ಉಪ ಚುನಾವಣೆ ಫಲಿತಾಂಶದ ನಂತರ ಅಸ್ಥಿರತೆ ಉಂಟಾದರೆ ಸರ್ಕಾರವನ್ನು ಕಾಪಾಡುತ್ತೇನೆ
ಮೈಸೂರು

ಉಪ ಚುನಾವಣೆ ಫಲಿತಾಂಶದ ನಂತರ ಅಸ್ಥಿರತೆ ಉಂಟಾದರೆ ಸರ್ಕಾರವನ್ನು ಕಾಪಾಡುತ್ತೇನೆ

November 25, 2019

ಬೆಂಗಳೂರು,ನ.24- ಉಪ ಚುನಾ ವಣೆ ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ಉಂಟಾ ದರೆ ಜನರ ಹಿತಾ ಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ವನ್ನು ಕಾಪಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹೇಳಿದರು. ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಭಾನುವಾರ ಪ್ರಚಾರದಲ್ಲಿ ತೊಡಗಿದ್ದ ಅವರು, ಸುದ್ದಿಗಾರರೊಂದಿಗೆ ಮಾತ ನಾಡಿ, ನಾನು ಯಾವ ಸರ್ಕಾರವನ್ನು ಕಾಪಾಡುತ್ತೇನೆ ಎಂಬುದನ್ನು ಡಿ. 9ರ ನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಉಂಟುಮಾಡಿದರು. ಉಪ ಚುನಾವಣೆ ಫಲಿತಾಂಶದ ನಂತರ ಬಹುಮತ ಕೊರತೆಯಿಂದಾಗಿ ಬಿಜೆಪಿ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಆದರೆ, ರಾಜ್ಯದ ಜನರು ಚುನಾವಣೆ ಎದುರಿಸುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಸರ್ಕಾರವನ್ನು ಕಾಪಾಡಲು ನಾನು ನಿರ್ಧರಿಸಿದ್ದೇನೆ. ಆದರೆ ಯಾವ ಸರ್ಕಾರ ಎಂಬುದು ಈಗ ಹೇಳಲು ಸಾಧ್ಯವಿಲ್ಲ ಎಂದರು. ಕುಮಾರ ಸ್ವಾಮಿ ಅವರು ಈ ಹಿಂದೆ ಯಡಿಯೂರಪ್ಪ ಸರ್ಕಾರ ಪತನವಾಗಲು ಬಿಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಅದೇ ರೀತಿ ಜೆಡಿಎಸ್ ವರಿಷ್ಠ, ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ಅದೇ ಮಾತನ್ನು ಪುನರುಚ್ಛರಿಸಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ.

Translate »