ಸಾವಿರಾರು ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಮೈಸೂರು ಅರಿವು
ಮೈಸೂರು

ಸಾವಿರಾರು ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ಮೈಸೂರು ಅರಿವು

November 15, 2019

ಮೈಸೂರು,ನ.14(ಆರ್‍ಕೆ)- ಸಾಂಸ್ಕೃತಿಕ ನಗರಿ ಮೈಸೂರನ್ನು ಕಸಮುಕ್ತವಾಗಿಸಲು ಶಾಲಾ ಮಕ್ಕಳಿಗೆ ಪಾಲಿಕೆ ಅಧಿಕಾರಿಗಳು ಇಂದು ಜಾಗೃತಿ ಮೂಡಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ನಗರದಾದ್ಯಂತ ಸುಮಾರು 500 ಶಾಲೆಗಳ 20,000 ಮಕ್ಕಳು ಇಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಶ್ರಮದಾನ ಮಾಡಿ ಶಾಲಾ ಆವರಣ ಹಾಗೂ ಸುತ್ತ ಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿರ್ಮೂಲನೆ ಅರಿವು ಮೂಡಿಸಿದರು.

ಮೈಸೂರು ಮಹಾನಗರ ಪಾಲಿಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ ಅವರು ಸುತ್ತೋಲೆ ಹೊರಡಿಸಿದ್ದರು. ಇದಕ್ಕೆ ಶಾಲೆಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಆಯಾ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಶ್ರಮದಾನ ನಡೆಸಿ ಪ್ಲಾಸ್ಟಿಕ್ ಮುಕ್ತ ಮೈಸೂರು ಯೋಜನೆಗೆ ಕೈಜೋಡಿಸಿದ್ದಾರೆ.

ಅದರ ಅಂಗವಾಗಿ ಮೈಸೂರಿನ ಕುವೆಂಪು ನಗರದ ವಿದ್ಯಾವರ್ಧಕ ಶಾಲೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನಾ ಅರಿವು ಕಾರ್ಯಕ್ರಮ ಏರ್ಪ ಡಿಸಲಾಗಿತ್ತು. ಸ್ವಚ್ಛತಾ ರಾಯಭಾರಿಯಾಗಿ ರುವ ರಾಜಮಾತೆ ಪ್ರಮೋದಾದೇವಿ ಒಡೆ ಯರ್ ಅವರು ಪಾಲ್ಗೊಂಡು, ಸ್ವಚ್ಛತೆ ಕಾಪಾ ಡುವ ಮೂಲಕ ಮೈಸೂರಿಗೆ ಮತ್ತೊಮ್ಮೆ ಪ್ರಥಮ ಸ್ವಚ್ಛ ನಗರಿ ಪ್ರತಿಷ್ಠೆಗೆ ಸಹಕರಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಚಿಕ್ಕ ವಯಸ್ಸಿನಿಂದಲೇ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ತ್ಯಜಿಸಲು ಮಕ್ಕಳಲ್ಲಿ ಅರಿವು ಮೂಡಿಸಿದರೆ, ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯ ಬಹುದು ಎಂದು ಅವರು ನುಡಿದರು.

ಶಾಲೆಯಲ್ಲಿ ಮಕ್ಕಳು ಏರ್ಪಡಿಸಿದ್ದ ಪ್ಲಾಸ್ಟಿಕ್ ರಹಿತ ಪ್ಲೇಟ್, ಟೂತ್ ಬ್ರಷ್, ಇನ್ನಿತರ ಗೃಹ ಬಳಕೆ ವಸ್ತು ಪ್ರದರ್ಶನ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಸಿಪೆಟ್ ಸಂಸ್ಥೆಯಿಂದ ಆಯೋಜಿ ಸಿದ್ದ ಪ್ಲಾಸ್ಟಿಕ್ ಮರುಬಳಕೆಯಿಂದ ತಯಾ ರಿಸಿದ ಇಂಟರ್ ಲಾಕಿಂಗ್ ಪೇವ್ಸ್ ಮತ್ತು ಚೇರ್ ಇತ್ಯಾದಿಗಳ ವಸ್ತು ಪ್ರದರ್ಶನವನ್ನು ಪ್ರಮೋದಾದೇವಿ ಒಡೆಯರ್ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ವೇಳೆ ನಗರಪಾಲಿಕೆ ಆರೋಗ್ಯ ವಿಭಾಗದಿಂದ ಏರ್ಪಡಿಸಿದ್ದ ಬಿಳಿ ಪುಗ್ಗ, ಕಲರ್ ಪುಗ್ಗ ಹಾಲಿನ ಕವರ್, ಮಾತ್ರೆ ಕವರ್, ಪ್ಲಾಸ್ಟಿಕ್ ಚಪ್ಪಲಿ, ಗಟ್ಟಿ ಸಿಲ್ವರ್, ಸಿಡಿ ಕ್ಯಾಸೆಟ್, ಗಾಜಿನ ಬಾಟಲಿಗಳು, ಟೂತ್ ಪೇಸ್ಟ್, ನೀರಿನ ಲೋಟ, ಬಿಸ್ಲರಿ ಬಾಟಲ್, ಬಲ್ಬ್‍ಗಳು, ಆಯಿಲ್ ಕವರ್‍ಗಳನ್ನು ಬೇರ್ಪಡಿಸುವ ವಿಧಾನದ ವಸ್ತುಪ್ರದರ್ಶನ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಎಲ್‍ಇಡಿ ಪರದೆ ಯುಳ್ಳ ವಾಹನದ ಮೊಬೈಲ್ ವಾಹನ ವನ್ನೂ ರಾಜಮಾತೆ ವೀಕ್ಷಿಸಿದರು.

ವಿದ್ಯಾವರ್ಧಕ ಶಾಲೆಯಲ್ಲಿ ಏರ್ಪಡಿ ಸಿದ್ದ ಸ್ವಚ್ಛತಾ ಜಾಗೃತಿ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರಕೃತಿ ಮುತ್ತಪ್ಪ, ಆರ್. ಮಾನಸ, ಎಂ.ಎ. ಅನನ್ಯ ಬಿ.ಎ., ಜಾಹ್ನವಿ, ಸಂತಾನರಾವ್, ಯಶೋಧ್ಯ ಆರಾಧ್ಯ ಹಾಗೂ ಎ. ವೇದಾಗೆ ಪ್ರಮೋದಾದೇವಿ ಒಡೆಯರ್ ಬಹುಮಾನಗಳನ್ನು ವಿತರಿಸಿದರು.

ಸ್ವಚ್ಛ ಭಾರತದೆಡೆಗೆ ನಮ್ಮ ನಡಿಗೆ ಕುರಿ ತಂತೆ ಬೀದಿ ನಾಟಕ ಪ್ರದರ್ಶಿಸಿದ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಹಾಗೂ ಸಮೂಹ ಗೀತೆ ಮೂಲಕ ಜಾಗೃತಿ ಮೂಡಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಡಿಡಿಪಿಐ ಪಾಂಡುರಂಗ, ಎಡಿಸಿ ಶಶಿಕುಮಾರ್, ಶಿವಾನಂದಮೂರ್ತಿ, ಆರೋಗ್ಯಾಧಿಕಾರಿ ಗಳಾದ ಡಾ.ಜಯಂತ್, ಡಾ. ನಾಗ ರಾಜ್, ಬಿಇಓ ಶಿವಕುಮಾರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ವಚ್ಛತಾ ರಾಯಭಾರಿಗಳಾದ ಖುಷಿ, ಇಶಾನ್, ಐಓಸಿಯ ಮಾಥೂರ್, ಆನಂದ ಮೂರ್ತಿ, ವಿದ್ಯಾವರ್ಧಕ ಶಾಲೆಯ ಆಡ ಳಿತಾಧಿಕಾರಿ ಉಮಾ ಅಣ್ಣಯ್ಯ ಸೇರಿ ದಂತೆ ಹಲವರು ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಐಓಸಿಯಿಂದ ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ 1,03,000 ಚೀಲ ಗಳನ್ನು ಇದೇ ವೇಳೆ ವಿತರಿಸಲಾಯಿತು.

Translate »