ರಾಷ್ಟ್ರಮಟ್ಟದ ಕ್ರಿಕೆಟ್‍ಗೆ ಮೈಸೂರಿನ ನಾಲ್ವರು ಬಾಲಕರು ಆಯ್ಕೆ
ಮೈಸೂರು

ರಾಷ್ಟ್ರಮಟ್ಟದ ಕ್ರಿಕೆಟ್‍ಗೆ ಮೈಸೂರಿನ ನಾಲ್ವರು ಬಾಲಕರು ಆಯ್ಕೆ

November 26, 2019

ಮೈಸೂರು, ನ.25(ವೈಡಿಎಸ್)- ದಮನ್ ಅಂಡ್ ದಿಯು ದ್ವೀಪ ಸಮೂಹದಲ್ಲಿ ನಡೆ ಯುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾ ವಳಿಗೆ ಮೈಸೂರಿನ ನಾಲ್ವರು ಕಿರಿಯ ಕ್ರೀಡಾ ಪಟುಗಳು ಆಯ್ಕೆಯಾಗಿದ್ದಾರೆ. ದಮನ್ ದಿಯು ದ್ವೀಪದಲ್ಲಿ 2020ರ ಜ.3ರಿಂದ 8ರವರೆಗೆ 17 ವರ್ಷದೊಳಗಿನ ಕ್ರೀಡಾಪಟು ಗಳಿಗೆ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಮೈಸೂರಿನಿಂದ ಸಿದ್ದಾರ್ಥ ನಗರ ನಿವಾಸಿ ಹಂ.ಪಾ.ನಾಗರಾಜ್ ಮತ್ತು ಜಯಲಕ್ಷ್ಮಿ ದಂಪತಿ ಪುತ್ರ ಹೆಚ್.ಎನ್. ಪವನ್, ನಂದಿನಿ ಲೇಔಟ್‍ನ ಸಿದ್ದರಾಜು ಮತ್ತು ಸೌಮ್ಯ ದಂಪತಿ ಪುತ್ರ ಲಿಖಿತ್ ಎಸ್.ಗೌಡ, ವಸಂತನಗರದ ಸುಂದರ್ ನಾಯಕ್ ಮತ್ತು ಸೀಮಾ ದಂಪತಿ ಪುತ್ರ ಯದುನಂದನ್ ಹಾಗೂ ಸರಸ್ವತಿಪುರಂನ ಮಂಜೇಗೌಡ ಮತ್ತು ಶಶಿಕಲಾ ದಂಪತಿ ಪುತ್ರ ಎಂ.ಯಶವಂತ್ ಆಯ್ಕೆಯಾಗಿದ್ದಾರೆ.

ಹೆಚ್.ಎನ್.ಪವನ್ ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವ ರೋಟರಿ ಶಾಲೆ ಮತ್ತು ಯದುನಂದನ್ ಸಿದ್ದಾರ್ಥನಗರದ ಗೀತಾ ಶಿಶು ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆ, ಲಿಖಿತ್ ಎಸ್.ಗೌಡ ಮರಿಮಲ್ಲಪ್ಪ ಪ್ರೌಢಶಾಲೆ ಮತ್ತು ಯಶ ವಂತ್ ವಿಜಯವಿಠಲ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ.

ಪವನ್, ಎರಡು ಬಾರಿ ರಾಜ್ಯಮಟ್ಟದ ಪಂದ್ಯಗಳಲ್ಲಿ ಭಾಗವಹಿಸಿದ್ದು, ಮೊದಲ ಬಾರಿಗೆ ರಾಷ್ಟ್ರಮಟ್ಟದ ಪಂದ್ಯದಲ್ಲಿ ಭಾಗ ವಹಿಸುತ್ತಿದ್ದಾನೆ. ಲಿಖಿತ್ ಎಸ್.ಗೌಡ-2 ಬಾರಿ ರಾಜ್ಯ ಹಾಗೂ ರಾಷ್ಟ್ರಮಟ್ಟ, ಯದು ನಂದನ್ ಹಾಗೂ ಯಶವಂತ್-ರಾಜ್ಯ ಮಟ್ಟದ ಪಂದ್ಯದಲ್ಲಿ ಭಾಗವಹಿಸಿದ್ದಾರೆ.

Translate »