ಕನ್ನಡ ಕರುಳಿನ ಭಾಷೆಯಾಗಬೇಕು: ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ
ಮೈಸೂರು

ಕನ್ನಡ ಕರುಳಿನ ಭಾಷೆಯಾಗಬೇಕು: ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ

November 19, 2019

ಮೈಸೂರು, ನ.18(ಎಸ್‍ಪಿಎನ್)-ಕನ್ನಡ ಕೊರ ಳಿನ ಭಾಷೆಯಾಗಬಾರದು, ಬದಲಾಗಿ ಕರುಳಿನ ಭಾಷೆಯಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕಸಾಪ ಮತ್ತು ಹೊಯ್ಸಳ ಕನ್ನಡ ಸಂಘ ಸಹಯೋಗದೊಂ ದಿಗೆ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವ ಹಾಗೂ ಸರ್.ಎಂ.ವಿಶ್ವೇಶರಯ್ಯ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ವಿದೆ. ಕನ್ನಡ ಭಾಷೆ ಅಭಿವೃದ್ಧಿಗೆ ನಾಡಿನ ಹಿರಿಯ ರಾದ ಆಲೂರು ವೆಂಕಟರಾಯರು, ಗೋವಿಂದ ಪೈ, ಕುವೆಂಪು, ದ.ರಾ.ಬೇಂದ್ರೆ, ತಿನಂಶ್ರೀ ಸೇರಿದಂತೆ ಅನೇಕರು ನಾಡಿನ ನೆಲ-ಜಲ ಹಾಗೂ ನುಡಿ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ಇಂದಿನವರು ಬಳಸಿದರೆ ಕನ್ನಡ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ ಎಂದರು.

ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ಆಚರಣೆ ಕೇವಲ ತೋರಿಕೆಗಾಗಿ ಆಗಬಾರದು. ಈ ತಿಂಗಳಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾದ ಚಿಂತನ-ಮಂಥನ ನಡೆಯಬೇಕು. ರಾಜ್ಯೋತ್ಸವ ಕಾರ್ಯಕ್ರಮಗಳು ಕೊರ ಳಿನ ಭಾಷೆಯಾಗದೇ, ಕರುಳಿನ ಭಾಷಾ ಕಾರ್ಯಕ್ರಮ ವಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಕೆಲವರು ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ. ಅದನ್ನು ಉಳಿಸಿ-ಬೆಳ ಸಬೇಕು ಎಂದು ಭಾಷಣ ಮಾಡುತ್ತಾರೆ. ನಾನು ಈ ಮಾತನ್ನು ಸಂಪೂರ್ಣ ಅಲ್ಲಗೆಳೆಯುತ್ತೇನೆ. ಭಾಷೆ ಬೆಳ ವಣಿಗೆ ಬಗ್ಗೆ ಮಾತನಾಡುವ ಬದಲು ಅದನ್ನು ಬಳ ಸುವ ಬಗ್ಗೆ ಮತ್ತು ಕನ್ನಡ ಮಾತನಾಡುವವರಿಗೆ ಜೀವನ ಕಟ್ಟಿಕೊಳ್ಳುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ನವೆಂಬರ್ ತಿಂಗಳಲ್ಲಿ ಆಗಬೇಕು ಎಂದರು.

ಈ ವೇಳೆ ಮೈಸೂರು ವಿದ್ಯಾವರ್ಧಕ ಇಂಜಿನಿ ಯರ್ ಕಾಲೇಜು ಯಂತ್ರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎ.ಮೋಹನಕೃಷ್ಣ ಅವರಿಗೆ ಸರ್.ಎಂ.ವಿಶ್ವೇಶರಯ್ಯ ಸಾಧನಾ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಎನ್.ವಿ.ರಮೇಶ್, ಜಿ.ಪ್ರಭಾಕರ ಹೆಗ್ಗಂದೂರು, ಎಂ.ಎಸ್.ರಾಚಪ್ಪ, ಪ್ರಭುಸ್ವಾಮಿ, ನರಸಿಂಗ ರಾವ್, ಗಜಾನನ ಈಶ್ವರ ಹೆಗ್ಗಡೆ, ಆರ್.ಎ. ಕುಮಾರ್, ಎಂ.ಆರ್. ಆನಂದ, ಡಾ.ಕೆ.ಲೀಲಾ ಪ್ರಕಾಶ್, ಸಿಂಹ, ವಿದ್ಯಾವೆಂಕಟೇಶ್, ಲೋಕೇಶ್ ಕಲ್ಕುಣಿ ಸ್ವರಚಿತ ಕವನ ವಾಚನ ಮಾಡಿದರು.

ವೇದಿಕೆಯಲ್ಲಿ ಕನ್ನಡ ನಾಟಕ ಅಕಾಡೆಮಿ ವಿಶ್ರಾಂತ ರಿಜಿಸ್ಟ್ರಾರ್ ಎ.ಎಸ್.ನಾಗರಾಜ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಜಿಲ್ಲಾಧ್ಯಕ್ಷ ಎ.ಎಸ್.ಸತೀಶ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ರಂಗನಾಥ್ ಮೈಸೂರು ಉಪಸ್ಥಿತರಿದ್ದರು.

Translate »