ಮೈಸೂರು,ನ.28-ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಯುವತಿ ಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿ ವಂಚಿಸಿರುವ ಆರೋಪದಡಿ ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ಉಪ ನ್ಯಾಸಕನನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ವಿವಿ ಪುರಂ ನಿವಾಸಿ, ಖಾಸಗಿ ಕಾಲೇಜಿನ ಉಪನ್ಯಾಸಕ ಸಂದೇಶ್(34) ಬಂಧಿತ. ಭಾರತ್ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿ ಪರಿಚಯ ವಾದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ, ಆಕೆಯ ತಾಯಿ ಯೊಂದಿಗೂ ಈ ಬಗ್ಗೆ ಮಾತನಾಡಿದ್ದ. ಕೆಲ ದಿನಗಳ ಕಾಲ ಪರಸ್ಪರ ವಾಟ್ಸಾಪ್ ಚಾಟಿಂಗ್ ನಡೆಸಿದ್ದರು. ಕಳೆದ ತಿಂಗಳು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ…
ಮೊಬೈಲ್ ಕಳ್ಳನ ಬಂಧನ: 50 ಸಾವಿರ ರೂ. ಮೌಲ್ಯದ ಮೊಬೈಲ್ ವಶ
November 29, 2019ಮೈಸೂರು,ನ.28(ಎಸ್‍ಬಿಡಿ)- ಮೊಬೈಲ್ ಕಳ್ಳನನ್ನು ಬಂಧಿಸಿರುವ ಮೈಸೂರಿನ ಲಷ್ಕರ್ ಠಾಣೆ ಪೊಲೀಸರು, ಆತನಿಂದ ವಿವಿಧ ಕಂಪನಿಗಳ 5 ಮೊಬೈಲ್‍ಗಳನ್ನು ವಶಪಡಿ ಸಿಕೊಂಡಿದ್ದಾರೆ. ಮಂಡಿ ಮೊಹಲ್ಲಾ, ಅಕ್ಬರ್ ರಸ್ತೆ ನಿವಾಸಿ ನೌಷಾದ್‍ಪಾಷ ಅಲಿಯಾಸ್ ಚಡ್ಡು(27) ಬಂಧಿತ. ನ.25ರಂದು ಸಂಗಂ ಚಿತ್ರಮಂದಿರದ ಬಳಿ ನಡೆದು ಹೋಗುತ್ತಿದ್ದ ಕಣ್ಣನ್ ತೇಣೈಯ್ಯ ಅವರ ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಕಣ್ಣನ್ ಅವರು ಕಳ್ಳ… ಕಳ್ಳ… ಎಂದು ಕೂಗಿಕೊಂಡು ಸಬರ್ಬನ್ ಬಸ್ ನಿಲ್ದಾಣ ದವರೆಗೂ ಖದೀಮನ ಬೆನ್ನತ್ತಿದ್ದಾರೆ. ಅಷ್ಟ ರಲ್ಲಿ ಅಲ್ಲೇ ಪ್ರೀಪೇಯ್ಡ್ ಆಟೋ ನಿಲ್ದಾಣದ…
ಉಪಚುನಾವಣೆಯಲ್ಲಿ ಸಿಎಂ, ಸಚಿವರು ಸಕ್ರಿಯ ರಾಜ್ಯದಲ್ಲಿ ಆಡಳಿತ ಯಂತ್ರ ನಿಷ್ಕ್ರಿಯ: ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
November 29, 2019ಬೆಂಗಳೂರು, ನ.28(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಂಪುಟ ಪೂರ್ಣ ಪ್ರಮಾಣದಲ್ಲಿ ಉಪಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಕಾಂಗ್ರೆಸ್ ಇಂದಿಲ್ಲಿ ರಾಜ್ಯಪಾಲರಿಗೆ ದೂರು ನೀಡಿದೆ. ರಾಜಭವನಕ್ಕೆ ತೆರಳಿದ ಕೆಪಿಸಿಸಿಯ ಮುಖಂಡರ ನಿಯೋಗ ರಾಜ್ಯಪಾಲ ವಾಜುಭಾಯ್ ವಾಲಾ ಅವರ ಅನುಪಸ್ಥಿತಿಯಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿತು. ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅಭಿ ವೃದ್ಧಿಯ ವಿಷಯದಲ್ಲಿ ಹಿನ್ನಡೆಯಾಗುತ್ತಿದೆ ಎಂಬುದಾಗಿ ಈ ಹಿಂದೆ ರಾಜ್ಯ ಪಾಲರು ಸಮ್ಮಿಶ್ರ ಸರ್ಕಾರಕ್ಕೆ ಸೂಚನೆ ರವಾನಿಸಿ ಕಾಳಜಿ ವ್ಯಕ್ತಪಡಿಸಿದ್ದರು….
ಕೌನ್ ಬನೇಗಾ ಕರೋಡ್‍ಪತಿ ಹಾಟ್‍ಸೀಟ್‍ನಲ್ಲಿ ಇನ್‍ಫೋಸಿಸ್‍ನ ಡಾ. ಸುಧಾಮೂರ್ತಿ
November 26, 2019ಮೈಸೂರು,ನ.25- ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಹಿಂದಿ ಜನಪ್ರಿಯ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್‍ಪತಿ’ಯ ಹಾಟ್ ಸೀಟ್‍ನ್ನು ಇನ್‍ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ಅಲಂಕರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸುಧಾಮೂರ್ತಿ ಅವರು ಭಾಗವಹಿಸಿರುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯ ಕ್ರಮದ ಪ್ರೋಮೋ ಬಿಡುಗಡೆ ಮಾಡಿರುವ ಸೋನಿ ವಾಹಿನಿಯು ನವೆಂಬರ್ 29 ರಂದು ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಿದೆ. ‘ಕೌನ್ ಬನೇಗಾ ಕರೋಡ್‍ಪತಿ’ 11ನೇ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು,…
ಹಾಸನದಲ್ಲಿ ರಸ್ತೆ ಅಪಘಾತ: ಮಾಣಿ ನಿವಾಸಿ ಮೃತ್ಯು
November 26, 2019ಬಂಟ್ವಾಳ: ಹಾಸನದಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಪಲ್ಟಿಯಾಗಿ ಮೂಲತಃ ಮಾಣಿ ನಿವಾಸಿ ಉಗ್ಗಪ್ಪ ಮೂಲ್ಯ ಅವರ ಪುತ್ರ ಅಭಿಷೇಕ್ (27) ಮೃತಪಟ್ಟಿರುವುದಾಗಿ ವರದಿ ಯಾಗಿದೆ. ಭಾನುವಾರ ರಾತ್ರಿ ಮಾಣಿಯಿಂದ ಬಸ್ ಹತ್ತಿದ ಅಭಿಷೇಕ್ ಮುಂಜಾನೆಯ ವೇಳೆ ಬಸ್ ಪಲ್ಟಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಭಿಷೇಕ್ ಅವರಿಗೆ ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದ್ದು, ಅವರು ಇಂದು ಕೆಲಸಕ್ಕೆ ಸೇರಬೇಕಿತ್ತು. ಇತ್ತೀಚೆಗೆ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ನಿನ್ನೆ ಅವರ ಹತ್ತಿರದ ಸಂಬಂಧಿಕರ ಮದುವೆ…
ಮುಡಾ ಕಮೀಷ್ನರ್ ಕಾಂತರಾಜು ವರ್ಗ
November 26, 2019ಮೈಸೂರು, ನ.25 (ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತ ಪಿ.ಎಸ್.ಕಾಂತರಾಜು ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿಯಾಗಿ ವರ್ಗಾ ವಣೆಗೊಂಡಿರುವ ಕಾಂತರಾಜು ಅವರಿಗೆ ಅದೇ ಜಿಲ್ಲಾ ಪಂಚಾಯ್ತಿ ಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡಿ ರುವ ಶಿವಲಿಂಗೇಗೌಡರ ಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ಅವರು ಆದೇಶ ಹೊರಡಿಸಿದ್ದಾರೆ. ಕಾಂತರಾಜು ಅವರು 2017ರ…
ಮೈಸೂರು ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಅಭಿಯಾನ
November 26, 2019ಮೈಸೂರು,ನ.25(ಪಿಎಂ)- ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಪರಿ ಷ್ಕøತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಅಭಿಯಾನ ಜಿಲ್ಲೆ ಯಲ್ಲಿ ಸೋಮವಾರ ಆರಂಭಗೊಂಡಿತು. ಡಿ.10ರವರೆಗೆ ಅಭಿಯಾನ ನಡೆಯ ಲಿದ್ದು, ಕ್ಷಯ ರೋಗ ಪತ್ತೆ ಹಚ್ಚಲು ಮನೆ ಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಇದೇ ವೇಳೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಿರುವ ಇವರು, ಕ್ಷಯ ರೋಗದ…
ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ
November 26, 2019ಮೈಸೂರು, ನ.25(ಆರ್‍ಕೆಬಿ)- ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ಹಾಗೂ ಅಶೋಕಪುರಂ ಅಭಿಯಾನ ಬಳಗದಿಂದ ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯ ಕ್ರಮ ನಡೆಸಲಾಯಿತು. ಮಹಿಷನ ಪ್ರತಿಮೆಗೆ ಪುಷ್ಪಾ ರ್ಚನೆ, ಮೇಣದ ಬತ್ತಿ ಗೌರವ ಸಲ್ಲಿಸಲಾಯಿತು. ಬಳಿಕ ಮಹಿಷಾ ಮಹಾರಾಜನಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮಹಿಷಾ ಒಬ್ಬ ಆಡಳಿತಗಾರ, ಮಹಾರಾಜನನ್ನು ರಾಕ್ಷಸ ಎಂದು ಮನುವಾದಿಗಳು ಬಿಂಬಿಸಿದ್ದಾರೆ. ಹೀಗಾಗಿ ಕಳೆದ 7 ವರ್ಷಗಳಿಂದ ಮಹಿಷಾ…
ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾವಳಿ ಲೀಗ್‍ಗೆ ಚಾಲನೆ
November 26, 2019ಮೈಸೂರು,ನ.25(ಪಿಎಂ)-ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾ ವಳಿಯ ಲೀಗ್ ಪಂದ್ಯಗಳು ಇಂದಿನಿಂದ ಮೈಸೂರಿನ ಎಸ್‍ಜೆಸಿಇ-ಕೆಎಸ್‍ಸಿಎ ಮೈದಾನದಲ್ಲಿ ಆರಂಭ ಗೊಂಡಿದ್ದು, ನ.27ರವರೆಗೆ ಒಟ್ಟು 5 ಪಂದ್ಯಗಳು ನಡೆಯಲಿವೆ. `ಎ’ ಗುಂಪಿನಿಂದ ಕರ್ನಾಟಕ, ಹರಿಯಾಣ, ಗೋವಾ ಮತ್ತು ದೆಹಲಿ ತಂಡಗಳು ಈ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ತ್ರಿಪುರ ರಾಜ್ಯದ ಅಗರ್ತಲಾ ನಗರದಲ್ಲಿ ಪಂದ್ಯಾವಳಿಗೆ ಚಾಲನೆ ಸಿಕ್ಕಿದ್ದು, ದೇಶದ 11 ಸ್ಥಳಗಳಲ್ಲಿ ಇದೇ ರೀತಿ ಲೀಗ್ ಪಂದ್ಯಗಳು ನಡೆಯಲಿವೆ. 2020ರ ಜನವರಿ ಅಂತ್ಯದಲ್ಲಿ ದೆಹಲಿಯಲ್ಲಿ ಫೈನಲ್…
ರಾಷ್ಟ್ರಮಟ್ಟದ ಕ್ರಿಕೆಟ್‍ಗೆ ಮೈಸೂರಿನ ನಾಲ್ವರು ಬಾಲಕರು ಆಯ್ಕೆ
November 26, 2019ಮೈಸೂರು, ನ.25(ವೈಡಿಎಸ್)- ದಮನ್ ಅಂಡ್ ದಿಯು ದ್ವೀಪ ಸಮೂಹದಲ್ಲಿ ನಡೆ ಯುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾ ವಳಿಗೆ ಮೈಸೂರಿನ ನಾಲ್ವರು ಕಿರಿಯ ಕ್ರೀಡಾ ಪಟುಗಳು ಆಯ್ಕೆಯಾಗಿದ್ದಾರೆ. ದಮನ್ ದಿಯು ದ್ವೀಪದಲ್ಲಿ 2020ರ ಜ.3ರಿಂದ 8ರವರೆಗೆ 17 ವರ್ಷದೊಳಗಿನ ಕ್ರೀಡಾಪಟು ಗಳಿಗೆ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಮೈಸೂರಿನಿಂದ ಸಿದ್ದಾರ್ಥ ನಗರ ನಿವಾಸಿ ಹಂ.ಪಾ.ನಾಗರಾಜ್ ಮತ್ತು ಜಯಲಕ್ಷ್ಮಿ ದಂಪತಿ ಪುತ್ರ ಹೆಚ್.ಎನ್. ಪವನ್, ನಂದಿನಿ ಲೇಔಟ್‍ನ ಸಿದ್ದರಾಜು ಮತ್ತು ಸೌಮ್ಯ ದಂಪತಿ ಪುತ್ರ ಲಿಖಿತ್ ಎಸ್.ಗೌಡ, ವಸಂತನಗರದ ಸುಂದರ್…










