ಮೈಸೂರು,ನ.25(ಆರ್‍ಕೆಬಿ)- ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾ ತರು ಈ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕುವುದರಿಂದ ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ನೀಡುವಂತಾಗುವ ಕಾರಣ ಎಲ್ಲರೂ ಎಚ್ಚರಿಕೆಯಿಂದ ಮತ ಹಾಕುವಂತೆ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಹಿಂದುಳಿದ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನೂತನ ಸಾಲಿಗೆ ನಿಲ್ಲಿಸಲಾಗಿದೆ. ಶಿಕ್ಷಣ ಇಲಾಖೆ ಡಾ.ಬಿ.ಆರ್….
ಸಿನಿಮಾ ನೋಡುತ್ತಿದ್ದಾಗಲೇ ಸಾವನ್ನಪ್ಪಿದ್ದ!
November 26, 2019ಮೈಸೂರು, ನ.25(ಆರ್‍ಕೆ)- ಸಿನಿಮಾ ನೋಡುತ್ತಿದ್ದಾಗಲೇ ಅಪರಿಚಿತ ವ್ಯಕ್ತಿ ಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಪ್ರಭಾ ಚಿತ್ರಮಂದಿರದಲ್ಲಿ ಇಂದು ಸಂಜೆ ನಡೆದಿದೆ. ಸುಮಾರು 40ರಿಂದ 45 ವರ್ಷ ವಯಸ್ಸು, ಸಾಧಾರಣ ಮೈಕಟ್ಟು ಹೊಂದಿರುವ ವ್ಯಕ್ತಿಯ ಎಡಗೈ ಮೇಲೆ ‘ಬೋರೇಗೌಡ’ ಎಂಬ ಅಚ್ಚೆ ಇದೆ ಎಂದು ದೇವರಾಜ ಠಾಣೆ ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಮ್ಯಾಟನಿ ಶೋಗೆ ಹೋಗಿದ್ದ ಅವರು ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ವೀಕ್ಷಿಸುತ್ತಿದ್ದರು. ಸಂಜೆ 4.15 ಗಂಟೆಗೆ ಸಿನಿಮಾ ಬಿಟ್ಟು ಜನರೆಲ್ಲಾ ಹೋದ ಮೇಲೆ ಸ್ವಚ್ಛ…
ಮಹಾರಾಷ್ಟ್ರ ಸರ್ಕಾರ ರಚನೆ: ಇಂದು ಸುಪ್ರೀಂ ತೀರ್ಪು
November 25, 2019ನವದೆಹಲಿ: ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡು ತರಾತುರಿಯಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದ್ದು ಹಾಗೂ ಕುದುರೆ ವ್ಯಾಪಾರ ತಡೆಯಲು ಕೂಡಲೇ ಬಹುಮತ ಸಾಬೀತಿಗೆ ಆದೇಶ ಕೊಡಬೇಕೆಂದು ಕೋರಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಭಾನುವಾರ ಕೈಗೆತ್ತಿಕೊಂಡಿತು. ಇಂದಿನ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಮಹಾ ರಾಷ್ಟ್ರ ರಾಜ್ಯಪಾಲರಿಗೆ ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸಂಬಂಧಿಸಿದ ದಾಖಲೆಗಳು…
ರಾಜ್ಯ ಸರ್ಕಾರದಿಂದ 2020ರ ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ
November 25, 2019ಬೆಂಗಳೂರು: ಕರ್ನಾಟಕ ಸರ್ಕಾರ 2020 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಶುಕ್ರವಾರ ಪ್ರಕಟಗೊಂಡಿರುವ ಈ ಪಟ್ಟಿ 1881ರ ನೆಗೋಶಿ ಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಂತೆ ರಜಾ ದಿನಗಳ ನಿಗದಿ ಮಾಡಲಾಗಿದೆ. ಪಟ್ಟಿಯಲ್ಲಿ ಇರುವ ರಜಾದಿನಗಳು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 18 ಸಾರ್ವಜನಿಕ ರಜಾ ದಿನಗಳಿವೆ. ಸೋಮವಾರ ಅಥವಾ ಶುಕ್ರವಾರದಂದು ಬರುವ 10 ರಜಾ ದಿನಗಳನ್ನು ಇದು ಹೊಂದಿರುವ ಕಾರಣ 2020ರಲ್ಲಿ ದೀರ್ಘ ವಾರಾಂತ್ಯವನ್ನು ನಿರೀಕ್ಷಿಸಲಾಗಿದೆ. ಕರ್ನಾಟಕದ ರಜಾ ದಿನಗಳ ಪಟ್ಟಿ ಜನವರಿ…
ಅಯೋಧ್ಯೆ ತೀರ್ಪಿನ ಬಳಿಕ ದೇಶದ ಜನತೆ ಏಕತೆಯ ಮನೋಭಾವ ತೋರಿಸಿದ್ದು ಶ್ಲಾಘನೀಯ
November 25, 2019ನವದೆಹಲಿ, ನ. 24- ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತಿಂಗಳ ಕೊನೆಯ ಭಾನುವಾರ ನಡೆಸಿ ಕೊಡುವ ಜನಪ್ರಿಯ ರೇಡಿಯೋ ಕಾರ್ಯ ಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದರು. ಅವರ ಭಾಷಣದ ಮುಖ್ಯಾಂಶಗಳು: ಅಯೋಧ್ಯೆ ಭೂ ವಿವಾದ ಕೇಸ್‍ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ದೇಶದ ಜನತೆ ತೋರಿಸಿದ ತಾಳ್ಮೆ, ಸಹನೆ, ಪ್ರಬುದ್ಧತೆ ಯನ್ನು ನೋಡಿದಾಗ ಜನರಿಗೆ ದೇಶದ ಹಿತಾಸಕ್ತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಸಾಬೀತಾಗಿದೆ. ಐತಿಹಾಸಿಕ ತೀರ್ಪಿನ ಬಳಿಕ ದೇಶ ಹೊಸ ದಾರಿ…
ಬೈ ಎಲೆಕ್ಷನ್ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ.! ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
November 25, 2019ಮಂಡ್ಯ,ನ.24(ನಾಗಯ್ಯ)- ಬೈ ಎಲೆಕ್ಷನ್ ಫಲಿತಾಂಶ ಪ್ರಕಟವಾದ ಡಿ.9ರ ಬಳಿಕ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಲೀಡರ್‍ಗಳು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ದೇವರಾಜು ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಬಳಿಕ ರಾಜ್ಯ ರಾಜಕೀಯ ಲೆಕ್ಕಾಚಾರವೇ ಬದಲಾಗುತ್ತದೆ ಎಂಬ ಹೊಸದೊಂದು ಬಾಂಬ್ ಸಿಡಿಸಿದರು. ಉಪಚುನಾವಣೆಯ ಬಳಿಕ ಸರ್ಕಾರ ಉಳಿಯ ಬೇಕಾದರೆ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಾಗುತ್ತದೆ. ಆದರೆ…
ಬೆಂಗಳೂರಿನ ಹುಳಿಮಾವು ಕೆರೆ ಕೋಡಿ ಒಡೆದು, ಸಾವಿರಾರು ಮನೆಗಳು ಜಲಾವೃತ
November 25, 2019ಬೆಂಗಳೂರು, ನ. 24- ಬೆಂಗಳೂರು ದಕ್ಷಿಣದ ದೊಡ್ಡ ಕೆರೆ ಎಂದೇ ಖ್ಯಾತಿಗಳಿಸಿರುವ ಹುಳಿಮಾವು ಕೆರೆಯ ಕೋಡಿ ಒಡೆದು, ಸುತ್ತಮುತ್ತಲಿನ ಬಡಾ ವಣೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಮನೆಗಳು ಜಲಾವೃತವಾಗಿರುವ ಘಟನೆ ಭಾನುವಾರ ನಡೆದಿದೆ. ಇಲ್ಲಿನ ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್ ನಲ್ಲಿರುವ ಹುಳಿಮಾವು ಕೆರೆಯ ಕೋಡಿ ಒಡೆದು ಅಕ್ಷಯ ಗಾರ್ಡನ್ ಅಪಾರ್ಟ್‍ಮೆಂಟ್ ಸಮುಚ್ಚಯದ ಆಸು ಪಾಸಿನ ಪ್ರದೇಶಗಳು ಜಲಾವೃತವಾಗಿವೆ. ಸಮೀಪದ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳಿಗೂ ನೀರು ನುಗ್ಗಿದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಮನೆಗಳು ಜಲಾವೃತ…
ನಿವೇಶನ ಸ್ವಚ್ಛವಾಗಿಟ್ಟುಕೊಂಡವರಿಗೆ ‘ತೆರಿಗೆ ರಿಯಾಯಿತಿ’
November 25, 2019ಮೈಸೂರು,ನ.24(ಆರ್‍ಕೆ)- ನಗರದ ಲ್ಲೊಂದು ಸ್ವಂತ ಮನೆ ಇರಬೇಕೆಂಬ ಕನ ಸನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿವೇಶನ ಕೊಳ್ಳಲು ಹಾತೊರೆಯುತ್ತಾರೆ. ಆದರೆ ಬಹಳಷ್ಟು ಮಂದಿ ನಿವೇಶನ ಮಾಲೀಕರು ತಮ್ಮದೇ ಕಾರಣಗಳಿಗಾಗಿ ಮನೆಯನ್ನು ನಿರ್ಮಿಸದೇ ನಿವೇಶನವನ್ನು ವರ್ಷಗಳ ಕಾಲ ಖಾಲಿಯಾ ಗಿಯೇ ಇಟ್ಟಿರುತ್ತಾರೆ. ಇಂತಹ ಖಾಲಿ ನಿವೇ ಶನಗಳಲ್ಲಿ ಅಪಾರ ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದು ಹಾವು ಮತ್ತಿತರ ವಿಷ ಜಂತುಗಳ ಆವಾಸಕ್ಕೆ ಅವಕಾಶವಾಗಿರು ತ್ತದೆ. ಇಲ್ಲವೇ, ಖಾಲಿ ನಿವೇಶನ ಆ ಭಾಗದ ಕಸದ ತೊಟ್ಟಿಯಾಗಿ ಮಾರ್ಪಟ್ಟಿರುತ್ತದೆ. ಇಂತಹ ದೃಶ್ಯಗಳನ್ನು ಮೈಸೂರಿನಲ್ಲಿಯೂ…
ಇಂದು ಹುಣಸೂರಲ್ಲಿ ಬಿಎಸ್‍ವೈ ಪ್ರಚಾರ
November 25, 2019ಹುಣಸೂರು,ನ.24(ಕೆಕೆ)- ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಂಜೆ ಹುಣಸೂರಿ ನಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್. ವಿಶ್ವ ನಾಥ್ ಪರ ಪ್ರಚಾರ ನಡೆಸಲಿದ್ದು, ಈ ವೇಳೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ತಮ್ಮ ಬೆಂಬಲಿಗರೊಂ ದಿಗೆ ಬಿಜೆಪಿ ಸೇರಲಿದ್ದಾರೆ. ಸೋಮ ವಾರ ಸಂಜೆ 4 ಗಂಟೆಗೆ ಹುಣಸೂ ರಿನ ಮುನೇಶ್ವರ ಕಾವಲ್ ಮೈದಾನ ದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿ ಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹುಣಸೂರಿಗೆ ಆಗಮಿಸಿದ ಮಾಜಿ ಸಚಿವರುಗಳಾದ ಎ….
ಉಪ ಚುನಾವಣೆ ಫಲಿತಾಂಶದ ನಂತರ ಅಸ್ಥಿರತೆ ಉಂಟಾದರೆ ಸರ್ಕಾರವನ್ನು ಕಾಪಾಡುತ್ತೇನೆ
November 25, 2019ಬೆಂಗಳೂರು,ನ.24- ಉಪ ಚುನಾ ವಣೆ ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ಉಂಟಾ ದರೆ ಜನರ ಹಿತಾ ಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ವನ್ನು ಕಾಪಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹೇಳಿದರು. ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಭಾನುವಾರ ಪ್ರಚಾರದಲ್ಲಿ ತೊಡಗಿದ್ದ ಅವರು, ಸುದ್ದಿಗಾರರೊಂದಿಗೆ ಮಾತ ನಾಡಿ, ನಾನು ಯಾವ ಸರ್ಕಾರವನ್ನು ಕಾಪಾಡುತ್ತೇನೆ ಎಂಬುದನ್ನು ಡಿ. 9ರ ನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಉಂಟುಮಾಡಿದರು. ಉಪ ಚುನಾವಣೆ…










