ಸಿನಿಮಾ ನೋಡುತ್ತಿದ್ದಾಗಲೇ ಸಾವನ್ನಪ್ಪಿದ್ದ!
ಮೈಸೂರು

ಸಿನಿಮಾ ನೋಡುತ್ತಿದ್ದಾಗಲೇ ಸಾವನ್ನಪ್ಪಿದ್ದ!

November 26, 2019

ಮೈಸೂರು, ನ.25(ಆರ್‍ಕೆ)- ಸಿನಿಮಾ ನೋಡುತ್ತಿದ್ದಾಗಲೇ ಅಪರಿಚಿತ ವ್ಯಕ್ತಿ ಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಪ್ರಭಾ ಚಿತ್ರಮಂದಿರದಲ್ಲಿ ಇಂದು ಸಂಜೆ ನಡೆದಿದೆ. ಸುಮಾರು 40ರಿಂದ 45 ವರ್ಷ ವಯಸ್ಸು, ಸಾಧಾರಣ ಮೈಕಟ್ಟು ಹೊಂದಿರುವ ವ್ಯಕ್ತಿಯ ಎಡಗೈ ಮೇಲೆ ‘ಬೋರೇಗೌಡ’ ಎಂಬ ಅಚ್ಚೆ ಇದೆ ಎಂದು ದೇವರಾಜ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಮ್ಯಾಟನಿ ಶೋಗೆ ಹೋಗಿದ್ದ ಅವರು ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ವೀಕ್ಷಿಸುತ್ತಿದ್ದರು. ಸಂಜೆ 4.15 ಗಂಟೆಗೆ ಸಿನಿಮಾ ಬಿಟ್ಟು ಜನರೆಲ್ಲಾ ಹೋದ ಮೇಲೆ ಸ್ವಚ್ಛ ಮಾಡಲೆಂದು ಸಿಬ್ಬಂದಿ ಹೋದಾಗ ಕುರ್ಚಿಯಲ್ಲೇ ಕುಸಿದು ವ್ಯಕ್ತಿ ಮೃತಪಟ್ಟಿದ್ದುದು ತಿಳಿಯಿತು ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ದೇವರಾಜ ಠಾಣೆ ಸಬ್‍ಇನ್‍ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದು, ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದರು. ವಾರಸುದಾರರಿದ್ದಲ್ಲಿ ದೇವರಾಜ ಠಾಣೆ (0821-2418306) ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ(0821-2418339) ಸಂಪರ್ಕಿಸಬೇಕೆಂದು ಸಬ್‍ಇನ್‍ಸ್ಪೆಕ್ಟರ್ ರಾಜು ಅವರು ತಿಳಿಸಿದ್ದಾರೆ.

Translate »