ಮೈಸೂರು ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಅಭಿಯಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಅಭಿಯಾನ

November 26, 2019

ಮೈಸೂರು,ನ.25(ಪಿಎಂ)- ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಪರಿ ಷ್ಕøತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಅಭಿಯಾನ ಜಿಲ್ಲೆ ಯಲ್ಲಿ ಸೋಮವಾರ ಆರಂಭಗೊಂಡಿತು.

ಡಿ.10ರವರೆಗೆ ಅಭಿಯಾನ ನಡೆಯ ಲಿದ್ದು, ಕ್ಷಯ ರೋಗ ಪತ್ತೆ ಹಚ್ಚಲು ಮನೆ ಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಇದೇ ವೇಳೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಿರುವ ಇವರು, ಕ್ಷಯ ರೋಗದ ಪ್ರಕರಣಗಳು ಕಂಡು ಬಂದರೆ ಕಫ ಪಡೆದು ಪರೀಕ್ಷೆಗೆ ಕಳುಹಿ ಸಲಿದ್ದಾರೆ. `ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯೊಲೋಸಿಸ್’ ಸೂಕ್ಷ್ಮ ರೋಗಾಣು ವಿನಿಂದ ಬರುವ ಕ್ಷಯ ರೋಗ ನಿಯಂ ತ್ರಣಕ್ಕಾಗಿ ಈ ಕಾರ್ಯಕ್ರಮ ರೂಪಿಸ ಲಾಗಿದೆ. ಜಿಲ್ಲೆಯಲ್ಲಿರುವ ಕೊಳಗೇರಿಗಳು, ಅಸಂಘಟಿತ ಕಾರ್ಮಿಕರ ಪ್ರದೇಶಗಳು ಸೇರಿದಂತೆ ಒಟ್ಟು 6 ಲಕ್ಷ ಜನಸಂಖ್ಯೆ ಯನ್ನು ತಪಾಸಣೆಗೆ ಒಳಪಡಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 1,800 ತಂಡಗಳನ್ನು ರಚನೆ ಮಾಡಿದ್ದು, ಒಂದು ತಂಡದಲ್ಲಿ ಇಬ್ಬರಂತೆ 3,600 ಮಂದಿ ಈ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವ ಹಿಸಲಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿ ಮೂಲ ಗಳು ತಿಳಿಸಿವೆ.

ಈ ಹಿಂದೆ ಹೆಚ್ಚು ಕ್ಷಯ ರೋಗ ಪ್ರಕ ರಣಗಳು ವರದಿ ಆಗಿರುವ ಪ್ರದೇಶಗಳು, ಕೊಳಗೇರಿ ಪ್ರದೇಶಗಳು, ಅಲೆಮಾರಿ ಜನ ಸಮುದಾಯ ವಾಸಿಸುವ ಪ್ರದೇಶ, ಗಿರಿಜನ ಹಾಡಿಗಳಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕ್ಷಯ ರೋಗ ಲಕ್ಷಣಗಳನ್ನು ಹೊಂದಿರುವ ಸಂಭವ ನೀಯ ರೋಗಿಗಳನ್ನು ಗುರುತಿಸಿ, ಪರೀಕ್ಷೆಗೆ ವ್ಯವಸ್ಥೆ ಮಾಡಲಿದ್ದಾರೆ. ಕ್ಷಯರೋಗ ಪರೀಕ್ಷೆ ಹಾಗೂ ಚಿಕಿತ್ಸೆ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಿದ್ದು, ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ 500 ರೂ. ಸಹಾಯಧನವನ್ನು ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ನೀಡ ಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂ ತ್ರಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Translate »