ಹುಣಸೂರು,ನ.24(ಕೆಕೆ)- ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಂಜೆ ಹುಣಸೂರಿ ನಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್. ವಿಶ್ವ ನಾಥ್ ಪರ ಪ್ರಚಾರ ನಡೆಸಲಿದ್ದು, ಈ ವೇಳೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ತಮ್ಮ ಬೆಂಬಲಿಗರೊಂ ದಿಗೆ ಬಿಜೆಪಿ ಸೇರಲಿದ್ದಾರೆ. ಸೋಮ ವಾರ ಸಂಜೆ 4 ಗಂಟೆಗೆ ಹುಣಸೂ ರಿನ ಮುನೇಶ್ವರ ಕಾವಲ್ ಮೈದಾನ ದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿ ಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹುಣಸೂರಿಗೆ ಆಗಮಿಸಿದ ಮಾಜಿ ಸಚಿವರುಗಳಾದ ಎ. ಮಂಜು ಮತ್ತು ಸಿ.ಪಿ. ಯೋಗೇಶ್ವರ್ ಅವರು ಗಳು ಸಿ.ಟಿ.ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿ ಯಶಸ್ವಿಯಾದರು. ಪಟ್ಟಣದ ಖಾಸಗಿ ಕಲ್ಯಾಣ ಮಂಪಟ ದಲ್ಲಿ ತಮ್ಮ ಅಭಿಮಾನಿಗಳ ಸಭೆ ನಡೆಸಿದ ಸಿ.ಟಿ.ರಾಜಣ್ಣ, ತಾವು ಸೋಮವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ವಕೀಲ ಗಣೇಶ್, ಉತ್ಸಾಹಿ ರಾಜಕಾರಣಿಯಾಗಿರುವ ಸಿ.ಟಿ. ರಾಜಣ್ಣ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಕೊನೆಗೆ ಮೂಲೆಗುಂಪು ಮಾಡಿದೆ ಎಂದು ಆರೋಪಿಸಿದರು. ಮುಖಂಡ ನವೀನ್ ರೈ ಮಾತನಾಡಿ, ರಾಜಣ್ಣ ಅವರು ಜಾತ್ರಾತೀತವಾಗಿ ಜನಸಾಮಾನ್ಯರ ಕಷ್ಟ ಸುಖಗಳಿಗೆ ಭಾಗಿಯಾಗಿದ್ದಾರೆ. ಅವರ ಶಕ್ತಿಯನ್ನು ಬಳಸಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಅವರಿಗೆ ಯಾವುದೇ ಸ್ಥಾನ-ಮಾನ ನೀಡದೆ. ಮೂಲೆಗುಂಪು ಮಾಡಿದ್ದು, ಅವರಿಗೆ ಮೋಸ ಮಾಡಿರುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ರಾಜಣ್ಣ ಬಿಜೆಪಿ ಸೇರಬೇಕು ಎಂದಾಗ ನೆರೆದಿದ್ದ ಅಭಿಮಾನಿಗಳು ಕರಘೋಷದೊಂದಿಗೆ ಬೆಂಬಲ ವ್ಯಕ್ತಪಡಿಸಿದರು. ಕೊನೆಗೆ ಮಾತನಾಡಿದ ರಾಜಣ್ಣ, ನಾನು ಅಭಿಮಾನಿಗಳ ಅಭಿಪ್ರಾಯದಂತೆ ನಡೆಯುತ್ತೇನೆ. ಈಗಿರುವ ಉಸಿರುಗಟ್ಟಿದ ವಾತಾವರಣದಿಂದ ಹೊರಬಂದು ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರುತ್ತೇನೆ ಎಂದು ಘೋಷಿಸಿದರು. ರಾಜಣ್ಣ ಜೊತೆ ಅವರ ಅಪಾರ ಬೆಂಬಲಿಗರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿದೆ.