ಕುರುಬ ಸಮಾಜದ ನಾಲ್ವರಿಗೆ ಸಚಿವ ಸ್ಥಾನ: ಬಿಎಸ್‍ವೈ
ಮೈಸೂರು

ಕುರುಬ ಸಮಾಜದ ನಾಲ್ವರಿಗೆ ಸಚಿವ ಸ್ಥಾನ: ಬಿಎಸ್‍ವೈ

November 30, 2019

ರಾಣೇಬೆನ್ನೂರು (ಹಾವೇರಿ),ನ.29- ಉಪ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಕುರುಬ ಸಮಾಜದ ನಾಲ್ವರು ಶಾಸಕರು ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರದ ಮೆಡ್ಲೇರಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರಿ ಪರ ಪ್ರಚಾರ ಸಭೆ ನಡೆಸಿದ ಬಿಎಸ್‍ವೈ, ಈ ಘೋಷಣೆ ಮಾಡಿ ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟೀಕೆ ಮಾಡಲು ಹೋಗುವುದಿಲ್ಲ. 15 ಕ್ಷೇತ್ರಗಳಲ್ಲಿಯೂ ಗೆದ್ದು ಮೂರೂವರೆ ವರ್ಷ ಯಾವುದೇ ಪಕ್ಷದ ಬೆಂಬಲ, ಸಹಕಾರ ಇಲ್ಲದೆ ಸ್ವಂತ ಬಲದಿಂದಲೇ ಅಧಿಕಾರ ನಡೆಸುತ್ತೇವೆ ಎಂದರು.

Translate »