ಸರ್ಕಾರಿ ಸೌಲಭ್ಯ ಜನರಿಗೆ ತಲುಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಮೂಲ್ಯ
ಮೈಸೂರು

ಸರ್ಕಾರಿ ಸೌಲಭ್ಯ ಜನರಿಗೆ ತಲುಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಮೂಲ್ಯ

November 15, 2019

ಮೈಸೂರು, ನ.14(ಆರ್‍ಕೆ)- ಸರ್ಕಾ ರದ ಸೌಲಭ್ಯಗಳನ್ನು ಜನರಿಗೆ ತಲುಪಿಸು ವಲ್ಲಿ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಗಳ ಪಾತ್ರ ಅತ್ಯಮೂಲ್ಯವಾದುದು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಜಿಲ್ಲಾ ಸಹಕಾರ ಯೂನಿಯನ್ ಸಭಾಂ ಗಣದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾ ಡಿದ ಅವರು, ರೈತರ ಸಾಲ, ಹಾಲು ಉತ್ಪಾದನೆ, ವಸತಿ, ನಿವೇಶನಗಳಂತಹ ವಿಷಯಗಳಲ್ಲಿ ಸಹಕಾರ ಕ್ಷೇತ್ರದ ಪಾತ್ರ ಅಮೂಲ್ಯವಾದುದು ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಸಹ ಕಾರ ಸಂಘಗಳಲ್ಲಿ ಕೆಲಸ ಮಾಡುವವರು ಪ್ರಾಮಾಣಿಕರಾಗಿರಬೇಕು. ಇಡೀ ಏಷ್ಯಾ ಖಂಡದಲ್ಲೇ ಭಾರತ ದೇಶದ ಸಹಕಾರ ಕ್ಷೇತ್ರ ಪ್ರಬಲವಾಗಿ ಬೆಳೆದಿದೆ. ಸಿದ್ದನಗೌಡ ರಾಮನ ಗೌಡ ಪಾಟೀಲರ ಕೊಡುಗೆಯೂ ಅದರಲ್ಲಿ ಅಪಾರವಾದುದು ಎಂದು ಸ್ಮರಿಸಿದರು.

ನ.20ರಂದು ಮೈಸೂರಿನ ಮುಕ್ತ ವಿವಿ ಸಭಾಂಗಣದಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದ್ದು, ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಸಹ ಕಾರಿ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಇದೇ ವೇಳೆ ನುಡಿದರು.

ಇದೇ ವೇಳೆ ಡಿ.ಈರೇಶ್ ನಗರ್ಲೆ ಸಂಪಾ ದಕತ್ವದಲ್ಲಿ ಹೊರತಂದಿರುವ ‘ಸಹಕಾರ ಜ್ಯೋತಿ’ ಪತ್ರಿಕೆಯ 4ನೇ ಸಂಚಿಕೆಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಬಿ.ಎನ್.ಸದಾ ನಂದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಸಿಇಒ ಡಿ.ಬಿ.ಲಿಂಗ ಣ್ಣಯ್ಯ, ನಿರ್ದೇಶಕ ಚಿಕ್ಕಳ್ಳಿ ಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Translate »