ಐಸಿಯುನಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದನೆ
ಮೈಸೂರು

ಐಸಿಯುನಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದನೆ

November 19, 2019

ಮುಂಬೈ, ನ.18- ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ಮೂಲ ಗಳಿಂದ ತಿಳಿದುಬಂದಿದೆ. ಕಳೆದ ವಾರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 90 ವರ್ಷದ ಲತಾ ಮಂಗೇಶ್ಕರ್ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿರುವ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿ ಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ. ಭಾನು ವಾರ ರಾತ್ರಿಯವರೆಗೂ ಅವರನ್ನು ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಆದರೆ, ಈಗಲೂ ವೆಂಟಿಲೇಟರ್‍ನಲ್ಲಿಯೇ ಇದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಲತಾ ಮಂಗೇಶ್ಕರ್ ಅವರನ್ನು ಮನೆಗೆ ಕರೆದುಕೊಂಡು ಹೋಗಲು ವೈದ್ಯರಿಗಾಗಿ ಕಾಯಲಾಗುತ್ತಿದೆ ಎಂದು ಅವರ ತಂಗಿ ಉಷಾ ಮಂಗೇಶ್ಕರ್ ತಿಳಿಸಿದ್ದಾರೆ. ಈಗಲೂ ಆಸ್ಪತ್ರೆಯಲ್ಲಿರುವ ಲತಾ ಮಂಗೇಶ್ಕರ್ ಚೆನ್ನಾಗಿದ್ದಾರೆ. ವೈದ್ಯರು ಹೇಳಿದ ನಂತರ ಮನೆಗೆ ಕರೆದುಕೊಂಡು ಹೋಗಲಾಗುವುದು ಎಂದು ಉಷಾ ಮಂಗೇಶ್ಕರ್ ಹೇಳಿದ್ದಾರೆ.

Translate »