ವಿದ್ಯಾರ್ಥಿಗಳ ಓದಿನ ಆಸಕ್ತಿ ನುಂಗಿ ನೀರು ಕುಡಿಯುತ್ತಿರುವ ಮೊಬೈಲ್ ಹಾವಳಿ
ಮೈಸೂರು

ವಿದ್ಯಾರ್ಥಿಗಳ ಓದಿನ ಆಸಕ್ತಿ ನುಂಗಿ ನೀರು ಕುಡಿಯುತ್ತಿರುವ ಮೊಬೈಲ್ ಹಾವಳಿ

November 15, 2019

ಮೈಸೂರು, ನ.14(ಆರ್‍ಕೆಬಿ)- ಮೊಬೈಲ್ ಹಾವಳಿಯಿಂದಾಗಿ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾ ಹದ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವುದು ಉತ್ತಮ ಕೆಲಸ ಎಂದು ಮೇಯರ್ ಪುಷ್ಪ ಲತಾ ಜಗನ್ನಾಥ್ ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಜತೆಗೂಡಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಆಯೋ ಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಹೆಚ್ಚಿನ ಗ್ರಂಥಾಲಯಗಳನ್ನು ತೆರೆಯಬೇಕು. ಗ್ರಂಥಾಲಯದ ಮಹತ್ವ ವನ್ನು ತಿಳಿಸಿಕೊಡುವುದು ಅವಶ್ಯ ಎಂದರು.

ಗ್ರಂಥಾಲಯ ಇಲಾಖೆಯ ಉಪ ನಿರ್ದೇ ಶಕ ಬಿ.ಮಂಜುನಾಥ್ ಮಾತನಾಡಿ, ಓದು ಗರನ್ನು ಗ್ರಂಥಾಲಯದತ್ತ ಸೆಳೆಯುವ ಉದ್ದೇಶ ದಿಂದ ಪ್ರತಿವರ್ಷ ನ.14ರಿಂದ 21ರವರೆಗೆ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ. ಗ್ರಂಥಾಲಯ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಆರ್. ರೇಖಾ (ಪ್ರಥಮ), ಕೆ.ಭರತ್ (ದ್ವಿತೀಯ), ಎಸ್.ಬಿಂಬಿತ (ತೃತೀಯ), ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂ.ಕಲ್ಪನಾ (ಪ್ರ), ಕೆ.ಭರತ್ (ದ್ವಿ), ಆರ್.ಎಸ್. ರೇಖಾ (ತೃ), ಚಿತ್ರಕಲೆ ಸ್ಪರ್ಧೆಯಲ್ಲಿ ಎನ್.ಅನುಷಾ (ಪ್ರ), ಸಹನಾ (ದ್ವಿ), ಆರ್.ಲಕ್ಷ್ಮೀ (ತೃ) ಬಹು ಮಾನ ಪಡೆದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿ ಕಾರಿ ಹೆಚ್.ಎನ್.ಪೂರ್ಣಿಮಾ, ಶಾಖಾ ಗ್ರಂಥಾಲಯ ಸಮಿತಿ ಅಧ್ಯಕ್ಷರೂ ಆಗಿರುವ ನಗರಪಾಲಿಕೆ ಸದಸ್ಯ ಆರ್. ನಾಗರಾಜು, ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ನಗರಪಾಲಿಕೆ ಸದಸ್ಯೆ ಹೆಚ್.ಎಂ.ಶಾಂತ ಕುಮಾರಿ, ವಿ.ರಮೇಶ್, ಜಿಲ್ಲಾ ಗ್ರಂಥಾಲಯ ಪ್ರಾಧಿ ಕಾರದ ಉಪಾಧ್ಯಕ್ಷ ಡಾ.ಸಿ.ಪಿ.ರಾಮಶೇಷ, ಬಿಇಓ ಉದಯಕುಮಾರ್, ಕನ್ನಡ ಹೋರಾಟಗಾರ ಮೂಗೂರು ನಂಜುಂಡ ಸ್ವಾಮಿ, ಪ್ರೊ.ಚಂದ್ರಶೇಖರ್, ಚನ್ನಪ್ಪ, ಸೋಮಶೇಖರ್, ವಿಜಯ್‍ನಾಗ್, ಪೂರ್ಣಿಮಾ ಸೇರಿದಂತೆ ಮೊದಲಾ ದವರು ಉಪಸ್ಥಿತರಿದ್ದರು.

Translate »