ಹಾಸನದಲ್ಲಿ ರಸ್ತೆ ಅಪಘಾತ: ಮಾಣಿ ನಿವಾಸಿ ಮೃತ್ಯು
ಮೈಸೂರು

ಹಾಸನದಲ್ಲಿ ರಸ್ತೆ ಅಪಘಾತ: ಮಾಣಿ ನಿವಾಸಿ ಮೃತ್ಯು

November 26, 2019

ಬಂಟ್ವಾಳ: ಹಾಸನದಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಪಲ್ಟಿಯಾಗಿ ಮೂಲತಃ ಮಾಣಿ ನಿವಾಸಿ ಉಗ್ಗಪ್ಪ ಮೂಲ್ಯ ಅವರ ಪುತ್ರ ಅಭಿಷೇಕ್ (27) ಮೃತಪಟ್ಟಿರುವುದಾಗಿ ವರದಿ ಯಾಗಿದೆ. ಭಾನುವಾರ ರಾತ್ರಿ ಮಾಣಿಯಿಂದ ಬಸ್ ಹತ್ತಿದ ಅಭಿಷೇಕ್ ಮುಂಜಾನೆಯ ವೇಳೆ ಬಸ್ ಪಲ್ಟಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅಭಿಷೇಕ್ ಅವರಿಗೆ ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದ್ದು, ಅವರು ಇಂದು ಕೆಲಸಕ್ಕೆ ಸೇರಬೇಕಿತ್ತು. ಇತ್ತೀಚೆಗೆ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ನಿನ್ನೆ ಅವರ ಹತ್ತಿರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಅವರ ಊರಿಗೆ ಬಂದಿದ್ದರು. ಮದುವೆ ಮುಗಿಸಿ ವಾಪಾಸು ಊರಿನಿಂದ ಬಸ್ ಮೂಲಕ ಬೆಂಗಳೂರಿಗೆ ತಮ್ಮನ ಜೊತೆ ಯಲ್ಲಿ ಪ್ರಯಾಣ ಬೆಳೆಸಿದ್ದರು. ಹಾಸನ ಸಮೀಪ ಬಸ್ ಪಲ್ಟಿಯಾಗಿ ಅಭಿಷೇಕ್ ಮೃತಪಟ್ಟಿದ್ದು, ಅವರ ತಮ್ಮನಿಗೂ ಗಾಯಗಳಾಗಿದೆ.

Translate »