ಮೈಸೂರು

16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ
ಮೈಸೂರು

16 ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ

November 15, 2019

ಬೆಂಗಳೂರು, ನ.14(ಕೆಎಂಶಿ)- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ದಲ್ಲಿ ಕಮಲ ಸರ್ಕಾರವನ್ನು ರಾಜ್ಯದಲ್ಲಿ ಮರು ಸ್ಥಾಪಿಸಲು ಕಾರಣರಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅನರ್ಹಗೊಂಡ ಶಾಸಕರ ಪೈಕಿ 16 ಮಂದಿ ಇಂದು ವಿಧ್ಯುಕ್ತ ವಾಗಿ ಬಿಜೆಪಿ ಸೇರ್ಪಡೆಯಾದರು. ಪಕ್ಷದ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ನೂತನ ಸದಸ್ಯರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ನಂತರ ಮಾತನಾಡಿದ ಮುಖ್ಯಮಂತ್ರಿ…

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಮೈಸೂರು

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

November 15, 2019

ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಸಲ್ಲಿಸಿದ್ದ ಮರು ಪರಿ ಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಜತೆಗೆ ನ್ಯಾಯಾಂಗ ನಿಂದನೆ ದಾವೆಯಲ್ಲಿ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೂ ತರಾಟೆಗೆ ತೆಗೆದುಕೊಂಡಿದೆ. ಫ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಸುವುದರಲ್ಲಿ ಅಕ್ರಮ ನಡೆದಿದೆ. ಸುಪ್ರೀಂಕೋರ್ಟ್…

ಜಿ.ಡಿ.ಹರೀಶ್‍ಗೌಡರ ಸ್ಪರ್ಧೆಗೆ ಒತ್ತಾಯಿಸಿ ಜಿಟಿಡಿ ನಿವಾಸದ ಮುಂದೆ ಬೆಂಬಲಿಗರ ಧರಣಿ
ಮೈಸೂರು

ಜಿ.ಡಿ.ಹರೀಶ್‍ಗೌಡರ ಸ್ಪರ್ಧೆಗೆ ಒತ್ತಾಯಿಸಿ ಜಿಟಿಡಿ ನಿವಾಸದ ಮುಂದೆ ಬೆಂಬಲಿಗರ ಧರಣಿ

November 15, 2019

ಹುಣಸೂರು, ನ.14-ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿರುವ ಬೆನ್ನಲ್ಲೇ ಹುಣಸೂರಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಮಾಜಿ ಸಚಿವರೂ ಆದ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಹಾಗೂ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಜಿ.ಡಿ.ಹರೀಶ್ ಗೌಡರನ್ನು ಕಣಕ್ಕಿಳಿಸಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಹುಣಸೂರಿನ ಜಿ.ಟಿ.ದೇವೇಗೌಡರ ನಿವಾಸದಲ್ಲಿ ಅವರ ಅನುಪಸ್ಥಿತಿಯಲ್ಲಿ ಜಮಾಯಿ ಸಿದ್ದ ಸಾವಿರಾರು ಬೆಂಬಲಿಗರು, ಜಿಟಿಡಿ ಪುತ್ರ ಜಿ.ಡಿ. ಹರೀಶ್‍ಗೌಡ ಅವರನ್ನು ಉಪ ಚುನಾವಣೆಯಲ್ಲಿ ಸ್ಪರ್ಧೆ…

ಉಪ ಚುನಾವಣೆಗೆ 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಮೈಸೂರು

ಉಪ ಚುನಾವಣೆಗೆ 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ

November 15, 2019

ಬೆಂಗಳೂರು, ನ.14(ಕೆಎಂಶಿ)-ಉಪ ಚುನಾವಣೆ ನಡೆಯಲಿರುವ ವಿಧಾನ ಸಭೆಯ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರ ಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಯಲ್ಲಾಪುರ ಕ್ಷೇತ್ರಕ್ಕೆ ಎ. ಚೈತ್ರಾಗೌಡ, ಹಿರೇಕೆರೂರು-ಉಜೆನಪ್ಪ ಜಟ್ಟೆಪ್ಪ ಕೋಡಿಹಳ್ಳಿ, ರಾಣೆಬೆನ್ನೂರು-ಮಲ್ಲಿಕಾರ್ಜುನ ಹಲಗೇರಿ, ವಿಜಯ ನಗರ-ಎನ್.ಎಂ. ನಬಿ, ಚಿಕ್ಕಬಳ್ಳಾಪುರ-ಕೆ.ಪಿ.ಬಚ್ಚೇಗೌಡ, ಕೆ.ಆರ್.ಪುರಂ-ಸಿ.ಕೃಷ್ಣಮೂರ್ತಿ, ಯಶವಂತಪುರ-ಟಿ.ಎನ್. ಜವರಾಯಿಗೌಡ, ಶಿವಾಜಿನಗರ-ತನ್ವೀರ್ ಅಹಮ್ಮದ್ ವುಲ್ಲಾ, ಕೆ.ಆರ್.ಪೇಟೆ- ಬಿ.ಎಲ್.ದೇವರಾಜ್, ಹುಣಸೂರು-ಸೋಮಶೇಖರ್ ಅಭ್ಯರ್ಥಿಗಳಾಗಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಕುಟುಂಬದ ಕಡುವೈರಿ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ವಿರುದ್ಧ…

ಅಖಿಲ ಭಾರತ ಅಂಚೆ ಕ್ರೀಡಾಕೂಟದಲ್ಲಿ 220 ಸ್ಪರ್ಧಿಗಳು ಭಾಗಿ
ಮೈಸೂರು

ಅಖಿಲ ಭಾರತ ಅಂಚೆ ಕ್ರೀಡಾಕೂಟದಲ್ಲಿ 220 ಸ್ಪರ್ಧಿಗಳು ಭಾಗಿ

November 15, 2019

ಮೈಸೂರು,ನ.14(ಎಂಟಿವೈ)-ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಆರಂಭ ವಾದ ಮೂರು ದಿನಗಳ 34ನೇ `ಅಖಿಲ ಭಾರತ ಅಂಚೆ ಅಥ್ಲೆಟಿಕ್ಸ್ ಮತ್ತು ಸೈಕ್ಲಿಂಗ್’ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ 220ಕ್ಕೂ ಹೆಚ್ಚು ಕ್ರೀಡಾ ಪಟುಗಳು ಪಾಲ್ಗೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿಯ ಪ್ರದರ್ಶನ ನೀಡಿದರು. ಕರ್ನಾಟಕ ವೃತ್ತ ಅಂಚೆ ಕ್ರೀಡಾ ಮಂಡಳಿ (ಬೋರ್ಡ್) ಆಯೋಜಿಸಿದ್ದ 34ನೇ ಅಖಿಲ ಭಾರತ ಅಂಚೆ ಸೈಕ್ಲಿಂಗ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಇಂದು ಬೆಳಿಗ್ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು….

ರಫೇಲ್ ಪ್ರಕರಣ: ರಾಹುಲ್ ಗಾಂಧಿಗೆ ‘ಸುಪ್ರೀಂ’ ತರಾಟೆ!
ಮೈಸೂರು

ರಫೇಲ್ ಪ್ರಕರಣ: ರಾಹುಲ್ ಗಾಂಧಿಗೆ ‘ಸುಪ್ರೀಂ’ ತರಾಟೆ!

November 15, 2019

`ಮತ್ತೆ ತಪ್ಪು ಮರುಕಳಿಸದಂತೆ ಜಾಗ್ರತೆ ವಹಿಸಿ’ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ನವದೆಹಲಿ, ನ.14- ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಉಲ್ಲೇಖಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು `ಚೌಕಿದಾರ್ ಚೋರ್ ಹೈ’ ಎಂದು ಲೇವಡಿ ಮಾಡುತ್ತಿದ್ದ, ಅದಕ್ಕೆ ಸುಪ್ರೀಂ ಕೋರ್ಟ್ ಹೆಸರನ್ನೂ ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವೆ ವಾಕ್ಸಮರ, ಟೀಕಾ…

ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಯೋಗಾಭ್ಯಾಸ
ಮೈಸೂರು

ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಯೋಗಾಭ್ಯಾಸ

November 15, 2019

ಮೈಸೂರು, ನ.14(ಆರ್‍ಕೆಬಿ)- `ಹೃದ ಯದ ಆರೈಕೆಗಾಗಿ ಯೋಗ’ ವಿಷಯ ಕುರಿತು ನ.15ರಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಮೈಸೂರು ಅರ ಮನೆ ಅಂಗಳದಲ್ಲಿ ಗುರುವಾರ ಯೋಗಾ ಭ್ಯಾಸ ಕಾರ್ಯಕ್ರಮ ನಡೆಯಿತು. ನವದೆಹಲಿಯ ಮುರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಯೋಗದ 100 ಮಂದಿ ಸೇರಿದಂತೆ ಒಟ್ಟು 1800 ಮಂದಿ ಯೋಗಪಟುಗಳು ಪೂರ್ವಭಾವಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಯೋಗ ಶಿಷ್ಟಾ ಚಾರದ ಪ್ರಕಾರ ಪ್ರಾರ್ಥನೆ, ಚಾಲನಾ ಕ್ರಿಯೆ, ಕುಳಿತು ಮಾಡುವ ಆಸನಗಳು, ನಿಂತು ಮಾಡುವ ಆಸನಗಳು,…

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು

November 15, 2019

ಮೈಸೂರು, ನ.14(ಆರ್‍ಕೆ)- ಯಾದವಗಿರಿಯ ಪಾಲಿಕೆ ಆಯುಕ್ತರ ನಿವಾಸದೆದುರು ರಸ್ತೆಯಲ್ಲಿನ ಗುಂಡಿಗಳನ್ನು ಅಧಿಕಾರಿಗಳು ಕೊನೆಗೂ ಮುಚ್ಚಿಸಿದ್ದಾರೆ. ಕೆಆರ್‍ಎಸ್ ರಸ್ತೆ ಯಿಂದ ಯಾದವಗಿರಿಯಲ್ಲಿ ಎ.ರಾಮಣ್ಣ ಸರ್ಕಲ್‍ಗೆ ಹೋಗುವ ರಸ್ತೆಯಲ್ಲಿರುವ ವಾಣಿ ವಿಲಾಸ ವಾಟರ್‍ವಕ್ರ್ಸ್ ಪಕ್ಕದ ನಗರಪಾಲಿಕೆ ಆಯುಕ್ತರ ನಿವಾಸ(ಬಂಗಲೆ)ದ ಗೇಟ್ ಎದುರೇ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಪ್ರತೀ ದಿನ ಪಾಲಿಕೆ ಆಡಳಿತ ಮುಖ್ಯಸ್ಥರೂ ಆದ ಆಯುಕ್ತರು ಕಂಡರೂ, ಗುಂಡಿ ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ. ಸಾರ್ವಜನಿ ಕರು ಈ ಬಗ್ಗೆ ತೀವ್ರ ಟೀಕೆ ಮಾಡಿದ್ದರಲ್ಲದೆ, ಆಯುಕ್ತರ ಮನೆ ಮುಂದಿನ ಗುಂಡಿ ಮುಚ್ಚಲಾಗದ…

ವಿದ್ಯಾರ್ಥಿಗಳ ಓದಿನ ಆಸಕ್ತಿ ನುಂಗಿ ನೀರು ಕುಡಿಯುತ್ತಿರುವ ಮೊಬೈಲ್ ಹಾವಳಿ
ಮೈಸೂರು

ವಿದ್ಯಾರ್ಥಿಗಳ ಓದಿನ ಆಸಕ್ತಿ ನುಂಗಿ ನೀರು ಕುಡಿಯುತ್ತಿರುವ ಮೊಬೈಲ್ ಹಾವಳಿ

November 15, 2019

ಮೈಸೂರು, ನ.14(ಆರ್‍ಕೆಬಿ)- ಮೊಬೈಲ್ ಹಾವಳಿಯಿಂದಾಗಿ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾ ಹದ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವುದು ಉತ್ತಮ ಕೆಲಸ ಎಂದು ಮೇಯರ್ ಪುಷ್ಪ ಲತಾ ಜಗನ್ನಾಥ್ ತಿಳಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಜತೆಗೂಡಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಆಯೋ ಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ…

ಸಾವಿರಾರು ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಮೈಸೂರು ಅರಿವು
ಮೈಸೂರು

ಸಾವಿರಾರು ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಮೈಸೂರು ಅರಿವು

November 15, 2019

ಮೈಸೂರು,ನ.14(ಆರ್‍ಕೆ)- ಸಾಂಸ್ಕೃತಿಕ ನಗರಿ ಮೈಸೂರನ್ನು ಕಸಮುಕ್ತವಾಗಿಸಲು ಶಾಲಾ ಮಕ್ಕಳಿಗೆ ಪಾಲಿಕೆ ಅಧಿಕಾರಿಗಳು ಇಂದು ಜಾಗೃತಿ ಮೂಡಿಸಿದರು. ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ನಗರದಾದ್ಯಂತ ಸುಮಾರು 500 ಶಾಲೆಗಳ 20,000 ಮಕ್ಕಳು ಇಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಶ್ರಮದಾನ ಮಾಡಿ ಶಾಲಾ ಆವರಣ ಹಾಗೂ ಸುತ್ತ ಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿರ್ಮೂಲನೆ ಅರಿವು ಮೂಡಿಸಿದರು. ಮೈಸೂರು ಮಹಾನಗರ ಪಾಲಿಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ…

1 780 781 782 783 784 1,611
Translate »