ಒಟ್ಟಾವಾ, ನ.21- ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೊಸದಾಗಿ ವಿಸ್ತರಿಸಿದ ತಮ್ಮ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ಅನಿತಾ ಇಂದಿರಾ ಆನಂದ್ ಅವರಿಗೆ ಸಚಿವ ಸ್ಥಾನ ಕಲ್ಪಿಸಿದ್ದಾರೆ. ಕೆನಡಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡ ಮೊದಲ ಹಿಂದೂ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಇಂದಿರಾ ಆನಂದ್ ಪಾತ್ರರಾಗಿದ್ದಾರೆ. ಅವರು, ಇತ್ತೀಚೆಗೆ ಕೆನಡಾ ಸಂಸತ್ತಿಗೆ ಆಯ್ಕೆಯಾಗಿ ದ್ದರು. ಇನ್ನು ಕೆನಡಾ ಸಂಪುಟದಲ್ಲಿ ಇನ್ನೂ ಮೂವರು ಇಂಡೋ -ಕೆನಡಿಯನ್ ಮಂತ್ರಿಗಳು ಇದ್ದು ಅವರೆಲ್ಲಾ ಸಿಖ್ಖ್ ಧರ್ಮೀಯರಾಗಿ ದ್ದಾರೆ. ಅಕ್ಟೋಬರ್‍ನಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಮೊದಲ ಬಾರಿಗೆ ಹೌಸ್ ಆಫ್ ಕಾಮನ್‍ಗೆ ಆಯ್ಕೆಯಾದ ಅನಿತಾ ಇಂದಿರಾ ಆನಂದ್ ಅವರನ್ನು ಸಾರ್ವಜನಿಕ ಸೇವೆ ಮತ್ತು ಖರೀದಿ ಸಚಿವರಾಗಿ ನೇಮಿಸಲಾಗಿದೆ. ಒಂಟಾರಿಯೊದ ಓಕ್ವಿಲ್ಲೆ ಕ್ಷೇತ್ರದಿಂದ ಅನಿತಾ ಆಯ್ಕೆಯಾಗಿದ್ದಾರೆ. ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾ ಪಕಿಯಾಗಿರುವ ಅನಿತಾ ನೋವಾ ಸ್ಕಾಟಿಯಾ ಪ್ರಾಂತ್ಯದ ಕೆಂಟ್ವಿಲ್ಲೆ ಪಟ್ಟಣದಲ್ಲಿ ಜನಿಸಿದ್ದರು. ಈಕೆಯ ಪೆÇೀಷಕರು ಭಾರತೀಯ ಮೂಲದವರಾಗಿದ್ದು ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ಆಕೆಯ ತಾಯಿ ದಿ. ಸರೋಜ್ ರಾಮ್ ಪಂಜಾಬಿನ ಅಮೃತಸರ್ ಪ್ರದೇಶದವರಾಗಿದ್ದರೆ, ತಂದೆ ತಮಿಳುನಾಡಿನ ಮೂಲದವರು. ನಾಲ್ಕು ಮಕ್ಕಳ ತಾಯಿಯಾದ ಅನಿತಾ ಇಂದಿರಾ ಆನಂದ್ ಓಕ್ವಿಲ್ಲೆ ಪ್ರದೇಶದ ಇಂಡೋ-ಕೆನಡಿಯನ್ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಮತ್ತು ಕೆನಡಿಯನ್ ಮ್ಯೂಸಿಯಂ ಆಫ್ ಹಿಂದೂ ಸಿವಿಲಿಜೇಷನ್ಸ್‍ನ ಮಾಜಿ ಅಧ್ಯಕ್ಷರಾಗಿದ್ದರು.