ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು

November 15, 2019

ಮೈಸೂರು, ನ.14(ಆರ್‍ಕೆ)- ಯಾದವಗಿರಿಯ ಪಾಲಿಕೆ ಆಯುಕ್ತರ ನಿವಾಸದೆದುರು ರಸ್ತೆಯಲ್ಲಿನ ಗುಂಡಿಗಳನ್ನು ಅಧಿಕಾರಿಗಳು ಕೊನೆಗೂ ಮುಚ್ಚಿಸಿದ್ದಾರೆ. ಕೆಆರ್‍ಎಸ್ ರಸ್ತೆ ಯಿಂದ ಯಾದವಗಿರಿಯಲ್ಲಿ ಎ.ರಾಮಣ್ಣ ಸರ್ಕಲ್‍ಗೆ ಹೋಗುವ ರಸ್ತೆಯಲ್ಲಿರುವ ವಾಣಿ ವಿಲಾಸ ವಾಟರ್‍ವಕ್ರ್ಸ್ ಪಕ್ಕದ ನಗರಪಾಲಿಕೆ ಆಯುಕ್ತರ ನಿವಾಸ(ಬಂಗಲೆ)ದ ಗೇಟ್ ಎದುರೇ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಪ್ರತೀ ದಿನ ಪಾಲಿಕೆ ಆಡಳಿತ ಮುಖ್ಯಸ್ಥರೂ ಆದ ಆಯುಕ್ತರು ಕಂಡರೂ, ಗುಂಡಿ ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ. ಸಾರ್ವಜನಿ ಕರು ಈ ಬಗ್ಗೆ ತೀವ್ರ ಟೀಕೆ ಮಾಡಿದ್ದರಲ್ಲದೆ, ಆಯುಕ್ತರ ಮನೆ ಮುಂದಿನ ಗುಂಡಿ ಮುಚ್ಚಲಾಗದ ಪಾಲಿಕೆ ಅಧಿಕಾರಿಗಳು, ಮೈಸೂರು ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ರಿಪೇರಿ ಮಾಡುವರೇ ಎಂದು ಪ್ರಶ್ನಿಸಿದರು. ಈ ಬಗ್ಗೆ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ಗಳಲ್ಲಿ ಚಿತ್ರ ಸಮೇತ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ವಲ ಯಾಧಿಕಾರಿ ಪ್ರಿಯದರ್ಶಿನಿ ಹಾಗೂ ಅಭಿವೃದ್ಧಿ ಅಧಿಕಾರಿ ಸುನೀಲ್, ಬುಧವಾರ ಸಿಮೆಂಟ್ ಕಾಂಕ್ರಿಟ್‍ನಿಂದ ಗುಂಡಿ ಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿದ್ದಾರೆ. ಆ ಮಾರ್ಗ ನೀರಿನ ಟ್ಯಾಂಕರ್‍ಗಳು ಹೆಚ್ಚಾಗಿ ಓಡಾಡುತ್ತಿರುವುದರಿಂದ ಪದೇ ಪದೆ ರಸ್ತೆಯ ಡಾಂಬರ್ ಕಿತ್ತು ಬಂದು ಗುಂಡಿಗಳಾಗುತ್ತವೆ. ಆದ್ದರಿಂದ ಅಲ್ಲಿಗೆ ಸಿಮೆಂಟ್ ಕಾಂಕ್ರಿಟ್ ರಸ್ತೆ ಮಾಡಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಿದ್ದೇವೆ ಎಂದು ಪ್ರಿಯದರ್ಶಿನಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »