ಮೊಬೈಲ್ ಕಳ್ಳನ ಬಂಧನ: 50 ಸಾವಿರ ರೂ. ಮೌಲ್ಯದ ಮೊಬೈಲ್ ವಶ
ಮೈಸೂರು

ಮೊಬೈಲ್ ಕಳ್ಳನ ಬಂಧನ: 50 ಸಾವಿರ ರೂ. ಮೌಲ್ಯದ ಮೊಬೈಲ್ ವಶ

November 29, 2019

ಮೈಸೂರು,ನ.28(ಎಸ್‍ಬಿಡಿ)- ಮೊಬೈಲ್ ಕಳ್ಳನನ್ನು ಬಂಧಿಸಿರುವ ಮೈಸೂರಿನ ಲಷ್ಕರ್ ಠಾಣೆ ಪೊಲೀಸರು, ಆತನಿಂದ ವಿವಿಧ ಕಂಪನಿಗಳ 5 ಮೊಬೈಲ್‍ಗಳನ್ನು ವಶಪಡಿ ಸಿಕೊಂಡಿದ್ದಾರೆ. ಮಂಡಿ ಮೊಹಲ್ಲಾ, ಅಕ್ಬರ್ ರಸ್ತೆ ನಿವಾಸಿ ನೌಷಾದ್‍ಪಾಷ ಅಲಿಯಾಸ್ ಚಡ್ಡು(27) ಬಂಧಿತ. ನ.25ರಂದು ಸಂಗಂ ಚಿತ್ರಮಂದಿರದ ಬಳಿ ನಡೆದು ಹೋಗುತ್ತಿದ್ದ ಕಣ್ಣನ್ ತೇಣೈಯ್ಯ ಅವರ ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಕಣ್ಣನ್ ಅವರು ಕಳ್ಳ… ಕಳ್ಳ… ಎಂದು ಕೂಗಿಕೊಂಡು ಸಬರ್ಬನ್ ಬಸ್ ನಿಲ್ದಾಣ ದವರೆಗೂ ಖದೀಮನ ಬೆನ್ನತ್ತಿದ್ದಾರೆ. ಅಷ್ಟ ರಲ್ಲಿ ಅಲ್ಲೇ ಪ್ರೀಪೇಯ್ಡ್ ಆಟೋ ನಿಲ್ದಾಣದ ಸಮೀಪ ಕರ್ತವ್ಯದಲ್ಲಿದ್ದ ದೇವರಾಜ ಸಂಚಾರ ಠಾಣೆಯ ಯತಿರಾಜ್ ಹಾಗೂ ಸಿದ್ದಾರ್ಥ ಸಂಚಾರ ಠಾಣೆಯ ಪ್ರಸನ್ನ, ಕಳ್ಳನನ್ನು ಹಿಡಿ ದಿದ್ದಾರೆ. ಕೂಡಲೇ ಲಷ್ಕರ್ ಠಾಣೆ ಇನ್ ಸ್ಪೆಕ್ಟರ್ ಎನ್.ಮುನಿಯಪ್ಪ, ಸಬ್‍ಇನ್‍ಸ್ಪೆಕ್ಟರ್ ಪೂಜಾ, ಎಎಸ್‍ಐ ರಾಜು, ಸಿಬ್ಬಂದಿ ಪರ ಶಿವಮೂರ್ತಿ, ಲೋಕೇಶ, ಪ್ರದೀಪ ಹಾಗೂ ಮಂಜುನಾಥ್ ಖದೀಮ ನೌಷಾದ್ ಪಾಷ ನನ್ನು ಬಂಧಿಸಿ, ಸುಮಾರು 50 ಸಾವಿರ ರೂ. ಮೌಲ್ಯದ 5 ಮೊಬೈಲ್ ಹಾಗೂ ಚಾಕು ವನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತು ಸೇವನೆ ದುಶ್ಚಟವುಳ್ಳ ನೌಷಾದ್‍ಪಾಷ, ಚಾಕು ತೋರಿಸಿ, ಸಾರ್ವಜನಿಕರ ಬೆದರಿಸಿ, ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದ ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಬಂಧನದ ಬಳಿಕ ನ್ಯಾಯಾ ಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲೂ ತಾನೇ ಪೆಟ್ಟು ಮಾಡಿಕೊಂಡು, ಅನುಚಿತವಾಗಿ ವರ್ತಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

Translate »