ಮುಡಾ ಕಮೀಷ್ನರ್ ಕಾಂತರಾಜು ವರ್ಗ
ಮೈಸೂರು

ಮುಡಾ ಕಮೀಷ್ನರ್ ಕಾಂತರಾಜು ವರ್ಗ

November 26, 2019

ಮೈಸೂರು, ನ.25 (ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತ ಪಿ.ಎಸ್.ಕಾಂತರಾಜು ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿಯಾಗಿ ವರ್ಗಾ ವಣೆಗೊಂಡಿರುವ ಕಾಂತರಾಜು ಅವರಿಗೆ ಅದೇ ಜಿಲ್ಲಾ ಪಂಚಾಯ್ತಿ ಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡಿ ರುವ ಶಿವಲಿಂಗೇಗೌಡರ ಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಜಿ.ಶ್ಯಾಮ ಹೊಳ್ಳ ಅವರು ಆದೇಶ ಹೊರಡಿಸಿದ್ದಾರೆ. ಕಾಂತರಾಜು ಅವರು 2017ರ ಸೆಪ್ಟೆಂಬರ್ 25ರಂದು ಮುಡಾ ಕಮೀಷ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಮೈಸೂರಿನ ಆರ್‍ಟಿ ನಗರ, ಲಲಿತಾದ್ರಿ ನಗರಗಳ ನಿವೇಶನ ಹಂಚಿಕೆ, ಸಿಎ ನಿವೇಶನಗಳ ಹಂಚಿಕೆಗೆ ಸಿದ್ಧತೆ, ಬಲ್ಲಹಳ್ಳಿ ಹೊಸ ಬಡಾವಣೆಗೆ ಭೂಮಿ ಪಡೆಯಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು.

Translate »