ಶಾಂತಿ-ಸಹಬಾಳ್ವೆಯ ಸಂದೇಶ ಸಾರಿದ ಜೈನಮುನಿ ಶ್ರೀಮಹಾಶ್ರಮಣಜೀ ಅಹಿಂಸಾ ಪಾದಯಾತ್ರೆ
ಮೈಸೂರು

ಶಾಂತಿ-ಸಹಬಾಳ್ವೆಯ ಸಂದೇಶ ಸಾರಿದ ಜೈನಮುನಿ ಶ್ರೀಮಹಾಶ್ರಮಣಜೀ ಅಹಿಂಸಾ ಪಾದಯಾತ್ರೆ

November 21, 2019

ಮೈಸೂರು,ನ.20(ಪಿಎಂ)-ಸದ್ಭಾವನೆ, ನೈತಿಕತೆ ಹಾಗೂ ವ್ಯಸನ ಮುಕ್ತಿಯ ಮಹತ್ವ ಸಾರಲು ಭಾರತದ 20 ರಾಜ್ಯಗಳೂ ಸೇರಿ ದಂತೆ ಮೂರು ದೇಶಗಳಲ್ಲಿ ಹಮ್ಮಿಕೊಂಡಿ ರುವ ತೇರಾಪಂಥ್ ಧರ್ಮ ಸಂಘದ 11ನೇ ಆಚಾರ್ಯ, ಜೈನಮುನಿ ಶ್ರೀಮಹಾ ಶ್ರಮಣಜೀ ಅವರ ಕಾಲ್ನಡಿಗೆಯ ಅಹಿಂಸಾ ಯಾತ್ರೆ ಬುಧವಾರ ಮೈಸೂರು ನಗರದಲ್ಲಿ ಸಂಚರಿಸಿ, ಶಾಂತಿ-ಸಹ ಬಾಳ್ವೆಯ ಸಂದೇಶ ಪಸರಿಸಿತು.

ಮೈಸೂರಿನ ಬನ್ನಿಮಂಟಪದ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಆವರಣದಿಂದ ತಮ್ಮ ಸಹವರ್ತಿ ಸಾಧು-ಸಾಧ್ವಿಯರೊಂದಿಗೆ ಜೈನಮುನಿ ಶ್ರೀಮಹಾಶ್ರಮಣಜೀ ಪಾದ ಯಾತ್ರೆ ಆರಂಭಿಸಿದರು. ಇವರೊಂದಿಗೆ ಸಾವಿರಾರು ಮಂದಿ ಜೈನ ಸಮುದಾಯದ ವಿದ್ಯಾರ್ಥಿಗಳು, ಯುವ ಜನರು, ಮಹಿಳೆ ಯರು ಹಾಗೂ ಪುರುಷರು ಸೇರಿದಂತೆ ಇನ್ನಿತರ ಸಮುದಾಯವರು ಹೆಜ್ಜೆ ಹಾಕಿ ಸಾಮರಸ್ಯದ ಸಂದೇಶ ಸಾರಿದರು.

ಬೆಂಗಳೂರು ರಸ್ತೆ ಮಾರ್ಗವಾಗಿ ಎಲ್‍ಐಸಿ ವೃತ್ತ, ಫೌಂಟೇನ್ ವೃತ್ತ ಮೂಲಕ ಅಶೋಕ ರಸ್ತೆಯ ಸಂತ ಫಿಲೋಮಿನಾ ಚರ್ಚ್ ಬಳಿಗೆ ಪಾದಯಾತ್ರೆ ತಲುಪಿತು. ಚರ್ಚ್‍ಗೆ ಭೇಟಿ ನೀಡಿದ ಶ್ರೀಮಹಾಶ್ರವಣ್‍ಜೀ, ಮೈಸೂರು ಬಿಷಪ್ ಡಾ.ಕೆ.ಎ.ವಿಲಿಯಂ ಅವರೊಂ ದಿಗೆ ಸಮಾಲೋಚನೆ ನಡೆಸಿದರು. ಬಳಿಕ ಬಿಷಪ್ ಅವರೂ ಪಾದಯಾತ್ರೆಯಲ್ಲಿ ಸಾಗಿದರು. ಈ ವೇಳೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸಹ ಹೆಜ್ಜೆ ಹಾಕಿದರು. ಅಶೋಕ ರಸ್ತೆಯಲ್ಲಿ ಮುಂದೆ ಸಾಗಿದ ಪಾದಯಾತ್ರೆಯು, ದೊಡ್ಡ ಗಡಿಯಾರ ವೃತ್ತ, ಚಾಮರಾಜ ಒಡೆಯರ್ ವೃತ್ತ ಮಾರ್ಗವಾಗಿ ಅರಮನೆ ಉತ್ತರ ದ್ವಾರದ ಮೂಲಕ ಅರಮನೆ ಆವರಣದಲ್ಲಿ ಸಾಗಿ ಇಟ್ಟಿಗೆಗೂಡು ಮಾರ್ಗವಾಗಿ ಸಿದ್ಧಾರ್ಥ ನಗರದ ಆದಿಶ್ವರ್ ವಾಟಿಕ್ ಅಪಾರ್ಟ್ ಮೆಂಟ್ ಆವರಣದಲ್ಲಿ ಅಂತ್ಯಗೊಂಡಿತು. ನಂತರ ಅಪಾರ್ಟ್‍ಮೆಂಟ್‍ನಲ್ಲಿರುವ ಸಭಾಂ ಗಣದಲ್ಲಿ ನಡೆದ ಧರ್ಮ ಸಭೆಯಲ್ಲಿ ಶ್ರೀಮಹಾ ಶ್ರವಣ್‍ಜೀ ಪ್ರವಚನ ನೀಡಿದರು.

ನಾಳೆ (ನ.21) ವಾಣಿವಿಲಾಸ ರಸ್ತೆಯ ತೇರಾಪಂಥ್ ಭವನದಿಂದ ಪಾದಯಾತ್ರೆ ಮುಂದುವರೆಸಲಿರುವ ಜೈನಮುನಿ ಶ್ರೀಮಹಾ ಶ್ರವಣ್‍ಜೀ, ಇಲವಾಲ ಬಳಿಯ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲ ಯಕ್ಕೆ ತಲುಪಲಿದ್ದಾರೆ. ಬಳಿಕ ಇಲ್ಲಿ ಬೆಳಿಗ್ಗೆ 11ಕ್ಕೆ ನಡೆಯುವ ಧರ್ಮ ಸಭೆಯಲ್ಲಿ ಶ್ರೀಮಹಾ ಶ್ರವಣ್‍ಜೀ ಪ್ರವಚನ ನೀಡಲಿದ್ದಾರೆ.

ಪಾದಯಾತ್ರೆ ಪ್ರವರ್ತಕ: ಅಹಿಂಸಾಯಾತ್ರೆಯ ಪ್ರವರ್ತಕ ಆಚಾರ್ಯ ಶ್ರೀಮಹಾ ಶ್ರಮಣ್ ಅವರು 1962ರಲ್ಲಿ ಮೇ 13ರಂದು ರಾಜ ಸ್ತಾನದ ಸರದಾರ ಶಹರ್‍ನಲ್ಲಿ ಜನ್ಮ ತಾಳಿ ದರು. 1974ರ ಮೇ 5ರಂದು ಜೈನಮುನಿ ಯಾಗಿ ದೀಕ್ಷೆ ಪಡೆದರು. ಬಳಿಕ ಅಣುವ್ರತ ಆಂದೋಲನದ ಪ್ರವರ್ತಕರಾದರು (ಜಾತಿ ವಾದ, ಕೋಮುಗಲಭೆ, ವರದಕ್ಷಿಣೆ, ವಂಚನೆ, ಹಿಂಸೆ ಸೇರಿದಂತೆ ಸಾಮಾಜಿಕ ಅನಿಷ್ಟಗಳ ನಿವಾರಣಾ ಆಂದೋಲನ). ಬಳಿಕ ತೇರಾ ಪಂಥ್ ಧರ್ಮ ಸಂಘದ 11ನೇ ಆಚಾರ್ಯ ರಾದರು. ಇದೀಗ ಅಹಿಂಸಾಯಾತ್ರೆಯ ಪ್ರವರ್ತಕರಾಗಿ ದೇಶದ ಉದ್ದಗಲಕ್ಕೂ ಪಾದ ಯಾತ್ರೆ ನಡೆಸುತ್ತಿರುವ ಇವರು, ನೇಪಾಳ, ಭೂತಾನ್ ದೇಶಗಳಲ್ಲೂ ಹೆಜ್ಜೆ ಹಾಕಿ, ಮತ್ತೆ ಭಾರತದಲ್ಲಿ ಪಾದಯಾತ್ರೆ ಮುಂದುವರೆಸಿ ದ್ದಾರೆ. ಆ ಮೂಲಕ 15 ಸಾವಿರಕ್ಕೂ ಅಧಿಕ ಕಿ.ಮೀ. ಪಾದಯಾತ್ರೆ ಗುರಿ ಹೊಂದಿದ್ದಾರೆ. ತೇರಾಪಂಥ್ ಸಭಾದ ಅಧ್ಯಕ್ಷ ಮಹೇಂದ್ರ ನಹರ್, ತೇರಾಪಂಥ್ ಯುವಕ್ ಪರಿಷದ್‍ನ ಅಧ್ಯಕ್ಷ ಮಹಾವೀರ್ ದೇರಾಶ್ರಿಯಾ ಸೇರಿ ದಂತೆ ಸುಮಾರು 4 ಸಾವಿರ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Translate »