ಶತಮಾನ ಪೂರೈಸಿದ ಮೈಸೂರಿನ ಹಾಡ್ರ್ವಿಕ್ ಶಾಲೆ ಕಟ್ಟಡಕ್ಕೆ ಕಾಯಕಲ್ಪ
ಮೈಸೂರು

ಶತಮಾನ ಪೂರೈಸಿದ ಮೈಸೂರಿನ ಹಾಡ್ರ್ವಿಕ್ ಶಾಲೆ ಕಟ್ಟಡಕ್ಕೆ ಕಾಯಕಲ್ಪ

November 29, 2019

ಮೈಸೂರು,ನ.28(ಪಿಎಂ)- ಶತಮಾನ ಪೂರೈಸಿದ ಮೈಸೂರು ನಗರದ ಹಾಡ್ರ್ವಿಕ್ ಶಾಲೆ ಕಟ್ಟಡಕ್ಕೆ ಕಾಯಕಲ್ಪ ದೊರೆತಿದ್ದು, ದುರಸ್ತಿ ಹಾಗೂ ಪೇಂಟಿಂಗ್ ಮಾಡಿ ರುವ ಹಿನ್ನೆಲೆಯಲ್ಲಿ ಈ ಪಾರಂಪರಿಕ ಕಟ್ಟಡ ಆಕರ್ಷಿಸುತ್ತಿದೆ.

ಹಾಡ್ರ್ವಿಕ್ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ 164 ವರ್ಷಗಳನ್ನು ಪೂರೈಸಿದ ಹೆಗ್ಗಳಿಕೆ ಹೊಂದಿದೆ. 1854ರಲ್ಲಿ `ರಾಜಾ ಸ್ಕೂಲ್’ ಹೆಸರಿನಲ್ಲಿ ಕ್ರೈಸ್ತ ಮಿಷನರಿಗಳಿಂದ ಪ್ರಾರಂಭಗೊಂಡ ಶಾಲೆ ಇದಾಗಿದ್ದು, ಅಂದು ಮೈಸೂರು ಮಹಾರಾಜರ ಪ್ರೋತ್ಸಾಹದಿಂದ ರಾಜಾ ಸ್ಕೂಲ್ ಪ್ರಾರಂಭಗೊಂಡಿತು.

ಆರಂಭದಲ್ಲಿ ಮೈಸೂರಿನ ಗಾಂಧಿ ಚೌಕ ದಲ್ಲಿದ್ದ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವ ಹಿಸಿದ ಶಾಲೆಯು ಕ್ರಮೇಣ 1930ರಲ್ಲಿ ಪ್ರಸ್ತುತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇದೀಗ ಈ ಶಾಲೆಯಲ್ಲಿ ಹಿಂದುಳಿದ ವರ್ಗ, ಆರ್ಥಿಕ ದುರ್ಬಲರು ಹಾಗೂ ಸಾಮಾಜಿಕವಾಗಿ ಹಿಂದುಳಿದವರೇ ಹೆಚ್ಚಾಗಿ ವ್ಯಾಸಂಗ ಮಾಡು ತ್ತಿದ್ದಾರೆ. ಅನೇಕ ಮಹನೀಯರು ಒಂದು ಕಾಲದಲ್ಲಿ ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು, ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಇದೇ ಸಂಸ್ಥೆಯಲ್ಲಿ 8ರಿಂದ 10ನೇ ತರಗತಿವರೆಗೆ ಓದಿದ್ದಾರೆ. ಅಲ್ಲದೆ, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡು ವಾಗಲೇ ಕುವೆಂಪು ಇಂಗ್ಲಿಷ್‍ನಲ್ಲಿ ತಮ್ಮ ಮೊದಲ ಕವಿತೆ ರಚಿಸಿದ್ದರು ಎಂಬುದು ಮಹತ್ವದ ಸಂಗತಿ.

ಚಲನಚಿತ್ರ ನಿರ್ದೇಶಕರಾಗಿ ವಿಭಿನ್ನ ಸಿನಿಮಾ ನಿರ್ಮಿಸಿದ ಪುಟ್ಟಣ್ಣ ಕಣಗಾಲ್, ಶ್ರೇಷ್ಠ ಲೇಖಕ ಎ.ಎನ್.ಮೂರ್ತಿರಾವ್, ಪತ್ರಿಕಾರಂಗದಲ್ಲಿ ವಿಶಿಷ್ಟ ಛಾಪು ಮೂಡಿ ಸಿದ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಸೇರಿದಂತೆ ಹತ್ತು ಹಲವು ಮಹನೀಯರು ಈ ಶಾಲೆ ವಿದ್ಯಾರ್ಥಿಗಳಾಗಿದ್ದವರು. `ನಾಗ ರಿಕ ಉಪಯೋಗಿ ಕಟ್ಟಡ ಶೈಲಿಯಲ್ಲಿ ನಿರ್ಮಾಣಗೊಂಡ ಕಟ್ಟಡ ಇದು. ಸುಣ್ಣ ಗಾರೆ, ಇಟ್ಟಿಗೆ, ಮರ ಹಾಗೂ ಹಂಚು ಬಳಕೆಯಾಗಿರುವ ಪ್ರಮುಖ ಸಾಮಗ್ರಿಗಳು’ ಎನ್ನುತ್ತಾರೆ ಜಿಲ್ಲಾ ಪರಂಪರೆ ತಜ್ಞರ ಸಮಿತಿ ಸದಸ್ಯ ಡಾ.ಎನ್.ಎಸ್.ರಂಗರಾಜು.

ಪೇಂಟಿಂಗ್: 2011-12 ಮತ್ತು 2012- 13ನೇ ಸಾಲಿನ ಎಂ.ಕೆ.ಸೋಮಶೇಖರ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಹಾಗೂ ಪೇಂಟಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆಯಡಿ ಕಳೆದ ಒಂದು ವರ್ಷದಿಂದೀಚೆಗೆ ಕಾಮ ಗಾರಿ ಆರಂಭಿಸಿದ್ದ ನಿರ್ಮಿತಿ ಕೇಂದ್ರ ಇದೀಗ ಪೂರ್ಣಗೊಳಿಸಿದೆ.

ಸಿಎಸ್‍ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಆಡಳಿತದಲ್ಲಿ ಸರ್ಕಾರಿ ಅನು ದಾನಿತ ಶಾಲೆಯಾಗಿ ಹಾಡ್ರ್ವಿಕ್ ಪ್ರಾಥ ಮಿಕ ಹಾಗೂ ಪ್ರೌಢಶಾಲೆ ಮುನ್ನಡೆಯು ತ್ತಿದೆ. ಆಂಗ್ಲ ಮಾಧ್ಯಮ ಪೂರ್ವ ಪ್ರಾಥ ಮಿಕದಿಂದ 7ನೇ ತರಗತಿವರೆಗೆ ಆರಂಭ ಗೊಂಡು 4 ದಶಕಗಳು ಪೂರ್ಣಗೊಳ್ಳು ತ್ತಿವೆ. ಇಲ್ಲಿನ ಪದವಿಪೂರ್ವ ಕಾಲೇಜು 2 ದಶಕ ಪೂರ್ಣಗೊಳಿಸಿದ್ದರೆ, ಪ್ರಥಮ ದರ್ಜೆ ಕಾಲೇಜು ದಶಕ ಪೂರೈಸಿದೆ. ಈ ಎರಡೂ ಕಾಲೇಜುಗಳು ದಕ್ಷಿಣ ಸಭಾ ಪ್ರಾಂತದಿಂದ ಖಾಸಗಿಯಾಗಿ ನಡೆಯುತ್ತಿವೆ. `ಹಾಡ್ರ್ವಿಕ್ ಶಾಲೆ 1ರಿಂದ 10ನೇ ತರಗತಿವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎರಡನ್ನೂ ಹೊಂದಿದೆ. ಶಾಲೆ ಯಲ್ಲಿ 24 ಕೊಠಡಿಗಳು ಹಾಗೂ 2 ಸಭಾಂಗಣವಿದ್ದು, 5 ಎಕರೆ ಪ್ರದೇಶದ ಆವರಣವನ್ನು ಶಾಲೆ ಹೊಂದಿದೆ. ಶಾಲೆಯಲ್ಲಿ 260 ಮಕ್ಕಳು ವ್ಯಾಸಂಗ ಮಾಡುತ್ತಿ ದ್ದಾರೆ’ ಎನ್ನುತ್ತಾರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗುರುಭಕ್ತಯ್ಯ.

Translate »