ಮೈಸೂರು,ನ.20(ಪಿಎಂ)-ಸದ್ಭಾವನೆ, ನೈತಿಕತೆ ಹಾಗೂ ವ್ಯಸನ ಮುಕ್ತಿಯ ಮಹತ್ವ ಸಾರಲು ಭಾರತದ 20 ರಾಜ್ಯಗಳೂ ಸೇರಿ ದಂತೆ ಮೂರು ದೇಶಗಳಲ್ಲಿ ಹಮ್ಮಿಕೊಂಡಿ ರುವ ತೇರಾಪಂಥ್ ಧರ್ಮ ಸಂಘದ 11ನೇ ಆಚಾರ್ಯ, ಜೈನಮುನಿ ಶ್ರೀಮಹಾ ಶ್ರಮಣಜೀ ಅವರ ಕಾಲ್ನಡಿಗೆಯ ಅಹಿಂಸಾ ಯಾತ್ರೆ ಬುಧವಾರ ಮೈಸೂರು ನಗರದಲ್ಲಿ ಸಂಚರಿಸಿ, ಶಾಂತಿ-ಸಹ ಬಾಳ್ವೆಯ ಸಂದೇಶ ಪಸರಿಸಿತು. ಮೈಸೂರಿನ ಬನ್ನಿಮಂಟಪದ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಆವರಣದಿಂದ ತಮ್ಮ ಸಹವರ್ತಿ ಸಾಧು-ಸಾಧ್ವಿಯರೊಂದಿಗೆ ಜೈನಮುನಿ ಶ್ರೀಮಹಾಶ್ರಮಣಜೀ ಪಾದ ಯಾತ್ರೆ ಆರಂಭಿಸಿದರು. ಇವರೊಂದಿಗೆ ಸಾವಿರಾರು ಮಂದಿ ಜೈನ ಸಮುದಾಯದ…
ನಂಜನಗೂಡು ಕೆಎಸ್‍ಆರ್‍ಟಿಸಿ ಘಟಕವನ್ನು ಮೈಸೂರು ಗ್ರಾಮಾಂತರ ವಿಭಾಗಕ್ಕೆ ವರ್ಗಾಯಿಸಲು ತನ್ವೀರ್ ಸೇಠ್ ಮನವಿ
November 21, 2019ಮೈಸೂರು, ನ.20- ನಂಜನಗೂಡು ಕೆಎಸ್‍ಆರ್‍ಟಿಸಿ ಘಟಕವು ಹಾಲಿ ಚಾಮರಾಜ ನಗರ ವಿಭಾಗಕ್ಕೆ ಸೇರಿದ್ದು, ಈ ಘಟಕವನ್ನು ಮೈಸೂರು ಗ್ರಾಮಾಂ ತರ ವಿಭಾಗಕ್ಕೆ ವರ್ಗಾಯಿಸಬೇಕೆಂದು ಉಪ ಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ತನ್ವೀರ್ ಸೇಠ್ ಮಾರಣಾಂತಿಕ ಹಲ್ಲೆಗೊಳಗಾಗುವ ಮುನ್ನಾ ದಿನ (ನ.17) ಸಚಿವರಿಗೆ ಈ ಪತ್ರ ಬರೆದಿದ್ದು, ನಂಜನಗೂಡು, ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ(ಮುಡಾ) ವ್ಯಾಪ್ತಿಗೆ ಸೇರಿದ್ದು, ಪಟ್ಟಣದ ಅಭಿವೃದ್ಧಿ ಮುಡಾ ದಿಂದಲೇ ನಡೆಯುತ್ತಿದೆ. ನಂಜನಗೂಡು ತಾಲೂಕು…
ಬಡವರ ಹಿತ ಕಾಯುವ ಚಿಟ್ ಫಂಡ್ಸ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು
November 21, 2019ನವದೆಹಲಿ: ಚಿಟ್ ಫಂಡ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಬಡವರು, ಮತ್ತು ಮಧ್ಯಮ ವರ್ಗದ ಹಿತಾಸಕ್ತಿ ಕಾಪಾಡುವ 2019ರ ಚಿಟ್ ಫಂಡ್ಸ್ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಬುಧವಾರ ಧ್ವನಿ ಮತದಿಂದ ಅಂಗೀಕರಿಸಿದೆ. ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವ ಅನುರಾಗ್ ಠಾಕೂರ್, ಬಡವರ ಹಿತ ಮತ್ತು ಅವರು ಮೋಸ ಹೋಗದಂತೆ ತಡೆಯುವುದೇ ಈ ಮಸೂದೆಯ ಉದ್ದೇಶವಾಗಿದೆ ಎಂದರು. ಮುಂಬರುವ ವರ್ಷದಲ್ಲಿ 15000ಕ್ಕೂ ಹೆಚ್ಚು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದರು. ಹೆಚ್ಚಿನ ಬಡ್ಡಿ ಆಸೆಗೆ…
ಕಾರು, ಬೈಕ್ ಕಳವು: ಖದೀಮನ ಬಂಧನ
November 21, 2019ಮೈಸೂರು, ನ.20(ಎಂಕೆ)- ಎರಡು ಸ್ಕೋಡಾ ಕಾರು ಹಾಗೂ ಮೂರು ಬೈಕ್ ಕಳ್ಳತನ ಮಾಡಿದ್ದ ಖದೀಮನನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಲಕ್ಷ್ಮೀಪುರಂನ ಟ್ಯಾಟೋ ಕೆಲಸ ಮಾಡುವ ಕೃಷ್ಣ (24) ಬಂಧಿತ ಆರೋಪಿ. ಈತ ಮಂಗಳವಾರ ಸಂಜೆ ಈದ್ಗಾ ಮೈದಾ ನದ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ರಾಯಲ್ ಎನ್‍ಫೀಲ್ಡ್ ಬೈಕ್ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ವಿಚಾರಣೆ ಮಾಡಿದಾಗ ತನ್ನ ಬಳಿಯಿದ್ದ ಬೈಕ್ ಅನ್ನು ಮಂಚೇಗೌಡನಕೊಪ್ಪಲಿನಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ….
ಗಣ್ಯರಿಂದ ತನ್ವೀರ್ ಸೇಠ್ ಆರೋಗ್ಯ ವಿಚಾರಣೆ
November 19, 2019ಮೈಸೂರು, ನ. 18(ಆರ್‍ಕೆ,ಎಂಕೆ)- ತೀವ್ರ ಹಲ್ಲೆಗೊಳಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಸುತ್ತೂರು ಶ್ರೀಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಮುಂಜಾನೆ 4 ಗಂಟೆ ವೇಳೆಗೆ ಮಾಜಿ ಸಚಿವ ಯು.ಟಿ. ಖಾದರ್ ಭೇಟಿ ನೀಡಿ ತನ್ವೀರ್, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಸಚಿವ ಶ್ರೀರಾಮುಲು, ಶಾಸಕರಾದ ಜಿ.ಟಿ.ದೇವೇಗೌಡ, ಪುಟ್ಟ ರಂಗ ಶೆಟ್ಟಿ, ಎಲ್.ನಾಗೇಂದ್ರ, ಸಂಸದ…
ಅಗತ್ಯವಿದ್ದರೆ ಏರ್ ಲಿಫ್ಟ್ ವ್ಯವಸ್ಥೆಗೆ ಸಿದ್ಧ: ಸಚಿವ ಸೋಮಣ್ಣ
November 19, 2019ತನ್ವೀರ್ ಸೇಠ್ ಅವರನ್ನು ಏರ್ ಲಿಫ್ಟ್ ಮೂಲಕ ದೇಶದ ಯಾವುದೇ ಆಸ್ಪ ತ್ರೆಗೆ ಬೇಕಾದರೂ ದಾಖಲಿ ಸಲು ಸರ್ಕಾರ ಸಿದ್ಧವಿದೆ. ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು. ಆಸ್ಪತ್ರೆಯ ವೈದ್ಯಕೀಯ ಸೇವೆ ಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ, ತಜ್ಞ ವೈದ್ಯರಾದ ಮಕ್ಸೂದ್ ಹಾಗೂ ದತ್ತಾತ್ರಿ ಅವರು ಸಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸದೇ ಇದ್ದಿದ್ದರೆ ತನ್ವೀರ್‍ಸೇಠ್ ಬದುಕುಳಿಯುವುದು ಕಷ್ಟವಾಗು ತ್ತಿತ್ತು. ದೇವರ ದಯೆ ಯಾವುದೇ ಅಪಾಯವಿಲ್ಲ ಎಂದು ಸೋಮಣ್ಣ ತಿಳಿಸಿದರು….
ತನ್ವೀರ್ ಮೇಲಿನ ಹಲ್ಲೆಗೆ ಎಸ್‍ಡಿಪಿಐ ಖಂಡನೆ: ಸಿದ್ದರಾಮಯ್ಯ ಹೇಳಿಕೆಗೆ ಅಬ್ದುಲ್ ಮಜೀದ್ ಬೇಸರ
November 19, 2019ಮೈಸೂರು, ನ.18- ಮಾಜಿ ಸಚಿವ, ಶಾಸಕರಾದ ತನ್ವೀರ್ ಸೇಠ್ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿರುವುದು ಆಘಾತಕಾರಿ ಘಟನೆಯಾಗಿದ್ದು, ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ. ಒಬ್ಬ ಜನಪ್ರತಿನಿಧಿಯ ಮೇಲೆ ನೂರಾರು ಜನರ ಸಮ್ಮುಖದಲ್ಲೇ ಈ ರೀತಿ ಹಲ್ಲೆ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಲ್ಲೆ ನಡೆಸಿರುವ ಆರೋಪಿಯನ್ನು ಈಗಾಗಲೇ ಪೆÇಲೀಸರು ಬಂಧಿಸಿದ್ದು, ಘಟನೆಯ ಹಿಂದಿರುವ ಉದ್ದೇಶವನ್ನು ಬಯಲಿಗೆಳೆದು ಸಮಗ್ರ ತನಿಖೆ ನಡೆಸುವಂತೆ…
ಇಲ್ಲಿ ತಂದೆ ಜೊತೆ ಮಗಳು! ಅಲ್ಲಿ ಪತಿಗೆ ಪ್ರತಿಸ್ಪರ್ಧಿಯಾದ ಪತ್ನಿ!!
November 19, 2019ಬೆಂಗಳೂರು/ಹಾವೇರಿ,ನ.18- ಚುನಾವಣಾ ಅಭ್ಯರ್ಥಿಗಳು ಮುನ್ನೆಚ್ಚರಿಕೆಯಾಗಿ ತಮ್ಮ ಕುಟುಂಬಸ್ಥರಿಂದ ಪ್ರತ್ಯೇಕವಾಗಿ ನಾಮಿನೇಷನ್ ಮಾಡಿದ್ದಾರೆ. ಹಿರೇಕೆರೂರಿನಲ್ಲಿ ತಂದೆಗಾಗಿ ಮಗಳು, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಪತಿಗಾಗಿ ಪತ್ನಿ ಮತ್ತು ಗೋಕಾಕ್‍ನಲ್ಲಿ ತಮ್ಮನಿ ಗಾಗಿ ಅಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೊದಲು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ತಂದೆಯ ಬಳಿಕ ಸೃಷ್ಟಿ ಅವರು ಸಹ ನಾಮಿನೇಷನ್ ಫೈಲ್ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಯ…
ಕನ್ನಡ ಕರುಳಿನ ಭಾಷೆಯಾಗಬೇಕು: ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ
November 19, 2019ಮೈಸೂರು, ನ.18(ಎಸ್‍ಪಿಎನ್)-ಕನ್ನಡ ಕೊರ ಳಿನ ಭಾಷೆಯಾಗಬಾರದು, ಬದಲಾಗಿ ಕರುಳಿನ ಭಾಷೆಯಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕಸಾಪ ಮತ್ತು ಹೊಯ್ಸಳ ಕನ್ನಡ ಸಂಘ ಸಹಯೋಗದೊಂ ದಿಗೆ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವ ಹಾಗೂ ಸರ್.ಎಂ.ವಿಶ್ವೇಶರಯ್ಯ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ವಿದೆ. ಕನ್ನಡ ಭಾಷೆ ಅಭಿವೃದ್ಧಿಗೆ ನಾಡಿನ ಹಿರಿಯ ರಾದ…
ಐಸಿಯುನಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದನೆ
November 19, 2019ಮುಂಬೈ, ನ.18- ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ಮೂಲ ಗಳಿಂದ ತಿಳಿದುಬಂದಿದೆ. ಕಳೆದ ವಾರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 90 ವರ್ಷದ ಲತಾ ಮಂಗೇಶ್ಕರ್ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿ ಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ. ಭಾನು ವಾರ ರಾತ್ರಿಯವರೆಗೂ ಅವರನ್ನು ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಆದರೆ, ಈಗಲೂ ವೆಂಟಿಲೇಟರ್‍ನಲ್ಲಿಯೇ ಇದ್ದಾರೆಯೇ ಎಂಬುದು…










