ನಿವೇಶನ ಸ್ವಚ್ಛವಾಗಿಟ್ಟುಕೊಂಡವರಿಗೆ ‘ತೆರಿಗೆ ರಿಯಾಯಿತಿ’
ಮೈಸೂರು

ನಿವೇಶನ ಸ್ವಚ್ಛವಾಗಿಟ್ಟುಕೊಂಡವರಿಗೆ ‘ತೆರಿಗೆ ರಿಯಾಯಿತಿ’

November 25, 2019

ಮೈಸೂರು,ನ.24(ಆರ್‍ಕೆ)- ನಗರದ ಲ್ಲೊಂದು ಸ್ವಂತ ಮನೆ ಇರಬೇಕೆಂಬ ಕನ ಸನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿವೇಶನ ಕೊಳ್ಳಲು ಹಾತೊರೆಯುತ್ತಾರೆ. ಆದರೆ ಬಹಳಷ್ಟು ಮಂದಿ ನಿವೇಶನ ಮಾಲೀಕರು ತಮ್ಮದೇ ಕಾರಣಗಳಿಗಾಗಿ ಮನೆಯನ್ನು ನಿರ್ಮಿಸದೇ ನಿವೇಶನವನ್ನು ವರ್ಷಗಳ ಕಾಲ ಖಾಲಿಯಾ ಗಿಯೇ ಇಟ್ಟಿರುತ್ತಾರೆ. ಇಂತಹ ಖಾಲಿ ನಿವೇ ಶನಗಳಲ್ಲಿ ಅಪಾರ ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದು ಹಾವು ಮತ್ತಿತರ ವಿಷ ಜಂತುಗಳ ಆವಾಸಕ್ಕೆ ಅವಕಾಶವಾಗಿರು ತ್ತದೆ. ಇಲ್ಲವೇ, ಖಾಲಿ ನಿವೇಶನ ಆ ಭಾಗದ ಕಸದ ತೊಟ್ಟಿಯಾಗಿ ಮಾರ್ಪಟ್ಟಿರುತ್ತದೆ. ಇಂತಹ ದೃಶ್ಯಗಳನ್ನು ಮೈಸೂರಿನಲ್ಲಿಯೂ ಬಹಳಷ್ಟು ಕಡೆ ಕಾಣಬಹುದಾಗಿದೆ.

ಈ ಬಗ್ಗೆ ಬಹಳಷ್ಟು ತಲೆಕೆಡಿಸಿಕೊಂಡಿ ರುವ ಮೈಸೂರು ಮಹಾ ನಗರಪಾಲಿಕೆ (ಎಂಸಿಸಿ)ಯು, `ಖಾಲಿ ನಿವೇಶನಗಳ ಮಾಲೀ ಕರಿಗೆ ನಿಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛ ವಾಗಿಟ್ಟುಕೊಳ್ಳಿ’ ಎಂದು ಹಲವಾರು ಬಾರಿ ಎಚ್ಚರಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಈ ಬಾರಿ ತುಸು ಭಿನ್ನ ಆಲೋಚನೆ ಮಾಡಿರುವ ನಗರಪಾಲಿಕೆ ಆಡಳಿತವು, ಸ್ವಚ್ಛತೆಗೆ `ತೆರಿಗೆ ರಿಯಾಯಿತಿ’ ನೀಡುವ `ಆಕರ್ಷಕ’ ಯೋಜನೆಯನ್ನು ರೂಪಿಸಿದೆ.

`ಯಾರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿರುತ್ತಾರೋ ಅವ ರಿಗೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡ ಲಾಗುವುದು’ ಎಂದು ಪಾಲಿಕೆ ಆಕರ್ಷಣೆ ಯನ್ನು ಮುಂದೊಡ್ಡಿದೆ. ನಗರದಲ್ಲಿ, ಅದ ರಲ್ಲೂ ಇತ್ತೀಚೆಗೆ ಮುಡಾದಿಂದ ಹಸ್ತಾಂತರ ವಾದ ಬಡಾವಣೆಗಳಲ್ಲಿನ ಖಾಲಿ ನಿವೇ ಶನಗಳಲ್ಲಿ ಗಿಡಗಂಟಿಗಳು ಯಥೇಚ್ಛವಾಗಿ ಬೆಳೆದು ಹುಳ-ಹುಪ್ಪಟೆ, ಸೊಳ್ಳೆಗಳಿಗೆ ಆಶ್ರಯತಾಣವಾಗಿ ಪರಿಣಮಿಸಿವೆ. ಕೆಲ ವೆಡೆ ಖಾಲಿ ನಿವೇಶನಗಳು ಕಸ ಸುರಿಯುವ ತಿಪ್ಪೆಯಾಗಿ ಮಾರ್ಪಾಟಾಗಿವೆ. ಇದು ನೆರೆ ಹೊರೆಯ ನಿವಾಸಿಗಳಿಗೆ ದೊಡ್ಡ ಸಮಸ್ಯೆ ಯಾಗಿ ಪರಿಣಮಿಸಿದೆ. ಈ ಕುರಿತು ನಿವಾಸಿಗಳು ನಗರಪಾಲಿಕೆಗೆ ಸಾಕಷ್ಟು ಬಾರಿ ದೂರನ್ನೂ ನೀಡಿದ್ದಾರೆ.

ಹೀಗಾಗಿ ನಗರದ ಸ್ವಚ್ಛತೆ ಕಾಪಾಡು ವಲ್ಲಿ ಜನಸಾಮಾನ್ಯರೂ ಕೈಜೋಡಿಸಲಿ ಎಂಬ ಸದುದ್ದೇಶದಿಂದ ಕರ್ನಾಟಕ ಪೌರ ಸಂಸ್ಥೆಗಳ ಅಧಿನಿಯಮ-1976ರ ಸೆಕ್ಷನ್ 463ರಡಿ ಇರುವ ಅಧಿಕಾರವನ್ನು ಬಳಸಿ ಕೊಂಡು ಮಹಾನಗರಪಾಲಿಕೆಯು, ಖಾಲಿ ನಿವೇಶನಗಳ ಸ್ವಚ್ಛಗೊಳಿಸುವುದೂ ಸೇರಿ ದಂತೆ ನಿರ್ವಹಣಾ ವೆಚ್ಚ ಎಂದು ಪ್ರತಿ ಚದರಡಿಗೆ ರೂ. 1 ಶುಲ್ಕ ವಿಧಿಸಲು ತೀರ್ಮಾನಿಸಿದೆ. ಈ ಮೊದಲು ನಿವೇ ಶನ ಸ್ವಚ್ಛತೆಗೆ ಪಾಲಿಕೆಯು ಪ್ರತಿ ಚದರಡಿಗೆ 50 ಪೈಸೆ ಶುಲ್ಕ ಸಂಗ್ರಹಿಸಲು ತೀರ್ಮಾ ನಿಸಿತ್ತು, ಆದರೆ, ಇದು ತೀರಾ ಕಡಿಮೆ ಪ್ರಮಾಣ ಎಂಬುದು ಮನವರಿಕೆಯಾದ ಬಳಿಕ ನಿರ್ವಹಣಾ ಶುಲ್ಕವನ್ನು ರೂ. 1ಗೆ ಏರಿಕೆ ಮಾಡಿದೆ. ಪರಿಣಾಮ 30’’x40’’ (ಅಡಿ) ಉದ್ದ-ಅಗಲ ಅಳತೆಯ ನಿವೇ ಶನದ ಸ್ವಚ್ಛತೆ ಮತ್ತು ನಿರ್ವಹಣೆ ಶುಲ್ಕ ರೂ. 1200ಗಳಿಗೇರಿದೆ. “ಎಂಸಿಸಿ ಯಾವುದೇ ನಿವೇಶನವನ್ನು ಸ್ವಚ್ಛಗೊಳಿಸಿದಲ್ಲಿ ಅದಕ್ಕೆ ತಗುಲಿದ ವೆಚ್ಚವನ್ನು ನಿವೇಶನದ ಮಾಲೀಕರ ಆಸ್ತಿ ತೆರಿಗೆ ಲೆಕ್ಕಕ್ಕೇ ಸೇರಿಸಲಾಗುತ್ತದೆ. ಒಂದೊಮ್ಮೆ ನಿವೇಶನದ ಮಾಲೀಕರೇ ಖುದ್ದಾಗಿ ತಮ್ಮ ನಿವೇ ಶನವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಪಾಲಿಕೆಗೂ ಶ್ರಮ ತಪ್ಪಲಿದೆ. ಇಂತಹ ಸ್ವಚ್ಛ ನಿವೇ ಶನಗಳ ಮಾಲೀಕರನ್ನು ಪ್ರೋತ್ಸಾಹಿಸುವ ಸಲುವಾಗಿ ತೆರಿಗೆ ರಿಯಾಯಿತಿ ನೀಡಲಾಗು ವುದು” ಎಂದು ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮಹಾ ನಗರಪಾಲಿಕೆ ವ್ಯಾಪ್ತಿಯ ಎಲ್ಲಾ 9 ವಲಯ ಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳನ್ನು ಗುರುತಿಸಿ ಅವನ್ನು ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅನುಕೂಲವಾಗಲಿ ಎಂದು ಪ್ರತಿ ವಾರ್ಡ್‍ನಲ್ಲಿಯೂ ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಎಂಸಿಸಿ ಈಗಾಗಲೇ ತನ್ನ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳನ್ನು ಹುಡುಕಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಎಂಸಿಸಿಗೆ ಹಸ್ತಾಂತರಿಸಿರುವ (ರಿಂಗ್ ರಸ್ತೆಯಿಂದ ಒಳಗಿನ) ಹೊಸ ಬಡಾವಣೆಗಳಲ್ಲಿನ ನಿವೇಶನಗಳನ್ನು ಸಹ ಸ್ವಚ್ಛ ಗೊಳಿಸಲಾಗುತ್ತದೆ ಎಂದು ನಗರಪಾಲಿಕೆ ಇಇ ನಾಗರಾಜ್ ಮಾಹಿತಿ ನೀಡಿದರು.

Translate »