ರಾಣೇಬೆನ್ನೂರು (ಹಾವೇರಿ),ನ.29- ಉಪ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಕುರುಬ ಸಮಾಜದ ನಾಲ್ವರು ಶಾಸಕರು ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರದ ಮೆಡ್ಲೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರಿ ಪರ ಪ್ರಚಾರ ಸಭೆ ನಡೆಸಿದ ಬಿಎಸ್‍ವೈ, ಈ ಘೋಷಣೆ ಮಾಡಿ ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟೀಕೆ ಮಾಡಲು ಹೋಗುವುದಿಲ್ಲ. 15 ಕ್ಷೇತ್ರಗಳಲ್ಲಿಯೂ ಗೆದ್ದು ಮೂರೂವರೆ ವರ್ಷ ಯಾವುದೇ ಪಕ್ಷದ ಬೆಂಬಲ,…
ಮಹಾರಾಷ್ಟ್ರ ಮೈ`ತ್ರಿ’ ಸರ್ಕಾರದ ವಿಶ್ವಾಸಮತ ಇಂದು
November 30, 2019ಮುಂಬೈ,ನ.29- ನೂತನ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ವಿಶ್ವಾಸಮತ ಸಾಬೀತು ನ.30ರ ಶನಿವಾರ ಮಧ್ಯಾಹ್ನ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿದೆ.288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 145 ಶಾಸಕ ಬಲದ ಅಗತ್ಯವಿದೆ. ಪ್ರಸ್ತುತ ಆಡಳಿತಾರೂಢ ಪಕ್ಷಗಳಾದ ಶಿವಸೇನೆ 56, ಎನ್‍ಸಿಪಿ 54 ಮತ್ತು ಕಾಂಗ್ರೆಸ್ 44 ಶಾಸಕರನ್ನು (ಒಟ್ಟು 154) ಹೊಂದಿವೆ.
ಕೇದಾರ ಖಂಡದಲ್ಲಿ ಅವಧೂತ ದತ್ತ ಪೀಠದ ಶಾಖಾ ಆಶ್ರಮ ಸ್ಥಾಪನೆ
November 30, 2019ಮೈಸೂರು, ನ.29(ಎಂಟಿವೈ)- ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕಾಶಿ ಯಲ್ಲಿನ ಕೇದಾರ ಖಂಡದಲ್ಲಿ ಅವಧೂತ ದತ್ತಪೀಠದ 86ನೇ ಶಾಖಾ ಆಶ್ರಮ ಉದ್ಘಾಟಿಸಿ, ವಿವಿಧ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಾಶಿಯಿಂದ ಮೈಸೂರಿಗೆ ಆಗಮಿಸುತ್ತಿದ್ದು, ಡಿ.1ರಂದು ಗಣಪತಿ ಆಶ್ರಮದಲ್ಲಿ ನಡೆಯುವ ಕಾಶಿ ಸಮಾರಾಧನಾ ಕಾರ್ಯಕ್ರಮದಲ್ಲಿ ಭಕ್ತರಿಗೆ ಗಂಗಾಜಲ ಸಂಪ್ರೋಕ್ಷಣೆ ಮಾಡಲಿದ್ದಾರೆ ಎಂದು ದತ್ತಪೀಠದ ಕಾರ್ಯದರ್ಶಿ ಪ್ರಸಾದ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.10ರಂದು ಕಾಶಿಯಲ್ಲಿ ಅವಧೂತ ದತ್ತಪೀಠದ 86ನೇ ಶಾಖೆಯನ್ನು…
ಗಾಂಧಿ ಆಗರ್ಭ ಶ್ರೀಮಂತರು!
November 29, 2019ಮೈಸೂರು, ನ.28(ಪಿಎಂ)- ಹಣ-ಐಶ್ವರ್ಯ ಹೊಂದಿದವರು ನಿಜವಾದ ಶ್ರೀಮಂತರಲ್ಲ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿಶ್ವ ಕಂಡ ವಿಶಿಷ್ಟ ವ್ಯಕ್ತಿತ್ವದ ಮಹಾತ್ಮ ಗಾಂಧಿ ಇಡೀ ಜಗತ್ತಿಗೆ ನಿಜ ವಾದ ಆಗರ್ಭ ಶ್ರೀಮಂತರು ಎಂದು ಹಿರಿಯ ಗಾಂಧಿ ಮಾರ್ಗಿ ವೇಮಗಲ್ ಸೋಮಶೇಖರ್ ಅಭಿಪ್ರಾಯಪಟ್ಟರು. ಮೈಸೂರು ವಿವಿಯ ಪ್ರಸಾರಾಂಗ, ಗಾಂಧಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಗಾಂಧೀಜಿ ಮತ್ತು ಯುವಶಕ್ತಿ’ ಕುರಿತ ಪ್ರಚಾರೋಪನ್ಯಾಸದಲ್ಲಿ ಉಪನ್ಯಾಸ ನೀಡಿದರು. ಶ್ರೀಮಂತರು ಯಾರೆಂದು ಕೇಳಿದರೆ ಹಲವು ಪ್ರಖ್ಯಾತ…
ಡಾ.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನದಿಂದ ಸರ್ವರಿಗೂ ಸಮಾನ ಅವಕಾಶ ಲಭಿಸಿದೆ
November 29, 2019ಮೈಸೂರು,ನ.28(ಎಂಟಿವೈ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನ ದೇಶದ ಸಮಸ್ತ ಜನರಿಗೆ ಸಮಾನ ಅವಕಾಶ ದೊರಕಿಸಿಕೊಟ್ಟಿದೆ ಎಂದು ಶಾಸಕ ಎಲ್. ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಒಂಟಿಕೊಪ್ಪಲಿನ ಸೀರ್ವಿ ಸಮಾಜದ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ಹಾಗೂ ಮಂಚೇಗೌಡನ ಕೊಪ್ಪಲಿನ ಕೀರ್ತಿ ಯುವತಿ ಮತ್ತು ಮಹಿಳಾ ಮಂಡಳಿ ಸಹಯೋಗದಲ್ಲಿ ಸಂವಿಧಾನ ದಿನ ಹಾಗೂ ಕೋಮು ಏಕತಾ ಸಪ್ತಾಹವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ವಿಶ್ವದಲ್ಲಿಯೇ ಭಾರತ ತನ್ನದೇ ಆದ ಸ್ಥಾನಮಾನ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ರಾಷ್ಟ್ರ…
ಎಂಡಿಇಎಸ್ ಮಾಜಿ ಕಾರ್ಯದರ್ಶಿ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ ಇನ್ನಿಲ್ಲ
November 29, 2019ಮೈಸೂರು,ನ.28(ಆರ್‍ಕೆ)-ರೆವರೆಂಡ್ ಫಾದರ್ ರಫೇಲ್ ಮ್ಯಾಥ್ಯೂ ಕೊಲಾಸೋ (75) ಅವರು ತೀವ್ರ ಹೃದಯಾಘಾತದಿಂದ ಇಂದು ಬೆಳಿಗ್ಗೆ ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬನ್ನಿ ಮಂಟಪದ ಎಲ್‍ಐಸಿ ಸರ್ಕಲ್‍ನಲ್ಲಿರುವ ಸೆಂಟ್ ಮೇರಿಸ್ ಮೈನರ್ ಸೆಮಿನರಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾ ಗಿದ್ದು, ನಾಳೆ(ನ.29) ಬೆಳಿಗ್ಗೆ 8 ಗಂಟೆಗೆ ಸೆಂಟ್ ಜೋಸೆಫ್ ಕ್ಯಾಥೆಡ್ರಲ್‍ಗೆ ಸ್ಥಳಾಂ ತರಿಸಿ ಅಂತಿಮ ಧಾರ್ಮಿಕ ವಿಧಿವಿಧಾನ ಗಳ ನಂತರ ಬೆಳಿಗ್ಗೆ 10.30 ಗಂಟೆಗೆ ಗಾಂಧಿ ನಗರದ ಕ್ಯಾಥೋಲಿಕ್ ಸೆಮೆಟರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೈಸೂರು…
ಶತಮಾನ ಪೂರೈಸಿದ ಮೈಸೂರಿನ ಹಾಡ್ರ್ವಿಕ್ ಶಾಲೆ ಕಟ್ಟಡಕ್ಕೆ ಕಾಯಕಲ್ಪ
November 29, 2019ಮೈಸೂರು,ನ.28(ಪಿಎಂ)- ಶತಮಾನ ಪೂರೈಸಿದ ಮೈಸೂರು ನಗರದ ಹಾಡ್ರ್ವಿಕ್ ಶಾಲೆ ಕಟ್ಟಡಕ್ಕೆ ಕಾಯಕಲ್ಪ ದೊರೆತಿದ್ದು, ದುರಸ್ತಿ ಹಾಗೂ ಪೇಂಟಿಂಗ್ ಮಾಡಿ ರುವ ಹಿನ್ನೆಲೆಯಲ್ಲಿ ಈ ಪಾರಂಪರಿಕ ಕಟ್ಟಡ ಆಕರ್ಷಿಸುತ್ತಿದೆ. ಹಾಡ್ರ್ವಿಕ್ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ 164 ವರ್ಷಗಳನ್ನು ಪೂರೈಸಿದ ಹೆಗ್ಗಳಿಕೆ ಹೊಂದಿದೆ. 1854ರಲ್ಲಿ `ರಾಜಾ ಸ್ಕೂಲ್’ ಹೆಸರಿನಲ್ಲಿ ಕ್ರೈಸ್ತ ಮಿಷನರಿಗಳಿಂದ ಪ್ರಾರಂಭಗೊಂಡ ಶಾಲೆ ಇದಾಗಿದ್ದು, ಅಂದು ಮೈಸೂರು ಮಹಾರಾಜರ ಪ್ರೋತ್ಸಾಹದಿಂದ ರಾಜಾ ಸ್ಕೂಲ್ ಪ್ರಾರಂಭಗೊಂಡಿತು. ಆರಂಭದಲ್ಲಿ ಮೈಸೂರಿನ ಗಾಂಧಿ ಚೌಕ ದಲ್ಲಿದ್ದ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವ ಹಿಸಿದ…
ಮೈಸೂರಲ್ಲಿ ಪಿಯು ಉಪನ್ಯಾಸಕರ ಪ್ರತಿಭಟನೆ
November 29, 2019ಮೈಸೂರು,ನ.28(ಎಂಟಿವೈ)- ಬಾಕಿ ವೇತನ ಬಿಡುಗಡೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಬೆಳಿಗ್ಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಆಶ್ರಯದಲ್ಲಿ ಮೈಸೂರಿನ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಬಾಕಿ ಯಿರುವ 2 ತಿಂಗಳ ವೇತನ ಬಿಡುಗಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಪದವಿಪೂರ್ವ ಕಾಲೇಜುಗಳ ಉಪ ನ್ಯಾಸಕರಿಗೆ 2 ತಿಂಗಳಾದರೂ ವೇತನ ನೀಡದೇ 12…
ಮೈಸೂರು ವಿವಿಯಲ್ಲಿ ವ್ಯಕ್ತಿಗತ ಔಷಧದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ತರಗತಿಗೆ ಚಾಲನೆ
November 29, 2019ಮೈಸೂರು, ನ.28(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾ ನಿಲಯದ ಜೆನೆಟಿಕ್ ಮತ್ತು ಜೆನೊಮಿಕ್ಸ್ ಅಧ್ಯಯನ ವಿಭಾ ಗವು ಪೆÇ್ರ.ಎನ್.ಬಿ.ರಾಮಚಂದ್ರ ನೇತೃತ್ವದಲ್ಲಿ ವ್ಯಕ್ತಿಗತ ಔಷಧ ದಲ್ಲಿ ಸ್ನಾತಕೋತ್ತರ ಡಿಪೆÇ್ಲಮಾ ಪ್ರಾರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಮುಂದಿನ ದಿನಗಳಲ್ಲಿ ಈ ಕೋರ್ಸ್ ಅಭಿವೃದ್ಧಿ ಹೊಂದಲಿದೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿ ಮೈಸೂರು ವಿವಿ ಜೆನೆಟಿಕ್ ಅಂಡ್ ಜೆನೊಮಿಕ್ಸ್ ವಿಭಾಗ ದಿಂದ ಆಯೋಜಿಸಿದ್ದ ವೈಯಕ್ತೀಕರಿಸಿದ ಜೆನೊಮಿಕ್ಸ್…
ಹಾಸ್ಟೆಲ್ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ವಿದ್ಯಾರ್ಥಿ ಬಂಧನ
November 29, 2019ಮೈಸೂರು, ನ.28(ಎಸ್‍ಬಿಡಿ)-ಬಿಸಿಎಂ ಹಾಸ್ಟೆಲ್‍ನಲ್ಲಿ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಯುವಕನನ್ನು ಮೈಸೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಪಿ.ವಿನಯ್ (19) ಬಂಧಿತ. ಈತ ಮೈಸೂರಿನ ಪಾಲಿಟೆಕ್ನಿಕ್ ಕಾಲೇಜೊಂದರ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮೈಸೂರಿನ ಆನಂದನಗರ ದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋ ತ್ತರ ಬಾಲಕರ ವಿದ್ಯಾರ್ಥಿನಿಲಯದ ಗೂಗಲ್ ಮ್ಯಾಪ್‍ನಲ್ಲಿ ತನ್ನ ಮೊಬೈಲ್ ನಂಬರ್ ಟ್ಯಾಗ್ ಮಾಡಿ, ವಿದ್ಯಾರ್ಥಿಗಳು ಹಾಗೂ ಪೋಷಕ ರನ್ನು ಯಾಮಾರಿಸಿದ್ದ. ಹಾಸ್ಟೆಲ್‍ನ ಗೂಗಲ್ ಮ್ಯಾಪ್ ಹುಡುಕುವ ಸಂದರ್ಭದಲ್ಲಿ…










