ಮೈಸೂರು, ನ.14(ಆರ್‍ಕೆಬಿ)- ವಿಶ್ವ ಸಕ್ಕರೆ ಕಾಯಿಲೆ ದಿನಾಚರಣೆ ಅಂಗವಾಗಿ ಸುಯೋಗ್ ಆಸ್ಪತ್ರೆ, ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ವತಿಯಿಂದ ಗುರುವಾರ ಸಕ್ಕರೆ ಕಾಯಿಲೆ ವಿರುದ್ಧ ವಾಕಥಾನ್ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನೂರಾರು ಮಂದಿ ಭಾಗವಹಿ ಸಿದ್ದ ವಾಕಥಾನ್ ವಿವಿಧ ರಸ್ತೆಗಳಲ್ಲಿ ತೆರಳಿ, ಸಾರ್ವಜನಿ ಕರಿಗೆ ಸಕ್ಕರೆ ಕಾಯಿಲೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿತು. ನಂತರ ಸುಯೋಗ್ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ…
ಸರ್ಕಾರಿ ಸೌಲಭ್ಯ ಜನರಿಗೆ ತಲುಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಮೂಲ್ಯ
November 15, 2019ಮೈಸೂರು, ನ.14(ಆರ್‍ಕೆ)- ಸರ್ಕಾ ರದ ಸೌಲಭ್ಯಗಳನ್ನು ಜನರಿಗೆ ತಲುಪಿಸು ವಲ್ಲಿ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಗಳ ಪಾತ್ರ ಅತ್ಯಮೂಲ್ಯವಾದುದು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಜಿಲ್ಲಾ ಸಹಕಾರ ಯೂನಿಯನ್ ಸಭಾಂ ಗಣದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾ ಡಿದ ಅವರು, ರೈತರ ಸಾಲ, ಹಾಲು ಉತ್ಪಾದನೆ, ವಸತಿ, ನಿವೇಶನಗಳಂತಹ ವಿಷಯಗಳಲ್ಲಿ ಸಹಕಾರ ಕ್ಷೇತ್ರದ ಪಾತ್ರ ಅಮೂಲ್ಯವಾದುದು ಎಂದರು. ನಗರ…
6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್
November 15, 2019ಮೈಸೂರು, ನ.14(ಆರ್‍ಕೆ)- ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಲಿಫ್ಟ್ ಕಳೆದ 6 ತಿಂಗಳಿಂದ ಕೆಟ್ಟು ನಿಂತಿದೆ. ರಸ್ತೆ, ನೀರು, ಒಳಚರಂಡಿ, ಸ್ವಚ್ಛತೆ ಯಂತಹ ಮೂಲ ಸೌಕರ್ಯ ಒದಗಿಸಿ ಮೈಸೂರು ನಗರವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಪಾಲಿಕೆ ಅಧಿಕಾರಿಗಳು ಕರ್ತವ್ಯ ಮರೆತಿರುವುದರಿಂದ ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರು ಓಡಾಡಲು ಪರಿತಪಿಸುವಂತಾಗಿದೆ. ಹಲವು ಸೇವೆಗಳಿಗಾಗಿ ಬರುವ ಹಿರಿಯ ನಾಗರಿಕರು, ಅಂಗವಿಕ ಲರು, ಅಶಕ್ತರಿಗೆ ಮೊದಲ ಮಹಡಿಗೆ ಹೋಗಲು ಅನುಕೂಲವಾಗ ಲೆಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ…
ಇಬ್ಬರು ಜೇಬುಗಳ್ಳರು, ಮೂವರು ಗಾಂಜಾ ಮಾರಾಟಗಾರರ ಸೆರೆ
November 15, 2019ಮೈಸೂರು,ನ.14(ಆರ್‍ಕೆ)- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕುಖ್ಯಾತ ಜೇಬುಗಳ್ಳರು ಹಾಗೂ ಮೂವರು ಗಾಂಜಾ ಮಾರಾಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡು ತ್ತಿದ್ದ ಮೂವರನ್ನು ಬಂಧಿಸಿ, 4 ಕೆಜಿ 300 ಗ್ರಾಂ ಗಾಂಜಾ, 32 ಸಾವಿರ ರೂ. ನಗದು ಹಾಗೂ ಸ್ಕೂಟರ್ ವಶಪಡಿಸಿಕೊಂಡಿ ದ್ದಾರೆ. ಮಂಡಿ ಮೊಹಲ್ಲಾ ಕೆ.ಟಿ.ಸ್ಟ್ರೀಟ್ ನಿವಾಸಿ ಇಮ್ರಾನ್(39), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ನಿವಾಸಿ ಪುಟ್ಟೇಗೌಡ(44) ಹಾಗೂ ಲಷ್ಕರ್ ಮೊಹಲ್ಲಾ ನಿವಾಸಿ ಸೈಯ್ಯದ್ ಆಯೂಬ್ @ ಚಿಕ್ಕಪ್ಪ(60) ಬಂಧಿತರು. ಮಂಡಿ…
ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಿದ ಖತರ್ನಾಕ್ ಖದೀಮ
November 15, 2019ಅಚ್ಚರಿ ಸಂಗತಿ ಎಂದರೆ ದಂಪತಿ ಬದುಕಿದ್ದರೂ ಮರಣ ಹೊಂದಿರುವುದಾಗಿ ದಾಖಲೆ ಸೃಷ್ಟಿಸಿ ವಂಚನೆ ಮೈಸೂರು, ನ.14- ನಕಲಿ ದಾಖಲೆಗಳ ಸೃಷ್ಟಿಸಿ, ದಂಪತಿಗೆ ಸೇರಿದ ನಿವೇಶನವನ್ನು 25 ಲಕ್ಷ ರೂ.ಗೆ ಮಾರಾಟ ಮಾಡಿರುವ ಖತರ್ನಾಕ್ ವಿರುದ್ಧ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿ.ಎಸ್.ಕಾರ್ತಿಕ್ ವಿರುದ್ಧ ಜಿ.ಎಸ್.ರಾಮಪ್ರಿಯ ಎಂಬುವರು ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಜಿ.ಎಸ್.ರಾಮಪ್ರಿಯ ಹಾಗೂ ಶ್ರೀಮತಿ ಗೀತಪ್ರಿಯ ದಂಪತಿಯ ಪುತ್ರನೆಂದು ಹೇಳಿಕೊಂಡು ಆರೋಪಿ ಕಾರ್ತಿಕ್, ಹೆಬ್ಬಾಳ 1ನೇ ಹಂತದಲ್ಲಿರುವ ನಿವೇಶನ…
ಶಿಕ್ಷಣ ಇಲಾಖೆ ಕೇಸರೀಕರಣ ಮಾಡಲು ಬಿಜೆಪಿ ಹುನ್ನಾರ
November 15, 2019ಮೈಸೂರು, ನ.14(ಆರ್‍ಕೆಬಿ)- ಸಂವಿಧಾನ ದಿನದ ಅಂಗವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವ ರನ್ನು ಅವಮಾನಿಸಲಾಗಿದೆ. ಇದರ ಹಿಂದೆ ಸಂಘ ಪರಿವಾರದ ಕೈವಾಡವಿದೆ. ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಚಾಮ ರಾಜನಗರದ ಮಾಜಿ ಸಂಸದ ಆರ್.ಧ್ರುವ ನಾರಾಯಣ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಸಂವಿಧಾನ ದಿನದ ಅಂಗವಾಗಿ ಹೊರತಂದಿರುವ…
ಕೌಟಿಲ್ಯ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ: ಸಾಮಥ್ರ್ಯಾಧಾರಿತ ಮಕ್ಕಳ ವಿಶೇಷ ಪ್ರತಿಭೆ ಅನಾವರಣ
November 15, 2019ಮೈಸೂರು, ನ.14-ಮಕ್ಕಳನ್ನು ಸರಕುಗಳನ್ನಾಗಿ ಮಾಡದೇ, ಸಮಾಜದ ಸಂಪತ್ತನ್ನಾಗಿಸಬೇಕಿದೆ. ಅವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಬೇರೆ ಮಕ್ಕಳೊಂದಿಗೆ ತಾಳೆ ಹಾಕುವುದು ಸರಿಯಲ್ಲ ಎಂದು ಕೌಟಿಲ್ಯ ಶಾಲೆಯ ಪ್ರಾಂಶುಪಾಲೆ ಡಾ.ಎಲ್.ಸವಿತಾ ಅಭಿಪ್ರಾಯಪಟ್ಟರು. ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾ ಚರಣೆ ಕಾರ್ಯಕ್ರಮದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆÀ ಪುಷ್ಪಾರ್ಚನೆ ಮಾಡುವ ಮೂಲಕ ಅವರು ಕಾರ್ಯ ಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಣ ಎಂಬುದು ಸರಕಲ್ಲ. ಇವು ಸಮಾಜದ ಸ್ವಾಸ್ಥ್ಯ ಕಾಪಾ ಡುವ ಕೊಂಡಿಯಾಗಿವೆ. ಮಕ್ಕಳ ಹಕ್ಕುಗಳ…
ನಾಳೆ ಸುಧಾ ರಘುನಾಥನ್ ಸಂಗೀತ ಕಛೇರಿ
November 15, 2019ಮೈಸೂರು,ನ.14(ಆರ್‍ಕೆಬಿ)-ಗೀತಾ ಶಿಶು ಶಿಕ್ಷಣ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪೆÇ್ರ.ಬಿ.ಎಸ್.ಪಂಡಿತ್ ಸ್ಮರಣಾರ್ಥ ನ.16ರಂದು ಸಂಜೆ 6 ಗಂಟೆಗೆ ಕೆ.ಆರ್.ಎಸ್.ರಸ್ತೆಯ ಜಿಎಸ್‍ಎಸ್‍ಎಸ್‍ನ ರಂಗ ಮಂಟಪದಲ್ಲಿ `ಸರಸ್ವತಿ’ ಬಿ.ಎಸ್. ಪಂಡಿತ್ ಸ್ಮರಣ ಸಂಗೀತ ಕಛೇರಿ ಆಯೋಜಿ ಸಿದೆ ಎಂದು ಸಮಿತಿ ಮುಖ್ಯಸ್ಥ ಜಗನ್ನಾಥ್ ಶೆಣೈ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಅಂದು ಪದ್ಮಭೂಷಣ, ಸಂಗೀತ ಕಲಾನಿಧಿ ಸುಧಾ ರಘುನಾಥನ್ ಅವರ ಸಂಗೀತ ಕಛೇರಿ ನಡೆ ಯಲಿದ್ದು, ವಯಲಿನ್‍ನಲ್ಲಿ ಚಾರುಮತಿ ರಘುರಾಮನ್, ಮೃದಂಗದಲ್ಲಿ ಎನ್.ಸಿ.ಭಾರದ್ವಾಜ್, ಮೋರ್ಚಿಂಗ್‍ನಲ್ಲಿ ಆರ್.ರಾಮನ್…
ಕೇಂದ್ರ ಸರ್ಕಾರದ ವಿರುದ್ಧ ಮೈಸೂರಲ್ಲಿ ಕಾರ್ಯಕರ್ತರ ಪ್ರತಿಭಟನೆ
November 14, 2019ಮೈಸೂರು,ನ.13(ಆರ್‍ಕೆ)- ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಮೈಸೂರಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿಜೆ.ವಿಜಯ ಕುಮಾರ್ ಅವರ ನೇತೃತ್ವದಲ್ಲಿ ಮೈಸೂರಿನ ಗಾಂಧಿ ಸ್ಕ್ವೇರ್‍ನಲ್ಲಿ ನಡೆದ ಧರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದಾಗಿ ದೇಶದಾದ್ಯಂತ…
ನಾಳೆಯಿಂದ ಮೈಸೂರಲ್ಲಿ 2 ದಿನ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ
November 14, 2019ಮೈಸೂರು,ನ.13(ಆರ್‍ಕೆಬಿ)- ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ವತಿಯಿಂದ ಮೈಸೂರಿನಲ್ಲಿ ನ.15, 16 ರಂದು `ಹೃದಯ ಆರೈಕೆಗಾಗಿ ಯೋಗ’ ಕುರಿತಂತೆ 2 ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೇಂದ್ರದ ಆಯುಷ್ ಇಲಾಖೆ ನಿರ್ದೇಶಕ ವಿಕ್ರಮ್ ಸಿಂಗ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದ ಅವರು, ಮೈಸೂ ರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಆವರಣದಲ್ಲಿ ನಡೆಯುವ ಸಮ್ಮೇ ಳನದಲ್ಲಿ 15ಕ್ಕೂ ಹೆಚ್ಚು ದೇಶಗಳ ಹಾಗೂ ಭಾರತದ 700ಕ್ಕೂ…










