ಗಾಂಧಿ ಆಗರ್ಭ ಶ್ರೀಮಂತರು!
ಮೈಸೂರು

ಗಾಂಧಿ ಆಗರ್ಭ ಶ್ರೀಮಂತರು!

November 29, 2019

ಮೈಸೂರು, ನ.28(ಪಿಎಂ)- ಹಣ-ಐಶ್ವರ್ಯ ಹೊಂದಿದವರು ನಿಜವಾದ ಶ್ರೀಮಂತರಲ್ಲ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ವಿಶ್ವ ಕಂಡ ವಿಶಿಷ್ಟ ವ್ಯಕ್ತಿತ್ವದ ಮಹಾತ್ಮ ಗಾಂಧಿ ಇಡೀ ಜಗತ್ತಿಗೆ ನಿಜ ವಾದ ಆಗರ್ಭ ಶ್ರೀಮಂತರು ಎಂದು ಹಿರಿಯ ಗಾಂಧಿ ಮಾರ್ಗಿ ವೇಮಗಲ್ ಸೋಮಶೇಖರ್ ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ಪ್ರಸಾರಾಂಗ, ಗಾಂಧಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಗಾಂಧೀಜಿ ಮತ್ತು ಯುವಶಕ್ತಿ’ ಕುರಿತ ಪ್ರಚಾರೋಪನ್ಯಾಸದಲ್ಲಿ ಉಪನ್ಯಾಸ ನೀಡಿದರು.

ಶ್ರೀಮಂತರು ಯಾರೆಂದು ಕೇಳಿದರೆ ಹಲವು ಪ್ರಖ್ಯಾತ ಉದ್ಯಮಿಗಳ ಹೆಸರು ಗಳು ಕೇಳಿ ಬರುತ್ತವೆ. ಆದರೆ ಹಣ-ಐಶ್ವರ್ಯ ಹೊಂದಿರುವವರು ನಿಜವಾದ ಶ್ರೀಮಂ ತರಲ್ಲ. ಸಮಾಜಕ್ಕೆ ದಾರಿದೀಪವಾಗುವಂತೆ ಬದುಕಿದವರು ನಿಜವಾದ ಶ್ರೀಮಂತರು. ಅಂತಹವರ ಸಾಲಿನಲ್ಲಿ ವಿಶ್ವದಲ್ಲೇ ಗಾಂಧಿ ಅಗ್ರಗಣ್ಯರು ಎಂದು ಸ್ಮರಿಸಿದರು.

ಗಾಂಧಿ ತಾಯಿ, ತಾಯ್ನೆಲ ಹಾಗೂ ಮಾತೃ ಭಾಷೆ ಪವಿತ್ರವಾದವು ಎಂದು ನಂಬಿದ್ದವರು. ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗ ಗುಜರಾತಿನಲ್ಲಿ ಮಾಧ್ಯಮ ದವರು ಇಂಗ್ಲಿಷ್‍ನಲ್ಲಿ ಮಾತನಾಡಿಸುತ್ತಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಾಂಧಿಯ ವರು, `ನೀವು ಗುಜರಾತಿ ಭಾಷೆಯವರು, ನಾನೂ ಗುಜರಾತಿ ಭಾಷಿಗ. ಹೀಗಾಗಿ ಗುಜ ರಾತಿ ಭಾಷೆಯಲ್ಲಿ ನಾವು ಮಾತನಾಡ ಬಹುದು’ ಎಂದು ನಯವಾಗಿಯೇ ಅವ ರನ್ನು ಚಿಂತನೆಗೆ ಹಚ್ಚುತ್ತಾರೆ. ಮಾತೃಭಾಷೆ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ಗಾಂಧಿ ಯವರು ನಿಮ್ಮ ಪ್ರದೇಶದ ಮಾತೃಭಾಷೆ ಉಳಿಸಿ-ಬೆಳೆಸಿ ಎಂದು ಇಡೀ ದೇಶಕ್ಕೆ ಕರೆ ನೀಡಿದ್ದರು ಎಂದು ತಿಳಿಸಿದರು.

1934ರಲ್ಲಿ ಉತ್ತರ ಕರ್ನಾಟಕಕ್ಕೆ ಬಂದಿದ್ದ ಗಾಂಧಿಯವರು ಕೇವಲ ಮೂರು ದಿನ ಗಳಲ್ಲಿ ಕನ್ನಡದಲ್ಲಿ ಸಹಿ ಮಾಡುವುದನ್ನು ಕಲಿತಿದ್ದರು. ತಮ್ಮನ್ನು ನೋಡಲು ಬರುತ್ತಿದ್ದ ಯುವ ಜನತೆಗೆ `ಎಂ.ಕೆ.ಗಾಂಧಿ’ ಎಂದು ಆಟೋಗ್ರಾಫಿ (ಸ್ವಹಸ್ತಾಕ್ಷರ) ನೀಡಿದ್ದರು. ಜೊತೆಗೆ ಖಾದಿ ಬಟ್ಟೆ ಧರಿಸಲು ಸಲಹೆ ನೀಡಿ ಕಳುಹಿಸುತ್ತಿದ್ದರು. ಆಹಾರ ಕ್ರಮವೇ ಆರೋಗ್ಯಕ್ಕೆ ಅಡಿಪಾಯ ಎಂಬ ಸಂದೇಶ ಸಹ ನೀಡುತ್ತಿದ್ದರು ಎಂದು ಹೇಳಿದರು.

ವಿದೇಶಗಳಿಂದ ಗಾಂಧಿಯವರಿಗೆ ಪತ್ರ ಬರೆಯುತ್ತಿದ್ದವರು `ಗಾಂಧಿ ಇಂಡಿಯಾ’ ಎಂದಷ್ಟೇ ಬರೆಯುತ್ತಿದ್ದರು. ಅಷ್ಟರ ಮಟ್ಟಿಗೆ ಗಾಂಧಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಬಲಗೈಯಲ್ಲಿ ಮಾತ್ರವಲ್ಲದೆ, ಎಡಗೈಯಲ್ಲೂ ಗಾಂಧಿ ಬರೆಯುವ ಕಲೆ ಕರಗತ ಮಾಡಿ ಕೊಂಡಿದ್ದರು. ಆದರೆ ಅವರ ಕೈಬರಹ ಅಂದ ವಾಗಿರಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಸಾಕಷ್ಟು ಪಯತ್ನಿಸಿದರೂ ಕೈಬರಹ ಅಂದ ವಾಗಿಸಲು ಸಾಧ್ಯವಾಗದೇ ಇದ್ದಾಗ, ಓದುವ ಜೊತೆಗೆ ಕೈ ಬರಹ ಅಂದವಾಗಿರುವಂತೆ ಮಾಡಿಕೊಳ್ಳಲು ಆದ್ಯತೆ ನೀಡಬೇಕೆಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದರು. ದುಡುಕಿನಿಂದ ಯಾವುದೇ ಕೆಲಸ ಮಾಡಬಾರದು ಎಂದು ತಿಳಿಹೇಳು ತ್ತಿದ್ದ ಗಾಂಧಿ ಅಂತೆಯೇ ನಡೆದುಕೊಂಡರು ಎಂದರು. ಪ್ರಸಾರಾಂಗದ ನಿರ್ದೇಶಕ ಪ್ರೊ. ಎಂ.ಜಿ.ಮಂಜುನಾಥ್, ಗಾಂಧಿ ಅಧ್ಯ ಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್. ಶೇಖರ್ ಮತ್ತಿತರರು ಹಾಜರಿದ್ದರು.

Translate »