ಸುಯೋಗ್ ಆಸ್ಪತ್ರೆ ವತಿಯಿಂದ ಸಕ್ಕರೆ ಕಾಯಿಲೆ ವಿರುದ್ಧ ವಾಕಥಾನ್
ಮೈಸೂರು

ಸುಯೋಗ್ ಆಸ್ಪತ್ರೆ ವತಿಯಿಂದ ಸಕ್ಕರೆ ಕಾಯಿಲೆ ವಿರುದ್ಧ ವಾಕಥಾನ್

November 15, 2019

ಮೈಸೂರು, ನ.14(ಆರ್‍ಕೆಬಿ)- ವಿಶ್ವ ಸಕ್ಕರೆ ಕಾಯಿಲೆ ದಿನಾಚರಣೆ ಅಂಗವಾಗಿ ಸುಯೋಗ್ ಆಸ್ಪತ್ರೆ, ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ವತಿಯಿಂದ ಗುರುವಾರ ಸಕ್ಕರೆ ಕಾಯಿಲೆ ವಿರುದ್ಧ ವಾಕಥಾನ್ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನೂರಾರು ಮಂದಿ ಭಾಗವಹಿ ಸಿದ್ದ ವಾಕಥಾನ್ ವಿವಿಧ ರಸ್ತೆಗಳಲ್ಲಿ ತೆರಳಿ, ಸಾರ್ವಜನಿ ಕರಿಗೆ ಸಕ್ಕರೆ ಕಾಯಿಲೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿತು. ನಂತರ ಸುಯೋಗ್ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ `ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಪಾಲಿಸಬೇಕಾದ ಆಹಾರ ನಿಯಮಗಳು’ ಕುರಿತು ಡಾ.ಎಸ್.ಪಿ.ಯೋಗಣ್ಣ ಉಪನ್ಯಾಸ ನೀಡಿದರು. ಸಮತೋಲನ ಆಹಾರ ಸೇವನೆ ಸಕ್ಕರೆ ಕಾಯಿಲೆಯ ನಿಯಂ ತ್ರಣಕ್ಕೆ ಅತೀ ಮುಖ್ಯ. ಅಕ್ಕಿ, ಗೋಧಿ, ನವಣೆ, ರಾಗಿಯನ್ನು ಪ್ರತಿನಿತ್ಯ ಉಪಯೋಗಿಸಬಹುದು, ಅತೀ ನಾರಿನಂಶ ಇರುವ ಆಹಾರ ಪಧಾರ್ಥಗಳಾದ ತರಕಾರಿ, ಸೊಪ್ಪು, ಹಣ್ಣು ಗಳನ್ನು ಹೆಚ್ಚು ಬಳಸಬೇಕು. ಹೆಚ್ಚು ನೀರು ಕುಡಿಯಬೇಕು ಎಂದರು. ಸಂವಾದ ಕಾರ್ಯಕ್ರಮದಲ್ಲಿ ಸಕ್ಕರೆ ಕಾಯಿಲೆಯ ರೋಗಿಗಳಿಗಿದ್ದ ಅನುಮಾನಗಳ ಕುರಿತು ತಜ್ಞ ವೈದ್ಯರು ಮಾಹಿತಿ ನೀಡಿದರು. ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್ ಅಧ್ಯಕ್ಷ ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಶಿವ ಕುಮಾರ್, ಆಹಾರ ತಜ್ಞೆ ಅಕ್ಷತಾ, ಕ್ಲಬ್‍ನ ಕಾರ್ಯಾಧ್ಯಕ್ಷ ಎಚ್.ಎಸ್.ರಮೇಶ್‍ಚಂದ್ರ ಇತರರು ಉಪಸ್ಥಿತರಿದ್ದರು.

Translate »