ಮದುವೆಯಾಗುವುದಾಗಿ ಯುವತಿ ನಂಬಿಸಿ ಅತ್ಯಾಚಾರ: ಖಾಸಗಿ ಕಾಲೇಜು ಉಪನ್ಯಾಸಕನ ಬಂಧನ
ಮೈಸೂರು

ಮದುವೆಯಾಗುವುದಾಗಿ ಯುವತಿ ನಂಬಿಸಿ ಅತ್ಯಾಚಾರ: ಖಾಸಗಿ ಕಾಲೇಜು ಉಪನ್ಯಾಸಕನ ಬಂಧನ

November 29, 2019

ಮೈಸೂರು,ನ.28-ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಯುವತಿ ಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿ ವಂಚಿಸಿರುವ ಆರೋಪದಡಿ ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ಉಪ ನ್ಯಾಸಕನನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ವಿವಿ ಪುರಂ ನಿವಾಸಿ, ಖಾಸಗಿ ಕಾಲೇಜಿನ ಉಪನ್ಯಾಸಕ ಸಂದೇಶ್(34) ಬಂಧಿತ. ಭಾರತ್ ಮ್ಯಾಟ್ರಿಮೋನಿ ವೆಬ್‍ಸೈಟ್‍ನಲ್ಲಿ ಪರಿಚಯ ವಾದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ, ಆಕೆಯ ತಾಯಿ ಯೊಂದಿಗೂ ಈ ಬಗ್ಗೆ ಮಾತನಾಡಿದ್ದ. ಕೆಲ ದಿನಗಳ ಕಾಲ ಪರಸ್ಪರ ವಾಟ್ಸಾಪ್ ಚಾಟಿಂಗ್ ನಡೆಸಿದ್ದರು. ಕಳೆದ ತಿಂಗಳು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅತ್ಯಾಚಾರವೆಸಗಿದ್ದ ಎಂದು ಹೇಳಲಾಗಿದೆ. ಅಲ್ಲದೆ ಮೊಬೈಲ್‍ನಲ್ಲಿರುವ ಸಂದೇಶಗಳು, ಫೋಟೋಗಳನ್ನು ಡಿಲಿಟ್ ಮಾಡದಿದ್ದರೆ, ಕೊಲೆ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದಾಗಿ ಸಂತ್ರಸ್ಥ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದಾಗ ಮನೆಯವರು ನನ್ನನ್ನು ರಕ್ಷಿಸಿದರು. ಆಗ ಎಲ್ಲಾ ವಿಚಾರವನ್ನು ಅವರಿಗೆ ಹೇಳಿದ್ದರಿಂದ ಸಂದೇಶ್ ನನ್ನು ಕರೆಸಿ, ವಿಚಾರಿಸಿದಾಗ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡರಲ್ಲದೆ, ವಿವಾಹ ವಾಗುವುದಾಗಿ ತಿಳಿಸಿದ್ದರು. ಆದರೆ ನಂತರದಲ್ಲಿ ನನ್ನ ಮೊಬೈಲ್ ಸಂಖ್ಯೆ ಯನ್ನು ಬ್ಲಾಕ್ ಮಾಡಿದರು. ವಿವಾಹವಾಗುವುದಾಗಿ ನಂಬಿಸಿ, ಮೋಸ ಮಾಡಿ ದರೆಂದು ಯುವತಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »