ಇನ್ನಿತರರು ಅಧಿಕಾರಿಗಳು ತಮ್ಮ ಅವಧಿಯಲ್ಲಿ ನಿಯಮಗಳ ಉಲ್ಲಂ ಘನೆ, ಕಾನೂನು ಬಾಹಿರ ಸಹಭಾಗಿತ್ವ, ಪಿತೂರಿ, ಕ್ರಿಮಿನಲ್ ಸ್ವರೂಪದ ಆರೋಪ, ನಂಬಿಕೆಗೆ ಚ್ಯುತಿ ತಂದಿರುವುದು, ಕಚೇ ರಿಯ ದುರುಪಯೋಗ ಆರೋಪ ಹೊರಿಸ ಲಾಗಿದೆ. ವಿಶ್ವವಿದ್ಯಾನಿಲಯಕ್ಕೆ ಮೋಸ ಮಾಡುವುದು ಮತ್ತು ವಿಶ್ವವಿದ್ಯಾನಿಲಯದ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು, ಇದು ನಂಬಿಕೆಯ ಉಲ್ಲಂಘನೆಯ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿ ಅಕ್ರಮ ಎಸಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿ ನಲ್ಲಿ ಕೋರಲಾಗಿದೆ.

Translate »