ಅಯೋಧ್ಯೆ ತೀರ್ಪಿನ ಬಳಿಕ ದೇಶದ ಜನತೆ ಏಕತೆಯ ಮನೋಭಾವ ತೋರಿಸಿದ್ದು ಶ್ಲಾಘನೀಯ
ಮೈಸೂರು

ಅಯೋಧ್ಯೆ ತೀರ್ಪಿನ ಬಳಿಕ ದೇಶದ ಜನತೆ ಏಕತೆಯ ಮನೋಭಾವ ತೋರಿಸಿದ್ದು ಶ್ಲಾಘನೀಯ

November 25, 2019

ನವದೆಹಲಿ, ನ. 24- ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತಿಂಗಳ ಕೊನೆಯ ಭಾನುವಾರ ನಡೆಸಿ ಕೊಡುವ ಜನಪ್ರಿಯ ರೇಡಿಯೋ ಕಾರ್ಯ ಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದರು.

ಅವರ ಭಾಷಣದ ಮುಖ್ಯಾಂಶಗಳು: ಅಯೋಧ್ಯೆ ಭೂ ವಿವಾದ ಕೇಸ್‍ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ದೇಶದ ಜನತೆ ತೋರಿಸಿದ ತಾಳ್ಮೆ, ಸಹನೆ, ಪ್ರಬುದ್ಧತೆ ಯನ್ನು ನೋಡಿದಾಗ ಜನರಿಗೆ ದೇಶದ ಹಿತಾಸಕ್ತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಸಾಬೀತಾಗಿದೆ. ಐತಿಹಾಸಿಕ ತೀರ್ಪಿನ ಬಳಿಕ ದೇಶ ಹೊಸ ದಾರಿ ಮತ್ತು ಹೊಸ ಪರಿಹಾರದ ಕಡೆಗೆ ಮುಖ ಮಾಡಿದೆ. ಸಮಸ್ಯೆಗಳಿಗೆ ಪರಿಹಾರ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಗೆ ದಾರಿಮಾಡಿಕೊಟ್ಟಿದೆ. ನವ ಭಾರತ ಈ ಭಾವನೆಯನ್ನು ಅನುಕರಿ ಸುತ್ತದೆ ಮತ್ತು ಉತ್ಸಾಹದಿಂದ ಮುಂದಕ್ಕೆ ಹೋಗುತ್ತದೆ. ಸುಪ್ರೀಂಕೋರ್ಟ್‍ನ ತೀರ್ಪನ್ನು ಎಲ್ಲರೂ ಮುಕ್ತವಾಗಿ ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಟ್‍ನ ತೀರ್ಪಿನ ಬಳಿಕ ಶತಮಾನ ಗಳ ಕಾನೂನು ಹೋರಾಟ ಮುಗಿದಿದ್ದರೆ ಇನ್ನೊಂದೆಡೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಮತ್ತು ಗೌರವ ಹೆಚ್ಚಾಗಿದೆ. ಇಂದಿನ ಜನಾಂಗದವರಲ್ಲಿ ದೈಹಿಕ ಮತ್ತು ಮಾನಸಿಕ ಕ್ಷಮತೆ ಮತ್ತು ಆರೋಗ್ಯ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಫಿಟ್ ಇಂಡಿಯಾ ಸಹ್ತಾಹವನ್ನು ಎಲ್ಲಾ ಶಾಲೆಗಳು ಆಚರಿಸಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಹೆಚ್ಚಿಸಲು ಒತ್ತು ನೀಡಿ. ಮಕ್ಕಳು ಹೆಚ್ಚೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ, ಕ್ರೀಡೆಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮನೆಯಲ್ಲಿ ಪೆÇೀಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಪೆÇ್ರೀತ್ಸಾಹಿಸಿ, ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಯುವಜನತೆಯಲ್ಲಿ ಆರೋಗ್ಯ ದೃಢತೆಯನ್ನು ಹೆಚ್ಚಿಸಲು ಸಿಬಿಎಸ್ ಇ ಅನುಸರಿಸುತ್ತಿರುವ ಅಭಿಯಾನವನ್ನು ಅವರು ಒತ್ತಿ ಹೇಳಿದರು. ದೇಶಾದ್ಯಂತ ಪ್ರತಿವರ್ಷ ನವೆಂಬರ್ ತಿಂಗಳ ಕೊನೆಯ ಭಾನುವಾರ ಎನ್‍ಸಿಸಿ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಸ್‍ಸಿಸಿ ಕೆಡೆಟ್‍ಗಳಿಗೆ ವಿಶೇಷವಾದ ಅಭಿನಂದನೆ ಸಲ್ಲಿಸಿದ ಪ್ರಧಾನಿ ಎನ್ ಸಿಸಿಯಲ್ಲಿ ತೊಡಗಿಸಿಕೊಂಡಿರುವ ಯುವಜನತೆಯ ಜೊತೆ ಮಾತನಾಡಿದ್ದಾರೆ. ಅವರಲ್ಲಿ ಓರ್ವ ಎನ್‍ಸಿಸಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ತಮ್ಮ ಶಾಲಾ ದಿನಗಳಲ್ಲಿನ ಎನ್ ಸಿಸಿ ಅನುಭವ ಹಂಚಿಕೊಂಡರು. ದೇಶದ ಐಕ್ಯತೆ, ಏಕತೆ ಮತ್ತು ಉತ್ತಮ ಭವಿಷ್ಯ ರೂಪಿಸುವಲ್ಲಿ ಎನ್‍ಸಿಸಿ ಪಾತ್ರ ಬಹಳ ಮುಖ್ಯವಾಗಿದೆ. ಅಲ್ಲದೆ ಶಾರೀರಿಕ ಮತ್ತು ಮಾನಸಿಕ ದೃಢತೆಯನ್ನು ಯುವ ಜನತೆಯಲ್ಲಿ ಹೆಚ್ಚಿಸುವಲ್ಲಿ ಕೂಡ ಎನ್ ಸಿಸಿ ಪಾತ್ರ ಮುಖ್ಯವಾಗಿದೆ. ಹಿಮಾ ಲಯಕ್ಕೆ ಹೋಗುವುದು ನನಗೆ ಬಹಳ ಇಷ್ಟವಾಗಿತ್ತು. ಯಾರಾದರೂ ಪ್ರಕೃತಿಯನ್ನು ಇಷ್ಟಪಡುತ್ತಿದ್ದರೆ ಅವರು ಭಾರತದ ಈಶಾನ್ಯ ಭಾಗಕ್ಕೆ ಹೋಗಿ ಅಲ್ಲಿಂದ ಪ್ರಕೃತಿ ಸೌಂದರ್ಯ ವನ್ನು ಸವಿಯಬೇಕು. ಸೇನಾಪಡೆಯ ಧ್ವಜ ದಿನಾಚರಣೆ ಅತ್ಯಂತ ಮುಖ್ಯವಾದುದು. ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರು ಮತ್ತು ಸಿಬ್ಬಂದಿಗಳ ಯೋಗಕ್ಷೇಮ ಮತ್ತು ಕಲ್ಯಾಣಕ್ಕೆ ಭಾರತೀಯರಾದ ನಾವೆಲ್ಲರೂ ಕೊಡುಗೆ ನೀಡೋಣ.

Translate »