ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾವಳಿ ಲೀಗ್‍ಗೆ ಚಾಲನೆ
ಮೈಸೂರು

ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾವಳಿ ಲೀಗ್‍ಗೆ ಚಾಲನೆ

November 26, 2019

ಮೈಸೂರು,ನ.25(ಪಿಎಂ)-ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾ ವಳಿಯ ಲೀಗ್ ಪಂದ್ಯಗಳು ಇಂದಿನಿಂದ ಮೈಸೂರಿನ ಎಸ್‍ಜೆಸಿಇ-ಕೆಎಸ್‍ಸಿಎ ಮೈದಾನದಲ್ಲಿ ಆರಂಭ ಗೊಂಡಿದ್ದು, ನ.27ರವರೆಗೆ ಒಟ್ಟು 5 ಪಂದ್ಯಗಳು ನಡೆಯಲಿವೆ.

`ಎ’ ಗುಂಪಿನಿಂದ ಕರ್ನಾಟಕ, ಹರಿಯಾಣ, ಗೋವಾ ಮತ್ತು ದೆಹಲಿ ತಂಡಗಳು ಈ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ತ್ರಿಪುರ ರಾಜ್ಯದ ಅಗರ್ತಲಾ ನಗರದಲ್ಲಿ ಪಂದ್ಯಾವಳಿಗೆ ಚಾಲನೆ ಸಿಕ್ಕಿದ್ದು, ದೇಶದ 11 ಸ್ಥಳಗಳಲ್ಲಿ ಇದೇ ರೀತಿ ಲೀಗ್ ಪಂದ್ಯಗಳು ನಡೆಯಲಿವೆ. 2020ರ ಜನವರಿ ಅಂತ್ಯದಲ್ಲಿ ದೆಹಲಿಯಲ್ಲಿ ಫೈನಲ್ ಪಂದ್ಯ ಆಯೋಜಿಸಲು ಉದ್ದೇಶಿಸಲಾಗಿದೆ.

ಈ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳ 24 ತಂಡ ಗಳು ಭಾಗವಹಿಸಿದ್ದು, ಒಟ್ಟು 336 ಪಟುಗಳು ಪಾಲ್ಗೊಂ ಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ವಾಗಿ ಆಡಿರುವ ಸುನಿಲ್ ರಮೇಶ್ 14 ಮಂದಿ ಒಳಗೊಂಡ ಕರ್ನಾಟಕ ರಾಜ್ಯ ತಂಡದ ನೇತೃತ್ವ ವಹಿಸಿದ್ದಾರೆ.

ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (ಕೆಸಿಎಬಿ), ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 2ನೇ ಆವೃ ತ್ತಿಯ `ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ20 ಅಂಧರ ಕ್ರಿಕೆಟ್ ಪಂದ್ಯಾವಳಿ’ ಆಯೋಜಿಸಲಾಗಿದೆ.
ಮೈಸೂರಿನ ಎಸ್‍ಜೆಸಿಇ-ಕೆಎಸ್‍ಸಿಎ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡಿರುವ ಲೀಗ್ ಪಂದ್ಯದಲ್ಲಿ ಕರ್ನಾ ಟಕ ಹಾಗೂ ಹರಿಯಾಣ ತಂಡಗಳು ಬೆಳಿಗ್ಗೆ ಸೆಣಸಾಡಿ ದರೆ, ಮಧ್ಯಾಹ್ನ ಗೋವಾ ಮತ್ತು ದೆಹಲಿ ತಂಡಗಳು ಪರಸ್ಪರ ಹಣಾಹಣಿ ನಡೆಸಿದವು. ನ.26ರಂದು ಬೆಳಿಗ್ಗೆ 9.30ಕ್ಕೆ ಕರ್ನಾಟಕ ಮತ್ತು ದೆಹಲಿ ತಂಡಗಳು, ಮಧ್ಯಾಹ್ನ 1.30ಕ್ಕೆ ಗೋವಾ ಮತ್ತು ಹರಿಯಾಣ ನಡುವೆ ಪಂದ್ಯ ಗಳು ನಡೆಯಲಿವೆ. ಮೈಸೂರಿನ ಲೀಗ್‍ನ ಕೊನೆ ದಿನ ವಾದ ನ.27ರಂದು ಬೆಳಿಗ್ಗೆ 9.30ಕ್ಕೆ ಕರ್ನಾಟಕ ಮತ್ತು ಗೋವಾ ತಂಡಗಳ ನಡುವೆ ಪಂದ್ಯ ನಡೆಯಲಿದೆ.

ಪಂದ್ಯಾವಳಿಯಲ್ಲಿ ವಿಜೇತವಾಗುವ ತಂಡಕ್ಕೆ ಲಕ್ಷ ರೂ. ನಗದು ಬಹುಮಾನ ಹಾಗೂ ಟ್ರೋಫಿ ಲಭಿಸಲಿದೆ. ರನ್ನರ್ ಅಪ್ ತಂಡಕ್ಕೆ 75 ಸಾವಿರ ರೂ. ನಗದು ಬಹುಮಾನ, ತೃತೀಯ ಹಾಗೂ ನಾಲ್ಕನೇ ಸ್ಥಾನ ಗಳಿಸಿದ ತಂಡಗಳಿಗೆ ತಲಾ 40 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ದೊರೆಯಲಿದೆ.

ಚಾಲನೆ: ಮೈಸೂರಿನ ಲೀಗ್ ಪಂದ್ಯಗಳಿಗೆ ಇಂದು ಬೆಳಿಗ್ಗೆ ಕೆಎಸ್‍ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿ ಯೇಷನ್) ಮೈಸೂರು ವಲಯ ಸಂಚಾಲಕ ಸುಧಾಕರ್ ರೈ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಸಿಎಬಿಐ ಅಧ್ಯಕ್ಷ ಹಾಗೂ ಸಮರ್ಥನಂ ಸಂಸ್ಥೆ ಸಂಸ್ಥಾಪಕ ಜಿ.ಕೆ.ಮಹಾಂತೇಶ್, ನನಗೆ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ಬಹಳ ಆಸಕ್ತಿ. ಆದರೆ ನಾವು ಕ್ರಿಕೆಟ್ ಆಡುವಾಗ ಸದ್ದು ಮಾಡುವ ಬಾಲ್ ವ್ಯವಸ್ಥೆ ಸೇರಿದಂತೆ ಯಾವುದೇ ಸಮರ್ಪಕ ಸೌಲಭ್ಯಗಳು ಇರಲಿಲ್ಲ (ಮಹಾಂತೇಶ್ ಅವರು ದೃಷ್ಟಿ ವಿಶೇಷಚೇತನರು). ಡಬ್ಬಿಗಳಿಗೆ ಕಲ್ಲು ತುಂಬಿ ಬಾಲ್‍ನಂತೆ ಬಳಸಿಕೊಳ್ಳುತ್ತಿದ್ದೆವು. ಆದರೆ ಈಗ ಸಾಕಷ್ಟು ಸೌಲಭ್ಯಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಟಗಾರರಿಗೆ ಸಲಹೆ ನೀಡಿದರು.

ಮೈಸೂರಿನ ಲೀಗ್ ಪಂದ್ಯಗಳನ್ನು ವೀಕ್ಷಿಸಲು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ರಾಜ್ಯ ಅಂಗವಿಕಲರ ಆಯೋಗದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ, ಕೆಎಸ್‍ಸಿಎ ಮೈಸೂರು ವಲಯ ಅಧ್ಯಕ್ಷ ಹರಿಕೃಷ್ಣ, ಮಾಜಿ ಸಂಚಾ ಲಕ ಎಸ್.ಬಾಲಚಂದ್ರ, ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ರೆಜಿನಾಲ್ಡ್ ವೆಸ್ಲಿ, ಮೈಸೂರು ಭಾರತ್ ಇಂಟರ್‍ನ್ಯಾಷನಲ್ ಟ್ರಾವೆಲ್‍ನ ನಿರ್ದೇಶಕ ಮಹೇಂದ್ರ ಸಾಲಿನ್ ಮತ್ತಿತರರು ಹಾಜರಿದ್ದರು.

Translate »