ಮೈಸೂರು ವಿವಿಯಲ್ಲಿ ವ್ಯಕ್ತಿಗತ ಔಷಧದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ತರಗತಿಗೆ ಚಾಲನೆ
ಮೈಸೂರು

ಮೈಸೂರು ವಿವಿಯಲ್ಲಿ ವ್ಯಕ್ತಿಗತ ಔಷಧದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ತರಗತಿಗೆ ಚಾಲನೆ

November 29, 2019

ಮೈಸೂರು, ನ.28(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾ ನಿಲಯದ ಜೆನೆಟಿಕ್ ಮತ್ತು ಜೆನೊಮಿಕ್ಸ್ ಅಧ್ಯಯನ ವಿಭಾ ಗವು ಪೆÇ್ರ.ಎನ್.ಬಿ.ರಾಮಚಂದ್ರ ನೇತೃತ್ವದಲ್ಲಿ ವ್ಯಕ್ತಿಗತ ಔಷಧ ದಲ್ಲಿ ಸ್ನಾತಕೋತ್ತರ ಡಿಪೆÇ್ಲಮಾ ಪ್ರಾರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಮುಂದಿನ ದಿನಗಳಲ್ಲಿ ಈ ಕೋರ್ಸ್ ಅಭಿವೃದ್ಧಿ ಹೊಂದಲಿದೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿ ಮೈಸೂರು ವಿವಿ ಜೆನೆಟಿಕ್ ಅಂಡ್ ಜೆನೊಮಿಕ್ಸ್ ವಿಭಾಗ ದಿಂದ ಆಯೋಜಿಸಿದ್ದ ವೈಯಕ್ತೀಕರಿಸಿದ ಜೆನೊಮಿಕ್ಸ್ ಮೆಡಿಸಿನ್‍ನ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಜೆನೊ ಮಿಕ್ ಮೆಡಿಷನ್ ಕುರಿತು ಒಂದು ದಿನದ ಕಾರ್ಯಾಗಾರ ದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಪ್ರಾಚೀನ ಕಾಲದಲ್ಲಿ ಔಷಧೀಯ ಗುಣವುಳ್ಳ ಆಹಾರ ಇತ್ತು. ‘ಲೆಟ್ಸ್ ಫುಡ್ ಬಿ ಯುವರ್ ಮೆಡಿಸಿನ್’ ಎಂಬ ಜನಪ್ರಿಯ ಮಾತಿದೆ. ಆಯುರ್ವೇದ ಶಾಸ್ತ್ರೀಯ ಪರೀಕ್ಷೆ ಗಳಂತಹ ಪುರಾತನ ಔಷಧಿ ವ್ಯವಸ್ಥೆಗಳತ್ತ ನೀವು ಹಿಂತಿ ರುಗಿ ನೋಡಿದರೆ; ನಮ್ಮ ಪೂರ್ವಿಕರು ಸೇವಿಸಿದ ಆಹಾ ರವು ಎಲ್ಲಾ ಆರೋಗ್ಯ ಸತ್ವಗಳನ್ನು ಹೊಂದಿದ್ದು, ಅದು ಉತ್ತಮ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಕ್ಯಾನ್ಸರ್ ವಿರುದ್ಧ ಕ್ಲಿನಿಕಲ್ ಪ್ರಯೋಗ ಗಳಲ್ಲಿರುವ ಪ್ರಸಿದ್ಧ ಆಂಟಿಕಾನ್ಸರ್ ಏಜೆಂಟ್ ಕಕ್ರ್ಯುಮಿನ್ ಅನ್ನು ‘ಅರಿಶಿನ’ದಿಂದ ಪಡೆಯಲಾಗಿದೆ. ವ್ಯಾಪಕ ಔಷ ಧೀಯ ಗುಣಗಳಿಂದಾಗಿ ಸಂಶೋಧಕರು ಇದನ್ನು ಚಿನ್ನದ ಮಸಾಲೆ ಎಂದು ಕರೆದರು. ಅದೇ ರೀತಿ, ಬೇವಿನ ಎಲೆಗಳನ್ನು ಹಲವಾರು ಸೋಂಕಿನ ಚಿಕಿತ್ಸೆಗಾಗಿ ಬಳಸ ಲಾಗುತ್ತಿತ್ತು,. ಅದರಲ್ಲಿ ‘ನಿಂಬೊಲೈಡ್’ ನಂತಹ ಅತ್ಯಂತ ಪ್ರಬಲವಾದ ಔಷಧಿಯ ಗುಣವಿದೆ ಎಂದರು.

ಆದರೆ ದುರದೃಷ್ಟವಶಾತ್, ಕ್ಷಿಪ್ರ, ಅನಗತ್ಯ ಮತ್ತು ಹಾನಿ ಕಾರಕ ನಗರೀಕರಣವು ಹಲವಾರು ರೀತಿಯ ಚಯಾ ಪಚಯ ಕಾಯಿಲೆಗಳಿಗೆ ನಮ್ಮನ್ನು ಗುರಿಯಾಗಿಸುತ್ತಿದೆ. ಬದಲಾದ ಸನ್ನಿವೇಶದಲ್ಲಿ, ನಾವು ವಿಭಿನ್ನ ಔಷಧೀಯ ವ್ಯವಸ್ಥೆಗಳತ್ತ ಹೆಜ್ಜೆ ಹಾಕುತ್ತಿದ್ದೇವೆ. ನಾವು ಸ್ವಾಭಾವಿಕ ವಾದ ಅನುಕರಿಸುವ ಮತ್ತು ವಿವಿಧ ರೋಗಶಾಸ್ತ್ರದ ವಿರುದ್ಧ ಕಾರ್ಯಗತಗೊಳಿಸಿದ ಬಹಳಷ್ಟು ರಾಸಾಯನಿಕ ಘಟಕಗಳನ್ನು ಸಿದ್ಧಪಡಿಸಿದ್ದೇವೆ. ವೈಯಕ್ತೀಕರಿಸಿದ ಔಷಧ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕ್ರಾಂತಿಕಾರಿ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ‘ವೈಯ ಕ್ತೀಕರಿಸಿದ ಔಷಧವು ಉತ್ತಮ ರೋಗಿಗಳ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಪ್ರತಿಕ್ರಿಯೆ ಮತ್ತು ಹೆಚ್ಚಿನ ಸುರಕ್ಷತಾ ಅಂಶಗಳೊಂದಿಗೆ ಚಿಕಿತ್ಸೆಯನ್ನು ತಕ್ಕಂತೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಪ್ರತಿ ರೋಗಿಗೆ ಹಿಂದಿನ ರೋಗ ನಿರ್ಣಯಗಳು, ಅಪಾಯದ ಮೌಲ್ಯಮಾಪನ ಗಳು ಮತ್ತು ಸೂಕ್ತ ಚಿಕಿತ್ಸೆಯನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಜೆನೊಮಿಕ್ಸ್ ಔಷಧಿಯು ಆರೋಗ್ಯ ವನ್ನು ಸುಧಾರಿಸುವ ಭರವಸೆಯನ್ನು ಹೊಂದಿದೆ. ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಪರ್ಸೊ ನಲೈಸ್ ಜೆನೊಮಿಕ್ ಮೆಡಿಸಿನ್ ಮತ್ತು ಜೆನೊಮಿಕ್ ಮೆಡಿಸಿನ್‍ನ ಒಂದು ದಿನದ ಕಾರ್ಯಾಗಾರಕ್ಕೆ ಬೆಂಗ ಳೂರಿನ ಹ್ಯೂಮನ್ ಜೆನೆಟಿಕ್ಸ್ ಕೇಂದ್ರದ ಅತಿಥಿ ಪ್ರಾಧ್ಯಾ ಪಕ ಪ್ರೊ.ಹೆಚ್.ಎ.ರಂಗನಾಥ್ ಚಾಲನೆ ನೀಡಿದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಛೇರ್ಮನ್ ಪ್ರೊ. ಎನ್.ಬಿ.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »