ಮೈಸೂರು,ನ.25- ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಹಿಂದಿ ಜನಪ್ರಿಯ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್‍ಪತಿ’ಯ ಹಾಟ್ ಸೀಟ್‍ನ್ನು ಇನ್‍ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ಅಲಂಕರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಸುಧಾಮೂರ್ತಿ ಅವರು ಭಾಗವಹಿಸಿರುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯ ಕ್ರಮದ ಪ್ರೋಮೋ ಬಿಡುಗಡೆ ಮಾಡಿರುವ ಸೋನಿ ವಾಹಿನಿಯು ನವೆಂಬರ್ 29 ರಂದು ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಿದೆ.
‘ಕೌನ್ ಬನೇಗಾ ಕರೋಡ್‍ಪತಿ’ 11ನೇ ಆವೃತ್ತಿಯು ಅಂತಿಮ ಘಟ್ಟ ತಲುಪಿದ್ದು, ಡಾ. ಸುಧಾಮೂರ್ತಿ ಅವರ ಮೂಲಕ ಈ ಆವೃತ್ತಿ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾ ಗಿದೆ. ಸುಧಾಮೂರ್ತಿ ಅವರನ್ನು ‘ಕೌನ್ ಬನೇಗಾ ಕರೋಡ್‍ಪತಿ’ ಸೆಟ್‍ನಲ್ಲಿ ತಾವು ಭೇಟಿ ಮಾಡಿದ್ದನ್ನು ನ.12ರಂದು ಅಮಿ ತಾಭ್ ಬಚ್ಚನ್ ಅವರು ತಮ್ಮ ಅಧಿಕೃತ ಬ್ಲಾಗ್‍ನಲ್ಲಿ ಪ್ರಕಟಿಸಿದ್ದರು. ಆದರೆ, ಸುಧಾ ಮೂರ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಸೆಟ್‍ಗೆ ಹೋಗಿದ್ದರೇ ಅಥವಾ ಅತಿಥಿಗಳಾಗಿ ಹೋಗಿದ್ದರೇ? ಎಂಬುದರ ಬಗ್ಗೆ ಸ್ಪಷ್ಟ ವಾಗಿ ಏನನ್ನೂ ತಿಳಿಸಿರಲಿಲ್ಲ. ಆದರೆ, ಈಗ ಸೋನಿ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಿಂದಾಗಿ ಸುಧಾಮೂರ್ತಿ ಸ್ಪರ್ಧೆ ಯಲ್ಲಿ ಭಾಗವಹಿಸಿರುವುದು ಖಚಿತವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಸೆಟ್‍ಗೆ ತೆರಳಿದ್ದ ಸುಧಾಮೂರ್ತಿ ಅವರ ಕಾಲಿಗೆ ನಮಸ್ಕಾರ ಮಾಡಿ ಅಮಿತಾಬ್ ಬಚ್ಚನ್ ಆಶೀರ್ವಾದ ಪಡೆದಿದ್ದರು. ಆ ಸಂದರ್ಭ ದಲ್ಲಿ ಸುಧಾಮೂರ್ತಿಯವರು ದೇವದಾಸಿ ಯರು ನೇಯ್ದಿರುವ ಚಾದರವೊಂದನ್ನು ಅಮಿತಾಬ್ ಅವರಿಗೆ ಉಡುಗೊರೆ ನೀಡಿದ್ದರು.
‘ಕೌನ್ ಬನೇಗಾ ಕರೋಡ್‍ಪತಿ’ಯಲ್ಲಿ ಡಾ. ಸುಧಾಮೂರ್ತಿಯವರು ‘ನಾನು ಸಿನಿಮಾ ಪ್ರೇಮಿ. ಹಾಗಾಗಿ ಅಮಿತಾಬ್ ಬಚ್ಚನ್ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿ ಯಾಗಿದೆ. ಸೋಲು-ಗೆಲುವು ದೊಡ್ಡದಲ್ಲ. ನಾವು ಮಾಡುವ ಕೆಲಸದ ಮೂಲಕ ಜನರನ್ನು ತಲುಪುವುದು ಮುಖ್ಯ. ಇನ್‍ಫೋಸಿಸ್ ಪ್ರತಿಷ್ಠಾನದ ಜೊತೆಗೆ ಕಳೆದ 23 ವರ್ಷ ಗಳಿಂದ ತೊಡಗಿಸಿಕೊಂಡಿದ್ದೇನೆ. ಬರಗಾಲ, ನೆರೆ, ಸುನಾಮಿ ಹಾಗೂ ಭೂಕಂಪದಂತಹ ಪ್ರಕೃತಿ ವಿಕೋಪಗಳಿಗೆ ತುತ್ತಾದ ಜನರಿಗೆ ಸಹಾಯ ಮಾಡಿದ್ದೇವೆ. ಶಾಲೆ, ಆಸ್ಪತ್ರೆ, ಗ್ರಂಥಾಲಯಗಳ ಜೊತೆಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯವನ್ನು ಒದಗಿಸಿದ್ದೇವೆ. ಹೈದರಾಬಾದ್ ಬಳಿ ಭಾರತದಲ್ಲೇ ಅತೀ ದೊಡ್ಡದಾದ ಅಡುಗೆ ಕೋಣೆಯನ್ನು ನಿರ್ಮಿಸಿದ್ದು, ಅಲ್ಲಿ 1 ಲಕ್ಷ ಮಕ್ಕಳಿಗೆ ಊಟ ತಯಾರಾಗುತ್ತಿದೆ. ಅಕ್ಷಯ ಪಾತ್ರೆ ಊಟ ವನ್ನು ತಯಾರಿಸಲು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದು ತಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ನೆನ ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.