ಉದ್ಯಾನ್ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಿಸಲು ಸಂಸದ ಪ್ರತಾಪ್ ಸಿಂಹ ಮನವಿ
ಮೈಸೂರು

ಉದ್ಯಾನ್ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಿಸಲು ಸಂಸದ ಪ್ರತಾಪ್ ಸಿಂಹ ಮನವಿ

November 22, 2019

ಮೈಸೂರು, ನ.21- ಬೆಂಗಳೂರು-ಮುಂಬೈ ನಡುವಿರುವ ಉದ್ಯಾನ್ ಎಕ್ಸ್‍ಪ್ರೆಸ್ ರೈಲು ಸಂಚಾರವನ್ನು ಮೈಸೂ ರಿಗೆ ವಿಸ್ತರಿಸುವಂತೆ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ, ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದಾರೆ.

ಮೈಸೂರಿನ ಪ್ರವಾಸೋದ್ಯ ಮಕ್ಕೆ ಪೂರಕವಾಗಿ ಹಾಗೂ ಭಕ್ತಾಧಿಗಳಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಉದ್ಯಾನ್ ಎಕ್ಸ್‍ಪ್ರೆಸ್ ಸಂಚಾರ ವಿಸ್ತರಣೆ ಅಗತ್ಯವಾಗಿದೆ. ಬೆಂಗಳೂರಿನಿಂದ ಗುಂಟ್ಕಲ್, ಮಂತ್ರಾಲಯ, ರಾಯಚೂರು, ಕಲಬುರ್ಗಿ, ಸೋಲಾಪುರ, ಪುಣೆ ಮಾರ್ಗ ವಾಗಿ ಮುಂಬೈಗೆ ಸಂಚರಿಸುವ ಉದ್ಯಾನ್ ಎಕ್ಸ್‍ಪ್ರೆಸ್ ರೈಲು ಮೈಸೂರಿಗೆ ಬರುವುದರಿಂದ ಇಲ್ಲಿಂದ ಮಂತ್ರಾಲಯಕ್ಕೆ ತೆರಳುವ ಭಕ್ತರಿಗೆ ತುಂಬಾ ಅನುಕೂಲವಾಗುತ್ತದೆ. ಈಗಾಗಲೇ ಬೆಂಗಳೂರು-ಕಾಚಿಗೂಡ, ಬೆಂಗಳೂರು-ಕೋಚುವೆಲ್ಲಿ ರೈಲುಗಳನ್ನು ವಿಸ್ತರಿಸಿರುವಂತೆ ಉದ್ಯಾನ್ ಎಕ್ಸ್‍ಪ್ರೆಸ್ ರೈಲು ವಿಸ್ತರಣೆಗೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹೆಚ್ಚುವರಿ ಬೋಗಿ: ಮೈಸೂರು-ಬೆಂಗಳೂರು ಮೆಮು ರೈಲಿಗೆ ನಾಲ್ಕು ಹೆಚ್ಚುವರಿ ಬೋಗಿ ಜೋಡಿಸಲು ಸಚಿವ ಸುರೇಶ್ ಅಂಗಡಿ ಆದೇಶಿಸಿದ್ದಾರೆ. ಸಂಜೆ ವೇಳೆ ಬೆಂಗ ಳೂರಿನಿಂದ ಮೈಸೂರಿಗೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸಂಜೆ 5.20ಕ್ಕೆ ಬೆಂಗಳೂರಿನಿಂದ ಹೊರಡುವ ಮೆಮೂ ರೈಲಿಗೆ ಹೆಚ್ಚುವರಿ ಬೋಗಿ ಅಳ ವಡಿಸಲು ಸೂಚಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ಕೂಡಲೇ ಸ್ಪಂದಿಸಿದ ಸಚಿವರು ನಾಲ್ಕು ಬೋಗಿ ಅಳವಡಿಕೆಗೆ ಸೂಚನೆ ನೀಡಿದ್ದಾರೆ.

Translate »