ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ
ಮೈಸೂರು

ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ

November 26, 2019

ಮೈಸೂರು, ನ.25(ಆರ್‍ಕೆಬಿ)- ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಹಾಗೂ ಅಶೋಕಪುರಂ ಅಭಿಯಾನ ಬಳಗದಿಂದ ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯ ಕ್ರಮ ನಡೆಸಲಾಯಿತು. ಮಹಿಷನ ಪ್ರತಿಮೆಗೆ ಪುಷ್ಪಾ ರ್ಚನೆ, ಮೇಣದ ಬತ್ತಿ ಗೌರವ ಸಲ್ಲಿಸಲಾಯಿತು. ಬಳಿಕ ಮಹಿಷಾ ಮಹಾರಾಜನಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮಹಿಷಾ ಒಬ್ಬ ಆಡಳಿತಗಾರ, ಮಹಾರಾಜನನ್ನು ರಾಕ್ಷಸ ಎಂದು ಮನುವಾದಿಗಳು ಬಿಂಬಿಸಿದ್ದಾರೆ.

ಹೀಗಾಗಿ ಕಳೆದ 7 ವರ್ಷಗಳಿಂದ ಮಹಿಷಾ ದಸರಾ ಆಚರಿಸಿಕೊಂಡು ಬರುತ್ತಿz್ದÉೀವೆ. ಆದರೆ ಈ ಬಾರಿ ಸಂಸದ ಪ್ರತಾಪ ಸಿಂಹ ಅವರ ದುರ್ವರ್ತನೆಯಿಂದಾಗಿ ಈ ಬಾರಿ ಮಹಿಷಾ ದಸರಾ ಸ್ಥಗಿತಗೊಂಡಿತು. ಆದ್ದರಿಂದ ದಸರಾದ ಬಳಿಕ ಪ್ರತಿ ಅಮಾವಾಸ್ಯೆ ಹಿಂದಿನ ದಿನ ಮಹಿಷಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತಿz್ದÉೀವೆ ಎಂದರು. ಟ್ರಸ್ಟ್‍ನ ಚಿಕ್ಕಂದಾನಿ, ಅಶೋಕಪುರಂ ಅಭಿಮಾನಿ ಬಳಗದ ಸುರೇಂದ್ರಕುಮಾರ್, ಸಿದ್ದಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »